ನವದೆಹಲಿ:ವಿಡಿಯೋಕಾನ್​-ಐಸಿಐಸಿಐ ಬ್ಯಾಂಕ್​ ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್​ ಅವರ ಪತಿ ದೀಪಕ್​ ಕೊಚ್ಚಾರ್​ರನ್ನು ಇಂದು ಜಾರಿ ನಿರ್ದೇಶನಾಲಯ ಬಂಧಿಸಿದೆ.ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೀಪಕ್​ ವಿರುದ್ಧ ದೃಢವಾದ ಸಾಕ್ಷಿಗಳು ಸಿಕ್ಕ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ವಿಚಾರಣೆಯ ವೇಳೆ ದೀಪಕ್ ಕೊಚ್ಚಾರ್​​ಗೆ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಕೆಲವು ವಹಿವಾಟುಗಳ ಬಗ್ಗೆ ಕೇಳಿದಾಗ ಅವರಿಗೆ ಸಮರ್ಥವಾಗಿ ವಿವರಣೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.ಇದನ್ನೂ ಓದಿ:VIDEO: ‘ರೇಪ್ ಕೇಸ್​​’ ಬೆದರಿಕೆ ಒಡ್ಡಿದ್ದ ಸಂಗೀತಾಗೆ ಡ್ರಗ್​ ಪೆಡ್ಲರ್​ ರಾಹುಲ್​ ಸಖತ್ ಕ್ಲೋಸ್​!; ಫೋಟೋಗಳು ವೈರಲ್
ಚಂದಾ ಕೊಚ್ಚರ್​ ಐಸಿಐಸಿಐ ಬ್ಯಾಂಕ್​​ನ ಸಿಇಒ ಆಗಿದ್ದಾಗ 2009-2011ರ ಅವಧಿಯಲ್ಲಿ ವಿಡಿಯೋಕಾನ್​ಗೆ ಸುಮಾರು 3,250 ಕೋಟಿ ರೂ. ಅಕ್ರಮ ಸಾಲ ನೀಡಿದ್ದರು. ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು. ಅದಾದ ಬಳಿಕ ವಿಡಿಯೋಕಾನ್​ ದೀಪಕ್​ ಕೊಚ್ಚಾರ್​ ಅವರ ಸಂಸ್ಥೆಯಲ್ಲಿ ಸುಮಾರು 64 ಕೋಟಿ ರೂ.ಹೂಡಿಕೆ ಮಾಡಿತ್ತು. ಹಾಗೇ ಮ್ಯಾಟಿಕ್ಸ್​ ಫರ್ಟಿಲೈಸರ್​ ಕೂಡ 325 ಕೋಟಿ ರೂ. ಹೂಡಿಕೆ ಮಾಡಿತ್ತು.
ಈಗಾಗಲೇ ಇಡಿ ಚಂದಾ ಕೊಚ್ಚಾರ್​ ಮತ್ತು ವಿಡಿಯೋಕಾನ್​ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್​ ಧೂತ್ ಅವರ ಮನೆ, ನಿವಾಸದ ಮೇಲೆಯೂ ದಾಳಿ ನಡೆಸಿ, ವಿಚಾರಣೆ ನಡೆಸುತ್ತಿದೆ. (ಏಜೆನ್ಸೀಸ್)
ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 15 =
Remember me
