ಬೆಂಗಳೂರು:ಚಂದ್ರಯಾನ-3ರ ಕುರಿತಂತೆ ವಿರೂಪಗೊಳಿಸಿದ್ದ ಚಾಯ್​ವಾಲಾ ಫೋಟೋ ಹಾಕಿ ವಿವಾದಕ್ಕೆ ಒಳಗಾಗಿ ಟ್ರೋಲ್​ಗೂ ಈಡಾಗಿದ್ದ ನಟ ಪ್ರಕಾಶ್ ರಾಜ್​ ಪ್ರಕರಣ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಏಕೆಂದರೆ ಚಂದ್ರಯಾನದ ಲ್ಯಾಂಡಿಂಗ್​ ಮುಗಿದರೂ ಕೆಲವರಿಂದ ಪ್ರಕಾಶ್​ ರಾಜ್ ಟ್ರೋಲ್​ಗೆ ಒಳಗಾಗುವುದು ನಿಂತಿಲ್ಲ, ಹಾಗೆಯೇ ಅವರೂ ಮತ್ತೆ ಮತ್ತೆ ಕೆಣಕಿ ಪೋಸ್ಟ್ ಮಾಡುತ್ತಿರುವುದು ಕೂಡ ನಿಂತಿಲ್ಲ.
ಚಹಾ ಮಾಡುವ ವ್ಯಕ್ತಿಯೊಬ್ಬನ ವಿರೂಪಗೊಳಿಸಿದ ಫೋಟೋವೊಂದನ್ನು ಆ. 20ರಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಪ್ರಕಾಶ್ ರಾಜ್, ‘ವಿಕ್ರಮ್ ಲ್ಯಾಂಡರ್​ ಮೂಲಕ ಚಂದ್ರನಿಂದ ಬರುತ್ತಿರುವ ಮೊದಲ ಚಿತ್ರ’ ಎಂಬ ಕ್ಯಾಪ್ಷನ್ ಹಾಕಿದ್ದರು. ಇದು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದರು.
ಹೀಗೆ ಟ್ರೋಲ್​ಗೆ ಒಳಗಾಗುತ್ತಿದ್ದಂತೆ, ‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್​ವಾಲಾರನ್ನು ಸಂಭ್ರಮಿಸುವ ಆರ್ಮ್​ಸ್ಟ್ರಾಂಗ್ ಕಾಲದ ಜೋಕನ್ನು ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?’ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್​, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಇನ್ನೊಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ‘ಚಾಯ್​ವಾಲಾ’ನ ಫೋಟೋ ಹಂಚಿಕೊಂಡ ನಟ ಪ್ರಕಾಶ್ ರಾಜ್!
ಅದಾದ ಮೇಲೆ ಪ್ರಕಾಶ್ ರಾಜ್ ವಿರುದ್ಧ ಅಸಹನೆ ಮತ್ತಷ್ಟು ಹೆಚ್ಚಾಗಿದ್ದು, ಟ್ರೋಲಿಗರು ಇನ್ನಷ್ಟು ಟ್ರೋಲ್ ಮಾಡಲಾರಂಭಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಕಾಶ್ ರಾಜ್ ಇನ್ನೊಂದು ಎಕ್ಸ್ ಮಾಡಿದ್ದರು. ಅನ್​ಅಕಾಡೆಮಿ ಟ್ರೋಲ್ಸ್ ಎಂದು ಉಲ್ಲೇಖಿಸಿ ಎಕ್ಸ್ ಮಾಡಿರುವ ಪ್ರಕಾಶ್ ರಾಜ್, ‘ನಿಮಗೆ ಗೊತ್ತಿರುವುದು ಒಂದೇ ಚಾಯ್​ವಾಲಾ. 1960ರಿಂದ ಚಾಲ್ತಿಯಲ್ಲಿರುವ ನಮ್ಮ ಮಲಯಾಳಿ ಚಾಯ್​ವಾಲಾಗಳ ಕುರಿತ ಹೆಮ್ಮೆಯ ಈ ಸಂಗತಿ ನೋಡಿ’ ಎಂದಿರುವ ಅವರು ಆ ಕುರಿತ ಬರಹದ ಲಿಂಕ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಟ್ರೋಲಿಗರು ಓದಿ ವಿಷಯ ತಿಳಿದುಕೊಳ್ಳಿ ಎಂದೂ ಮತ್ತೆ ಕಾಲೆಳೆದಿದ್ದರು.
ಇದನ್ನೂ ಓದಿ:ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು, ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?: ನಟ ಪ್ರಕಾಶ್​ ರಾಜ್​ ಮತ್ತೊಂದು ‘ಎಕ್ಸ್​’
ನಿನ್ನೆ ಚಂದ್ರಯಾನ-3 ಯಶಸ್ವಿ ಆದ ಬಳಿಕ ಪ್ರಕಾಶ್ ರಾಜ್, ಅದಕ್ಕೆ ಮೆಚ್ಚುಗೆ ಸೂಚಿಸಿ, ಧನ್ಯವಾದಗಳು ಎಂದೂ ಎಕ್ಸ್​ ಪೋಸ್ಟ್​ ಮಾಡಿದ್ದರು. ಹೀಗಾಗಿ ಈ ಟ್ರೋಲ್​-ಪೋಸ್ಟ್​ ಸಂಘರ್ಷ ಇಲ್ಲಿಗೇ ಮುಗಿಯಿತು ಎಂದುಕೊಳ್ಳುವಂತಾಗಿತ್ತು. ಆದರೆ ಅದಾದ ಬಳಿಕವೂ ಅವರನ್ನು ಟ್ರೋಲ್ ಮಾಡಲಾಯಿತು.
ಇದನ್ನೂ ಓದಿ:ಟ್ರೋಲ್ ಮಾಡುವವರಿಗೆ ಗೊತ್ತಿರುವುದು ಒಂದೇ ಚಾಯ್​ವಾಲಾ: ನಟ ಪ್ರಕಾಶ್ ರಾಜ್​
ಇಂದು ಆ ಟ್ರೋಲಿಗರಿಗೆ ಪ್ರತಿಕ್ರಿಯೆ ಎಂಬಂತೆ ಮತ್ತೆ ಅದೇ ವಿರೂಪಗೊಳಿಸಿದ ಚಾಯ್​ವಾಲ್ ಫೋಟೋ ಹಾಕಿಕೊಂಡು ಪ್ರಕಾಶ್ ರಾಜ್ ಮತ್ತೆ ಕೆಣಕಿದ್ದಾರೆ. ‘ಮಲಯಾಳಿ ಚಾಯ್​ವಾಲಾ ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ.. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ಧಿವಂತ.. ಆತನೀಗ ಮಂಗಳ.. ಶುಕ್ರ ಗ್ರಹಗಳಲ್ಲಿ ಅಂಗಡಿ ಇಟ್ಟಿದ್ದಾನೆ.. ಸಾಧ್ಯವಾದರೆ ಹೋಗಿ 😂😂😂 #justasking’ ಎಂದು ಪ್ರಕಾಶ್​ ರಾಜ್ ಮತ್ತೆ ತಮ್ಮದೇ ಶೈಲಿಯಲ್ಲಿ ಪೋಸ್ಟ್ ಮಾಡಿ ಕಾಲೆಳೆದಿದ್ದಾರೆ.
ಮಲಯಾಳಿ#Chaiwalaಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ .. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ದಿವಂತ … ಆತನೀಗ ಮಂಗಳ .. ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ .. ಸಾಧ್ಯವಾದರೆ ಹೋಗಿ 😂😂😂#justaskingpic.twitter.com/iufhNFcIWQ
— Prakash Raj (@prakashraaj)August 24, 2023

ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು ‘ಇಸ್ರೋ’ ಸಬ್​ಸ್ಕ್ರೈಬರ್ಸ್​ ಸಂಖ್ಯೆ

ಒಬ್ಬನಲ್ಲೇ ಇದ್ದವು ಎರಡೂ ಜನನಾಂಗ; ದೇಶದಲ್ಲಿ ಇಂಥ ಇಪ್ಪತ್ತು ಪ್ರಕರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
