ಬೆಂಗಳೂರು:ಬುಧವಾರ (ಆ.23) ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಸಾಫ್ಟ್​ ಲ್ಯಾಂಡಿಂಗ್​ ಸಕ್ಸಸ್ ಆದ​ ಬಳಿಕ ಲ್ಯಾಂಡರ್​ ಒಳಗಿದ್ದ ಪ್ರಜ್ಞಾನ್ ರೋವರ್​ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ (ಆ.24) ಬೆಳಗ್ಗೆ ಚಂದ್ರನ ಅಂಗಳದ ಮೇಲೆ ಯಶಸ್ವಿಯಾಗಿ ನಿಯೋಜಿಸಿದೆ. ಇದೀಗ ಇಸ್ರೋ, ಪ್ರಜ್ಞಾನ್ ರೋವರ್​ ಚಂದ್ರನ ಮೇಲೆ ಇಳಿದ ವಿಡಿಯೋವನ್ನು ಹಂಚಿಕೊಂಡಿದೆ.
ಇಂದು ಬೆಳಗ್ಗೆ 11 ಗಂಟೆಗೆ ಇಸ್ರೋ ತನ್ನ ಎಕ್ಷ್​ ಖಾತೆಯಲ್ಲಿ ವಿಕ್ರಮ್​ ಲ್ಯಾಂಡರ್​ನಿಂದ ಪ್ರಜ್ಞಾನ್ ರೋವರ್​ ನಿಧಾನವಾಗಿ ಚಂದ್ರನ ಮೇಲ್ಮೈಗೆ ಇಳಿಯುತ್ತಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಅಲ್ಲದೆ, ಚಂದ್ರನ ಅಂಗಳಕ್ಕೆ ವಿಕ್ರಮ್​ ಲ್ಯಾಂಡರ್​ ಇಳಿಯುವ ಸಮಯದಲ್ಲಿ ಲ್ಯಾಂಡರ್​ ಇಮೇಜರ್​ ಕ್ಯಾಮೆರಾ ಸೆರೆಹಿಡಿದ ಚಂದ್ರನ ಮೇಲ್ಮೈ ವಿಡಿಯೋವನ್ನೂ ಸಹ ಇಸ್ರೋ ಎಕ್ಷ್​ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ:ಸಮಸ್ಯೆ ಬಗೆಹರಿಸುವ ಭರವಸೆ ವಿಜಯವಾಣಿ ವರದಿಯಿಂದ ಎಚ್ಚೆತ್ತ ಜಿಪಂ ಅಜ್ಜನಹಳ್ಳಿ, ಸಿದ್ದೇಶ್ವರ ಕಾಲನಿಗೆ ಅಧಿಕಾರಿಗಳ ತಂಡ ಭೇಟಿ
… … and here is how the Chandrayaan-3 Rover ramped down from the Lander to the Lunar surface.pic.twitter.com/nEU8s1At0W
— ISRO (@isro)August 25, 2023

ಪೋಸ್ಟ್​ ಹಂಚಿಕೊಂಡ ಒಂದೇ ಗಂಟೆಯಲ್ಲಿ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಅಲ್ಲದೆ, 12 ಸಾವಿರಕ್ಕು ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದು, 33 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಕಾಮೆಂಟ್​ ಮೂಲಕ ರೋಚಕ ಕ್ಷಣವನ್ನು ಕಣ್ತುಂಬಿಕೊಂಡ ಬಳಿಕ ಮೈನವಿರೇಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಬಾಹ್ಯಾಕಾಶ ನೌಕೆಯು ಮೊದಲ ಬಾರಿಗೆ ಚಂದ್ರನ ಮೇಲ್ಮೈಯನ್ನು ಅನುಭವಿಸಿದ್ದು, ಅನೇಕ ಸಮಸ್ಯೆಗಳು ಇವೆ ಎಂದು ಇಸ್ರೋ ಹೇಳಿದೆ. ಏಕೆಂದರೆ ಚಂದ್ರನ ಮೇಲ್ಮೈನಲ್ಲಿ ವಿಶೇಷವಾಗಿ ಚಂದ್ರನ ಧೂಳು ಮತ್ತು ತಾಪಮಾನವು ಚಲಿಸುವ ಭಾಗಗಳ ಮೇಲೆ ಪರಿಣಾಮ ಬೀರಬಹುದು ಎಂದಿದೆ. ಮುಂದೆ ಮತ್ತಷ್ಟು ಮಾಹಿತಿಗಳನ್ನು ತಿಳಿಸುವುದಾಗಿ ಹೇಳಿದೆ.
ಪ್ರಜ್ಞಾನ್ ರೋವರ್​ ಒಂದು ಮೈಕ್ರೋವೇವ್​ ಓವನ್​ ಗಾತ್ರದಷ್ಟಿದೆ. ಚಂದ್ರನ ಅಂಗಳದಿಂದ ಸುಮಾರು 500 ಮೀಟರ್​(1640 ಅಡಿ)ಗಳವರೆಗೆ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಚಂದ್ರನ ಭೂವಿಜ್ಞಾನ, ಖನಿಜಶಾಸ್ತ್ರ ಹಾಗೂ ವಾತಾವರಣವನ್ನು ಅಧ್ಯಯನ ಮಾಡಲಿದೆ. ಚಂದ್ರಯಾನ 3 ಭಾರತದ ಚಂದ್ರನ ಮೂರನೇ ಕಾರ್ಯಾಚರಣೆಯಾಗಿದೆ. ಮೊದಲ ಚಂದ್ರಯಾನ-1 ಅನ್ನು 2008ರಲ್ಲಿ ಉಡಾವಣೆ ಮಾಡಿ, 2 ವರ್ಷಗಳವರೆಗೆ ಆಪರೇಟ್​ ಮಾಡಲಾಯಿತು. ಇದಾದ ಬಳಿಕ 2019ರಲ್ಲಿ ಎರಡನೇ ಚಂದ್ರಯಾನ-2 ಚಂದ್ರನ ಮೇಲೆ ಲ್ಯಾಂಡ್​ ಆಗುವ ವೇಳೆ ವಿಫಲವಾಯಿತು. ಇದೀಗ ಮೂರನೇ ಪ್ರಯತ್ನದಲ್ಲಿ ಭಾರತ ಯಶಸ್ಸು ಸಾಧಿಸಿದೆ.
ಇದನ್ನೂ ಓದಿ:ನಿಲ್ಲದ ರೀಲ್ಸ್​ ಸ್ಟಾರ್​ ವಿನೀತನ ಪುಂಡಾಟ: ಮೊದಲು ರೇಪ್​, ನಂತ್ರ ಸುಲಿಗೆ, ಇದೀಗ ಚಿನ್ನಾಭರಣ ಪಡೆದು ಅತ್ಯಾಚಾರ
ಚಂದ್ರಯಾನ 3 ಯಶಸ್ಸು ಭಾರತವನ್ನು ಅಮೆರಿಕ, ರಷ್ಯಾ ಮತ್ತು ಚೀನಾ ಸಾಲಿಗೆ ಸೇರಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
ಪ್ರಜ್ಞಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಯೋಜಿಸಲಾದ ಮೊದಲನೆಯ ರೋವರ್​ ಆಗಿದೆ. ಇದರಲ್ಲಿ ಕ್ಯಾಮೆರಾ, ಸ್ಪೆಕ್ಟ್ರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಚಂದ್ರನ ಮೇಲ್ಮೈಯನ್ನು ಅದರ ಸಂಯೋಜನೆ, ಖನಿಜಶಾಸ್ತ್ರ ಮತ್ತು ಇತಿಹಾಸವನ್ನು ಒಳಗೊಂಡಂತೆ ಅಧ್ಯಯನ ಮಾಡಲು ರೋವರ್ ಪ್ರಯೋಗಗಳನ್ನು ನಡೆಸುತ್ತದೆ.
ಪ್ರಜ್ಞಾನ್ ರೋವರ್ ಒಂದು ಚಂದ್ರನ ದಿನಕ್ಕೆ ಮಾತ್ರ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಂದರೆ ಸುಮಾರು 14 ಭೂಮಿಯ ದಿನಗಳು. ಇದು ಸೌರ ಫಲಕಗಳಿಂದ ಚಾಲಿತವಾಗಲಿದ್ದು, ಚಂದ್ರಯಾನ-3 ಆರ್ಬಿಟರ್‌ನೊಂದಿಗೆ ಸಂವಹನ ನಡೆಸಲಿದೆ.
* ಜುಲೈ 14 – ಉಡಾವಣೆ* ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ* ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ* ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ* ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ* ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್*1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.*1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ*2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.*600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ*40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ*3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ
ಚಂದ್ರನ ಮೇಲೆ ಭಾರತದ ನಡಿಗೆ: ದಕ್ಷಿಣ ಧ್ರುವದಲ್ಲಿ ಮೂನ್​ವಾಕ್​ ಆರಂಭಿಸಿದ ಪ್ರಜ್ಞಾನ್ ರೋವರ್​!

ತಂದೆ ಟ್ರಕ್ ಡ್ರೈವರ್, ಓದಿಗೆ ಅಡ್ಡಿಯಾದ ಬಡತನ…ಕಷ್ಟ ಮೆಟ್ಟಿ ನಿಂತ ಇಸ್ರೋ ವಿಜ್ಞಾನಿ ಸೋಹನ್ ಲಕ್ಷಾಂತರ ಯುವಕರಿಗೆ ಪ್ರೇರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
