ಅಮರಾವತಿ:ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಭಾನುವಾರ ಬೆಳಗ್ಗೆ ವಿಜಯವಾಡದಲ್ಲಿರುವ ಎಸಿಬಿ ನ್ಯಾಯಾಲಯಕ್ಕೆ ಅವರನ್ನು ತನಿಖಾ ತಂಡ ಹಾಜರುಪಡಿಸಿತ್ತು. ಟಿಡಿಪಿ ಮುಖ್ಯಸ್ಥರ ತಂಡವು ಎನ್ ಚಂದ್ರಬಾಬು ನಾಯ್ಡು ವಿರುದ್ಧ ಯಾವುದೇ ಜಾಮೀನು ರಹಿತ ವಾರಂಟ್ ಇಲ್ಲ ಎಂದು ಹೇಳಿಕೊಂಡಿದ್ದು, ಬಂಧನ ಅಕ್ರಮವಾಗಿದೆ ಆರೋಪಿಸಿತ್ತು. ಜಾಮೀನು ರಹಿತ ಸೆಕ್ಷನ್ ಸಮರ್ಥನೀಯವಲ್ಲ ಎಂದು ಕರೆದ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಪ್ರೇಮಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದ ಮಹಿಳೆ
ಚಂದ್ರಬಾಬು ನಾಯ್ಡು ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 34 ಮತ್ತು 37 ಜೊತೆಗೆ ಸೆಕ್ಷನ್ 120(b), 166, 167, 418, 420, 465, 468, 201, ಮತ್ತು 109 ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಆರೋಪವನ್ನೂ ಹೊರಿಸಲಾಗಿದೆ.
ಚಂದ್ರಬಾಬು ಅವರನ್ನು ರಾಜಮಂಡ್ರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈ ತಿಂಗಳ 22ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
