ನವದೆಹಲಿ:ಭಾರತದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 3 ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಎರಡನೇ ಮತ್ತು ಅಂತಿಮ ಹಂತದ ಡೀಬೂಸ್ಟಿಂಗ್ (ನಿಧಾನಗೊಳಿಸುವಿಕೆ) ಕಾರ್ಯಾಚರಣೆಯನ್ನು ಇಂದು ಬೆಳಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಬುಧವಾರ (ಆ.23) ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ ಬಾಹ್ಯಾಕಾಶ ನೌಕೆಯು ಲ್ಯಾಂಡಿಂಗ್‌ ಆಗಲಿದ್ದು, ಅದಕ್ಕೂ ಮುನ್ನವೇ ನಿರ್ಣಾಯಕ ಹಂತವಾದ ಎರಡನೇ ಡೀಬೂಸ್ಟಿಂಗ್​ ಅನ್ನು ಇಸ್ರೋ ವಿಜ್ಞಾನಿಗಳು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.
ಪ್ರಸ್ತುತ ಇಸ್ರೋ ಲ್ಯಾಂಡರ್​ ವಿಕ್ರಮ್​ ಅನ್ನು ಚಂದ್ರನ ಹತ್ತಿರದ ಕೇಂದ್ರ 25 ಕಿ.ಮೀ. ಹಾಗೂ ದೂರದ ಕೇಂದ್ರ 134 ಕಿ.ಮೀ. ಆರ್ಬಿಟ್​ನಲ್ಲಿ ಇರಿಸಲಾಗಿದೆ. ಇದೇ ಕಕ್ಷೆಯಿಂದ ವಿಕ್ರಮ್​ ಲ್ಯಾಂಡರ್, ಈವರೆಗೂ ಚಂದ್ರನಲ್ಲಿ ಅನ್ವೇಷಿಸದ ದಕ್ಷಿಣ ಧ್ರುವ ಪ್ರದೇಶದಲ್ಲಿ ಬುಧವಾರ (ಆ.23) ಸಾಫ್ಟ್​ ಲ್ಯಾಂಡಿಂಗ್ ಪ್ರಯತ್ನ ಮಾಡಲಿದೆ ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ:ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ: ಇನ್ಮುಂದೆ RC-DL ಕಾರ್ಡ್​ಗೆ ಅಲೆದಾಡಬೇಕಿಲ್ಲ
ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ (ನಿಧಾನಗೊಳಿಸುವಿಕೆ) ಕಾರ್ಯಾಚರಣೆಯು ಯಶಸ್ವಿಯಾಗಿ ಲ್ಯಾಂಡರ್​ ಮಾಡ್ಯೂಲ್​ ಕಕ್ಷೆಯನ್ನು 25 ಕಿಮೀ x 134 ಕಿಮೀಗೆ ಇಳಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್‌ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತಿದೆ. ಆ. 23 ರಂದು ಲ್ಯಾಂಡಿಂಗ್​ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಇಸ್ರೋ ಎಕ್ಷ್​​ನಲ್ಲಿ ತಿಳಿಸಿದೆ.
Chandrayaan-3 Mission:
The second and final deboosting operation has successfully reduced the LM orbit to 25 km x 134 km.
The module would undergo internal checks and await the sun-rise at the designated landing site.
The powered descent is expected to commence on August…pic.twitter.com/7ygrlW8GQ5
— ISRO (@isro)August 19, 2023

ಲ್ಯಾಂಡರ್ ವಿಕ್ರಮ್ ಸ್ವಯಂಚಾಲಿತ ಕ್ರಮದಲ್ಲಿ ಚಂದ್ರನ ಕಕ್ಷೆಯಲ್ಲಿ ಅವರೋಹಣ ಕ್ರಮದಲ್ಲಿ ಇಳಿಯುತ್ತಿದೆ. ಅದು ತನ್ನ ಕಾರ್ಯಗಳ ಬಗ್ಗೆ ತಾನೇ ನಿರ್ಧರಿಸುತ್ತಿದೆ. ಶುಕ್ರವಾರ ನಡೆದ ಮೊದಲ ಡೀಬೂಸ್ಟಿಂಗ್​ ಕಾರ್ಯಾಚರಣೆ ವೇಳೆ ಮಾತನಾಡಿದ ಮಾಜಿ ಇಸ್ರೋ ಮುಖ್ಯಸ್ಥ ಕೆ. ಶಿವನ್​, ಚಂದ್ರಯಾನ-3 ಲ್ಯಾಂಡರ್‌ನ ವಿನ್ಯಾಸವು ಹಿಂದಿನ ಚಂದ್ರಯಾನ-2 ಮಿಷನ್‌ನಲ್ಲಿ ಬಳಸಿದಂತೆಯೇ ಇದೆ. ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಚಂದ್ರಯಾನ-2ರ ಅವಲೋಕನಗಳ ಆಧಾರದ ಮೇಲೆ, ಮಿಷನ್‌ನಲ್ಲಿ ನಡೆದ ಎಲ್ಲ ದೋಷಗಳನ್ನು ಸರಿಪಡಿಸಲಾಗಿದೆ ಎಂದರು.
ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಲ್ಯಾಂಡಿಂಗ್​ ಆಗುವಲ್ಲಿ ಯಶಸ್ವಿಯಾದರೆ, ಈ ಸಾಧನೆ ಮಾಡಿದ ಐತಿಹಾಸಿಕ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಇಷ್ಟೇ ಅಲ್ಲದೆ, ದಕ್ಷಿಣ ಧ್ರವದಲ್ಲಿ ಸಾಫ್ಟ್​ ಲ್ಯಾಂಡಿಂಗ್​ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಯನ್ನು ಹೊಂದಲಿದೆ.
ಕಳೆದ ಗುರುವಾರ ಲ್ಯಾಂಡರ್​ ಮಾಡ್ಯೂಲ್​ ಅನ್ನು ಪ್ರೊಪಲ್ಸನ್​ ಮಾಡ್ಯೂಲ್​ನಿಂದ ಬೇರ್ಪಡಿಸಲಾಯಿತು. ಇದೀಗ ಪ್ರೊಪಲ್ಸನ್​ ಮಾಡ್ಯೂಲ್​ ತಿಂಗಳುಗಳು ಅಥವಾ ವರ್ಷಗಳವರೆಗೆ ಭೂಮಿಯನ್ನು ಸುತ್ತುವುದನ್ನು ಮುಂದುವರಿಸುತ್ತದೆ ಮತ್ತು ಅದರ ವಾತಾವರಣವನ್ನು ಅಧ್ಯಯನ ಮಾಡುತ್ತದೆ ಮತ್ತು ಮೋಡಗಳಿಂದ ಬೆಳಕಿನ ಧ್ರುವೀಕರಣವನ್ನು ಅಳೆಯುತ್ತದೆ. ಲ್ಯಾಂಡರ್​ ಬೇರ್ಪಡುತ್ತಿದ್ದಂತೆ ಗುರುವಾರ ಚಂದ್ರನ ಮೊದಲ ಚಿತ್ರವನ್ನು ಸೆರೆಹಿಡಿದು ಕಳುಹಿಸಿತು.
ಒಂದು ವೇಳೆ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆದರೆ, ಅದರಲ್ಲಿರುವ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಫೋಟೋವನ್ನು ಸೆರೆಹಿಡಿಯಲಿದೆ. ಇದು ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ಮಾಡುತ್ತದೆ ಮತ್ತು ನೀರನ್ನು ಹುಡುಕುತ್ತದೆ.
ಇದನ್ನೂ ಓದಿ:ಏಷ್ಯಾಕಪ್​ನಲ್ಲಿ ಭಾರತ-ಪಾಕ್​ಗೆ ಮುನ್ನ ಲಂಕಾ-ಬಾಂಗ್ಲಾ ಪಂದ್ಯದ ಟಿಕೆಟ್​ ಸೋಲ್ಡ್​ಔಟ್​!
ಅಂದಹಾಗೆ ಚಂದ್ರಯಾನ 3 ನೌಕೆಯನ್ನು ಇಸ್ರೋ ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟ ಉಡಾವಣ ಕೇಂದ್ರದಿಂದ ಉಡಾವಣೆ ಮಾಡಿತು. ಇದು ಆಗಸ್ಟ್​ 5ರಂದು ಲೂನಾರ್​ ಆರ್ಬಿಟ್​ ಅಂದ್ರೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು.
ಇನ್ನು ಇದೇ ಸಂದರ್ಭದಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ ಬೆನ್ನಲ್ಲೇ ರಷ್ಯಾ ಕೂಡ ಚಂದ್ರನ ಅಂಗಳಕ್ಕೆ ಲೂನಾ-25 ನೌಕೆಯನ್ನು ಲಾಂಚ್​ ಮಾಡಿತ್ತು. ಆದರೆ, ತಾಜಾ ಬೆಳವಣಿಗೆಯಲ್ಲಿ ರಷ್ಯಾ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮೋಸ್ ಆಗಸ್ಟ್ 11ರಂದು ಲೂನಾ-25 ನೌಕೆಯನ್ನು ಉಡಾವಣೆ ಮಾಡಿತ್ತು. ನಿನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್​ ಮಾಡುವ ಪ್ರಯತ್ನದಲ್ಲಿ ಕಕ್ಷೆಯನ್ನು ಕಡಿಮೆ ಮಾಡುವಾಗ ಲೂನಾ-25ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಫಲವಾಗಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮೋಸ್ ಈ ಲೂನಾ-25 ನೌಕೆಯನ್ನು ಉಡಾವಣೆ ಮಾಡಿದ್ದು, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದೆ.(ಏಜೆನ್ಸೀಸ್​)
ರಷ್ಯಾ ಕಳುಹಿಸಿರುವ ಲೂನಾ-25 ನೌಕೆಯಲ್ಲಿ ತಾಂತ್ರಿಕ ದೋಷ: ಭಾರತದ ಚಂದ್ರಯಾನ 3 ಸ್ಥಿತಿ ಹೇಗಿದೆ?

ಮುಂಬೈ ಇಂಡಿಯನ್ಸ್​​​ಗೆ ಲಸಿತ್​ ಮಾಲಿಂಗ ಹೊಸ ಬೌಲಿಂಗ್​ ಕೋಚ್​?

ಚೆಸ್​ ವಿಶ್ವಕಪ್​ನಲ್ಲಿ ಸೆಮೀಸ್​ ಹಂತದ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
