ಚೆನ್ನೈ:ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಉಡಾವಣೆ ಮಾಡುವ ಮುನ್ನ ಸಾಕಷ್ಟು ಪ್ರಯೋಗಗಳನ್ನು ನಡೆಸಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ನಾಮಕ್ಕಲ್​ ಜಿಲ್ಲೆಯ ಮಣ್ಣನ್ನು ಬಳಸಿಕೊಂಡು ಟೆಸ್ಟ್​ ಒಂದನ್ನು ನಡೆಸಿದೆ ಎಂಬ ಸಂಗತಿ ಇದೀಗ ಬಯಲಾಗಿದೆ.
2019ರ ಜುಲೈ 22ರಂದು ಚಂದ್ರಯಾನ 2 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಉಡಾವಣೆ ಮಾಡಲಾಗಿತ್ತು. ಈ ನೌಕೆಯ ಆರ್ಬಿಟರ್​ ಅನ್ನು ಅದೇ ವರ್ಷ ಸೆಪ್ಟೆಂಬರ್​ 6ರಂದು ಲೂನಾರ್​​ ಆರ್ಬಿಟ್​ನಲ್ಲಿ ಯಶಸ್ಸಿಯಾಗಿ ಇರಿಸಲಾಗಿತ್ತು. ಆದರೆ, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನು 2.1 ಕಿ.ಮೀ. ಬಾಕಿ ಇರುವಾಗಲೇ ಲ್ಯಾಂಡರ್​ ವಿಕ್ರಮ್​ ಸಂಪರ್ಕ ಕಡಿದುಕೊಂಡಿತು. ಇದರಿಂದ ಈ ಯೋಜನೆ ವಿಫಲವಾಯಿತು.
ಇದಾದ ಬಳಿಕ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಪತನಗೊಂಡಿದೆ ಎಂದು ಕಂಡುಹಿಡಿಯಲಾಯಿತು. 3 ತಿಂಗಳ ಕಾಲ ಇಸ್ರೋ ಸಕ್ರಿಯವಾಗಿ ಹುಡುಕಾಟ ನಡೆಸಿತು. ಆದರೆ, ನಾಸಾದ ಎಲ್​ಆರ್​ಒಸಿ (ಲೂನಾರ್ ರೆಕಾನೈಸೆನ್ಸ್​ ಆರ್ಬಿಟರ್) ಲ್ಯಾಂಡರ್​ ಅನ್ನು ಪತ್ತೆ ಮಾಡಿತು. ಅಲ್ಲದೆ, ಲ್ಯಾಂಡರ್​ ಸ್ಫೋಟಗೊಂಡಿದೆ ಎಂಬುದನ್ನು ತಿಳಿಸಿತು. ಆದರೆ, ಈ ಯೋಜನೆ ಸಂಪೂರ್ಣ ವಿಫಲವಾಗಿಲ್ಲ. ಏಕೆಂದರೆ, ಆರ್ಬಿಟರ್​ ಮುಂದಿನ ಒಂದೂವರೆ ವರ್ಷಗಳ ಕಾಲ ಯಶಸ್ವಿಯಾಗಿ ಚಂದ್ರನ ಸುತ್ತ ಸುತ್ತಿತು.
ಇದನ್ನೂ ಓದಿ:ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡಿದ ‘ಓ ಮೈ ಗಾಡ್ 2’; ಅಕ್ಷಯ್​ ಕುಮಾರ್ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಇದೀಗ ಚಂದ್ರಯಾನ 3 ಯೋಜನೆ ಉಡಾವಣೆ ಮಾಡಲಾಗಿದೆ. ಜುಲೈ 14 ರಂದು ಮಧ್ಯಾಹ್ನ 2.35ರ ಸಮಯಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಲಾಯಿತು. ಇಸ್ರೋ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡನ್ನೂ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಲು ಯೋಜಿಸುತ್ತಿದೆ. ಪ್ರಸ್ತುತ ಚಂದ್ರಯಾನ 3, ಚಂದ್ರಯಾನ 2 ರೀತಿ ಆರ್ಬಿಟರ್ ಹೊಂದಿಲ್ಲ. ಬದಲಿಗೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಮಾತ್ರ ಇವೆ. ಪ್ರಸ್ತುತ ಇಸ್ರೋ ಲ್ಯಾಂಡರ್​ ವಿಕ್ರಮ್​ ಅನ್ನು ಚಂದ್ರನ ಹತ್ತಿರದ ಕೇಂದ್ರ 25 ಕಿ.ಮೀ. ಹಾಗೂ ದೂರದ ಕೇಂದ್ರ 134 ಕಿ.ಮೀ. ಆರ್ಬಿಟ್​ನಲ್ಲಿ ಇರಿಸಿದೆ. ಇದೇ ಕಕ್ಷೆಯಿಂದ ವಿಕ್ರಮ್​ ಲ್ಯಾಂಡರ್, ಈವರೆಗೂ ಚಂದ್ರನಲ್ಲಿ ಅನ್ವೇಷಿಸದ ದಕ್ಷಿಣ ಧ್ರುವ ಪ್ರದೇಶದಲ್ಲಿ ಬುಧವಾರ (ಆ.23) ಸಾಫ್ಟ್​ ಲ್ಯಾಂಡಿಂಗ್ ಪ್ರಯತ್ನ ಮಾಡಲಿದೆ ಎಂದು ಇಸ್ರೋ ಹೇಳಿದೆ. ಎಲ್ಲರೂ ಆ.23ಕ್ಕೆ ಎದುರು ನೋಡುತ್ತಿದ್ದಾರೆ.
ಚಂದ್ರಯಾನ–3 ಬಾಹ್ಯಾಕಾಶ ನೌಕೆಯ ಪ್ರಮುಖ ಸಾಧನಗಳಾದ ಲ್ಯಾಂಡರ್ ಆ್ಯಂಡ್ ರೋವರ್ ಉಪಕರಣಗಳು ಚಂದ್ರನ ಮೇಲೆ ಹೆಜ್ಜೆ ಗುರುತು ಮೂಡಿಸುವ ಮುನ್ನವೇ ನಾಮಕ್ಕಲ್‌ನ ಮಣ್ಣಿನ ಮೇಲೆ ಇಳಿಸಿದ್ದಾರೆ ಎಂದು ಮಹತ್ವದ ಮಾಹಿತಿ ತಿಳಿದುಬಂದಿದೆ. ನಾಮಕ್ಕಲ್​ ಜಿಲ್ಲೆಯ ಗುನ್ನಮಲೈ ಗ್ರಾಮದಲ್ಲಿ ಉತ್ಖನನ ಮಾಡಲಾದ ‘ಅನಾರ್ತೊಸೈಟ್’ ಬಂಡೆಯ ಮಾದರಿಯನ್ನು ಇಸ್ರೋ ಪರೀಕ್ಷಿಸಿರುವುದು ಬಹಿರಂಗವಾಗಿದೆ.
ಈ ಹಿಂದೆ ಚಂದ್ರಯಾನ 2 ಬಾಹ್ಯಾಕಾಶ ನೌಕೆಯಲ್ಲಿದ್ದ ಲ್ಯಾಂಡರ್ ಮತ್ತು ರೋವರ್ ಲ್ಯಾಂಡಿಂಗ್​ ಪರೀಕ್ಷೆ ಮಾಡಲು ಇಸ್ರೋಗೆ ಚಂದ್ರನಂಥ ಮಣ್ಣಿನ ಅಗತ್ಯವಿತ್ತು. ಈ ಮಣ್ಣು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಳಿ ಇತ್ತು. ಆದರೆ, ಅವರಿಂದ ಒಂದು ಕೆಜಿ ಮಣ್ಣನ್ನು 15000 ರೂ.ಗೆ ಖರೀದಿಸಬೇಕಿತ್ತು. ಹಾಗಾಗಿ ಆ ರೀತಿಯ ಮಣ್ಣು ಭಾರತದಲ್ಲಿ ಇದೆಯೇ ಎಂದು ಇಸ್ರೋ ವಿಜ್ಞಾನಿಗಳು ತನಿಖೆ ನಡೆಸಿದರು. ಆ ರೀತಿಯ ಮಣ್ಣು ತಮಿಳುನಾಡು ರಾಜ್ಯ, ನಾಮಕ್ಕಲ್ ಜಿಲ್ಲೆಯ ಪು. ವೆಲ್ಲೂರು ತಾಲೂಕು ಗುನ್ನಮಲೈ, ಚಿತ್ತಂಬೂಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದು ಲಭ್ಯವಿರುವುದು ಕಂಡುಬಂದಿದೆ.
ಇದಾದ ಬಳಿಕ ಈ ಗ್ರಾಮಗಳ ಮಣ್ಣಿನ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಚಂದ್ರನಲ್ಲಿ ದೊರೆತಿರುವ ಮಣ್ಣನ್ನು ಹೋಲುವ ‘ಅನಾರ್ತೊಸೈಟ್’ ಬಂಡೆಯಿರುವುದು ಬೆಳಕಿಗೆ ಬಂದಿದೆ. ಬಳಿಕ 50 ಟನ್‌ಗಳಷ್ಟು ಮಣ್ಣು ಮತ್ತು ಕಲ್ಲುಗಳನ್ನು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಕಳುಹಿಸಲಾಯಿತು. ಇದಾದ ಬಳಿಕ ಇಸ್ರೋ ಇದೇ ಮಣ್ಣನ್ನು ಬಳಸಿಕೊಂಡು ಚಂದ್ರನ ರೀತಿಯ ವಾತಾವರಣವನ್ನು ಭೂಮಿಯ ಮೇಲೆ ಸೃಷ್ಟಿ ಮಾಡಿ, ಒಮ್ಮೆ ಲ್ಯಾಂಡಿಂಗ್​ ಪ್ರಯೋಗವನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಮಣ್ಣನ್ನು ಬಳಸಿಕೊಂಡು ಚಂದ್ರಯಾನ 2 ಮತ್ತು 3 ಪ್ರಯೋಗಗಳು ನಡೆದಿದೆ ಎಂಬುದನ್ನು ತಿಳಿದು ನಾಮಕಲ್ ಜನರು ಸಂತಸಗೊಂಡಿದ್ದಾರೆ.(ಏಜೆನ್ಸೀಸ್​)
ಲ್ಯಾಂಡರ್​​ ವೇಗ ತಗ್ಗಿಸುವ ಕೊನೇ ಹಂತದ ಪ್ರಕ್ರಿಯೆ ಸಕ್ಸಸ್​: ಚಂದ್ರಯಾನ 3 ನೌಕೆಯ ಮುಂದಿನ ನಿಲ್ದಾಣ ಚಂದ್ರ!

ರಷ್ಯಾ ಕಳುಹಿಸಿರುವ ಲೂನಾ-25 ನೌಕೆಯಲ್ಲಿ ತಾಂತ್ರಿಕ ದೋಷ: ಭಾರತದ ಚಂದ್ರಯಾನ 3 ಸ್ಥಿತಿ ಹೇಗಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eighteen =
Remember me
