ಚಂಡೀಗಢ:ಚಂಡೀಗಢ ಮೇಯರ್ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಚುನಾವಣಾ ಸಮಯದಲ್ಲಿ ಅಮಾನ್ಯಗೊಂಡ ಎಂಟು ಮತಪತ್ರಗಳನ್ನು ತೋರಿಸಲು ನ್ಯಾಯಾಂಗ ಅಧಿಕಾರಿಗೆ ಸೂಚಿಸಿದರು.
ಮತಪತ್ರಗಳನ್ನು ವೀಕ್ಷಿಸಿದ ಮುಖ್ಯ ನ್ಯಾಯಮೂರ್ತಿಗಳು, ಅಸಿಂಧು ಎಂದು ಘೋಷಿಸಲಾದ 8 ಮತಪತ್ರಗಳಲ್ಲಿ ಕುಲದೀಪ್ ಕುಮಾರ್ ಅವರ ಹೆಸರಿದೆ ಎಂದು ಹೇಳಿದರು. ಇವುಗಳ ಮೇಲೆ ಲೈನ್ ಹಾಕಲಾಗಿತ್ತು. ವಿಚಾರಣೆಯ ಕೊನೆಯಲ್ಲಿ, ಮೇಯರ್ ಚುನಾವಣೆಯ ಮತಗಳನ್ನು ಮತ್ತೊಮ್ಮೆ ಎಣಿಕೆ ಮಾಡಬೇಕು ಮತ್ತು ಈ 8 ಮತಗಳನ್ನು ಮಾನ್ಯವೆಂದು ಪರಿಗಣಿಸಿ ಎಣಿಕೆಗೆ ಸೇರಿಸಬೇಕು. ಅದರ ನಂತರ ಫಲಿತಾಂಶಗಳನ್ನು ಘೋಷಿಸಬೇಕು ಎಂದು ನ್ಯಾಯಾಲಯ ಆದೇಶಿಸಿತು.
ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಎಎಪಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿತು. ಚುನಾವಣಾಧಿಕಾರಿಯು ಸಮ್ಮಿಶ್ರ ಪಾಲುದಾರ ಪಕ್ಷಗಳ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿ, ಮತಪತ್ರಗಳನ್ನು ತಿದ್ದಿದ ಆರೋಪ ಎದುರಿಸುತ್ತಿದ್ದಾರೆ.
ಬಿಜೆಪಿಯ ಮನೋಜ್ ಸೋಂಕರ್ ಅವರು 16 ಮತಗಳೊಂದಿಗೆ ಮೇಯರ್ ಸ್ಥಾನವನ್ನು ಅಲಂಕರಿಸಿದರು. ಆದರೆ, ಸುಪ್ರೀಂ ಕಿಡಿಕಾರಿದ ನಂತರ ನಿನ್ನೆ ರಾಜೀನಾಮೆ ನೀಡಿದರು. ಈ ನಡುವೆ ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಬೆಂಬಲಿಸಿ, ಕುದುರೆ ವ್ಯಾಪಾರವಾಗಿರುವುದು ಬಹಿರಂಗವಾಗಿತ್ತು.
ಕಳೆದ ತಿಂಗಳು ನಡೆದ ಮೇಯರ್ ಚುನಾವಣೆಯ ಮತಗಳ ಮರು ಎಣಿಕೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇಂದು ಹೇಳಿದರು. ಸಿಕ್ಕಿಬಿದ್ದಿರುವ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಆಮ್ ಆದ್ಮಿ ಪಕ್ಷದ ಪರವಾಗಿ ಎಂಟು ಮತಗಳನ್ನು ಸೇರಿಸಿ, ಬ್ಯಾಲೆಟ್ ಪೇಪರ್‌ಗಳನ್ನು ತಿರುಚಿರುವುದು ಕ್ಯಾಮರಾದಲ್ಲಿ ಗುರುತಿಸಲಾಗಿದೆ. ಎಂಟು ಮತಪತ್ರಗಳನ್ನು ವಿರೂಪಗೊಳಿಸಲಾಗಿದೆ ಎಂಬುದನ್ನು ಸೂಚಿಸಲು ಮಸಿಹ್ ಅವರನ್ನು ಕೇಳುವ ಮೂಲಕ ನ್ಯಾಯಾಲಯವು ಇಂದಿನ ವಿಚಾರಣೆಯನ್ನು ಪ್ರಾರಂಭಿಸಿತು.
ಚಂಡೀಗಢ ಮೇಯರ್‌ ಚುನಾವಣೆ ವಿವಾದ: ಮತಪತ್ರ ತಿರುಚಿದ್ದನ್ನು ಒಪ್ಪಿಕೊಂಡ ಚುನಾವಣಾಧಿಕಾರಿ..! ಸುಪ್ರೀಂ ಕೋರ್ಟ್‌ ಹೇಳಿದ್ದೇನು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
