ಚಂಡಿಗಢ್​:ಕರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರನ್ನು ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ದೇಶಾದ್ಯಂತ ಅನೇಕ ಪೊಲೀಸ್​ ಸಿಬ್ಬಂದಿ ಕೊವಿಡ್​-19ಗೆ ಒಳಗಾಗಿದ್ದಾರೆ. ಒಂದಷ್ಟು ಜನ ಮರಣವನ್ನಪ್ಪಿದ್ದಾರೆ.ಈ ಮಧ್ಯೆ ಚಂಡಿಗಢ್​ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟಂತೆ ಒಂದು ಮಹತ್ವದ ಆದೇಶ ಹೊರಡಿಸಿದೆ.
ಕೊವಿಡ್​-19 ಡ್ಯೂಟಿಯಲ್ಲಿರುವ ಪೊಲೀಸ್​ ಸಿಬ್ಬಂದಿಗೆ ಆಯುರ್ವೇದ ಆಧಾರಿತ ಔಷಧಿಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತೆ ಸೂಚನೆ ನೀಡಿದೆ.  ದೆಹಲಿಯಲ್ಲಿ ಈಗಾಗಲೇ ಪೊಲೀಸರು ಆಯುರ್ವೇದ ಔಷಧಿಯ ಬಳಕೆ ಮಾಡುತ್ತಿದ್ದು, ಇದೀಗ ಅದೇ ಮಾದರಿಯಲ್ಲೇ ಚಂಡೀಗಢ್​ ಕೂಡ ಅನ್ವಯಿಸಿಕೊಂಡಿದೆ.
ಮೇ ಪ್ರಾರಂಭದಲ್ಲಿ ದೆಹಲಿಯ ಏಮ್ಸ್​ ಆಸ್ಪತ್ರೆ ದೆಹಲಿ ಪೊಲೀಸರ ಸಹಯೋಗದಲ್ಲಿ ಆಯುರಕ್ಷಾ-ಕರೊನಾ ಸೆ ಜಂಗ್​, ದೆಹಲಿ ಪೊಲೀಸ್​ ಕೆ ಸಂಗ್​ ಎಂಬ ಉಪಕ್ರಮವನ್ನು ಉದ್ಘಾಟಿಸಿತು. ಈ ಯೋಜನೆಯಡಿ ದೆಹಲಿ ಪೊಲೀಸರಿಗೆ ಆಯುರ್ವೇದದ ಮೂರು ವಿಧದ ಮಾತ್ರೆಗಳನ್ನೊಳಗೊಂಡ ಕಿಟ್​ ವಿತರಿಸಲಾಗಿತ್ತು. ಕೊವಿಡ್​-19 ಡ್ಯೂಟಿಯಲ್ಲಿರುವ ಪೊಲೀಸರು ಈ ಮಾತ್ರೆಗಳನ್ನು ಸೇವಿಸಿ, ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ:ಕಂಬಳಿ ಹೊದ್ದು ಮಲಗಿ ಬೇಬಿ ಬಂಪ್​ ವಿಡಿಯೋ ಮಾಡಿದ ಮಹಿಳೆ; ಬಳಿಕ ಆ ವಿಡಿಯೋ ನೋಡಿ ನಲುಗಿಹೋದರು…
ಇದೀಗ ಚಂಡೀಗಢ್​ ಪೊಲೀಸ್​ ಇಲಾಖೆ ಕೂಡ ಇದೇ ಮಾದರಿಯ ಕಿಟ್​​ ಹೊರತಂದಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ದೆಹಲಿ ಪೊಲೀಸ್​ ಇಲಾಖೆ ಹೊರತಂದ ಆಯುರ್ವೇದ ಕಿಟ್​ ಮಾದರಿಯಲ್ಲಿಯೇ ನಮ್ಮಲ್ಲಿಯೂ ರೋಗನಿರೋಧಕ ಶಕ್ತಿ ಉತ್ತೇಜಿಸುವ ಆಯುರ್ವೇದ ಮಾತ್ರೆಗಳನ್ನು ಹೊರತರಲಾಗಿದೆ.ಇದನ್ನೂ ಓದಿ:ನೆಟ್ಸ್​ನಲ್ಲಿ ಸುನೀಲ್​ ಗಾವಸ್ಕರ್​ ಕೆಟ್ಟ ಬ್ಯಾಟ್ಸ್​ಮನ್​ ಎಂದು ಕಿರಣ್​ ಮೋರೆ ಹೇಳಿದ್ಯಾಕೆ..!
ಸೆಕ್ಟರ್​ 26ರ ಆಸ್ಪತ್ರೆಯಲ್ಲಿ ಈ ಮಾತ್ರೆಗಳ ವಿತರಣೆ ಮಾಡಲಾಗುವುದು. ಮಾತ್ರೆಗಳನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಅದೇ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವಿವರಿಸುತ್ತಾರೆ. ಕೊವಿಡ್​-19 ಕರ್ತವ್ಯ ನಿರತ ಎಲ್ಲ ಪೊಲೀಸರಿಗೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಪೊಲೀಸರು ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದ ಕಂಗನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
