ಭೋಪಾಲ್​:ಎರಡು ಹೈ ಸ್ಪೀಡ್​ ರೈಲುಗಳು ಒಂದೇ ಸಮಯದಲ್ಲಿ ಕ್ರಾಸಿಂಗ್​ ಮಾಡಿದ್ದರಿಂದಾಗಿ ರೈಲ್ವೆ ನಿಲ್ದಾಣವೇ ಮುರಿದುಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಚಾಂದ್ನಿ ರೈಲ್ವೆ ನಿಲ್ದಾಣ ಬುಧವಾರ ಸಂಜೆ ಬಿದ್ದಿದೆ. ಈ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಅನೇಕ ರೈಲುಗಳು ಸಂಚರಿಸುತ್ತವೆ. ಅಷ್ಟೊಂದು ಪ್ರಮುಖ ನಿಲ್ದಾಣವಲ್ಲವಾದ್ದರಿಂದ ಹೈ ಸ್ಪೀಡ್​ ರೈಲುಗಳು ಇಲ್ಲಿ ನಿಲ್ಲುವುದಿಲ್ಲವಂತೆ. ಅದೇ ರೀತಿ ಬುಧವಾರ ಕೂಡ ಹೈ ಸ್ಪೀಡ್​ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲದೆಯೇ ಸಂಚರಿಸಿವೆ. ಮಧ್ಯಾಹ್ನ 3.30ರ ಸಮಯಕ್ಕೆ ಖಾಂಡ್ವಾ ಇಂದ ಬರುವ ಪವನ್ ಎಕ್ಸ್​ಪ್ರೆಸ್​ ಮತ್ತು ಬರ್ಹನ್ಪುರ್ನಿಂದ ಬರುವ ಗುವಾಹಾಟಿ ಎಕ್ಸ್​ಪ್ರೆಸ್​ ರೈಲುಗಳು ಒಂದೇ ಸಮಯದಲ್ಲಿ ಈ ನಿಲ್ದಾಣವನ್ನು ಹಾದು ಹೋಗಿವೆ.
ಎರಡು ಹೈ ಸ್ಪೀಡ್​ ರೈಲುಗಳು ಒಂದೇ ಸಮಯದಲ್ಲಿ ಹಾದು ಹೋಗಿದ್ದರಿಂದಾಗಿ ನಿಲ್ದಾಣದ ಗೋಡೆಗಳು ಕುಸಿದಿವೆ. ಮಧ್ಯಾಹ್ನ 3.55ರ ಸಮಯಕ್ಕೆ ಗೋಡೆ ಕುಸಿದಿರುವುದಾಗಿ ತಿಳಿಸಲಾಗಿದೆ. ಅದೃಷ್ಟವಶಾತ್​ ಆ ಸಮಯದಲ್ಲಿ ನಿಲ್ದಾಣದಲ್ಲಿ ಸಿಬ್ಬಂದಿ ಬಿಟ್ಟು ಬೇರಾರು ಇರಲಿಲ್ಲ ಎನ್ನಲಾಗಿದೆ. ಸಿಬ್ಬಂದಿಯೂ ಕೂಡ ನಿಲ್ದಾಣದಿಂದ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್)
ಮಕ್ಕಳು, ಅತ್ತೆಯ ಮುಂದೆಯೇ ಗರ್ಭಿಣಿಯ ಅತ್ಯಾಚಾರ ಮಾಡಿದ ಪಾಪಿಗಳು!

ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
