ನವದೆಹಲಿ:ಚಂದ್ರಯಾನ-3 ಯಶಸಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಪ್ರಧಾನಿ ಮೋದಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ. ವೇಣೂಗೋಪಾಲ್​ ಲಾಂಚಿಂಗ್​ ಪ್ಯಾಡ್​ ನಿರ್ಮಿಸಿದ ಇಂಜಿನಿಯರ್​ಗಳಿಗೆ ಈವರೆಗೂ ಯಾಕೆ ಸಂಬಳ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಚಂದ್ರಯಾನ-3ರ ವಿಕ್ರಂ ಲ್ಯಾಂಡರ್​ ಚಂದ್ರನ ಮೇಲೆ ಇಳಿಯುವ ಸಂಭ್ರಮ ಮತ್ತು ಹೆಮ್ಮೆ ನಮ್ಮೊಂದಿಗೆ ದೀರ್ಘ ಕಾಲ ಉಳಿಯಲಿದೆ. ಇಸ್ರೋ ಅಧ್ಯಕ್ಷ ಸೋಮನಾಥನ್​ ಅವರ ನೇತೃತ್ವದಲ್ಲಿ ಇತಿಹಾಸವನ್ನೂ ಸೃಷ್ಸಿಸಿದ್ದೇವೆ. ಆದರೆ, ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಮುಂದಾಗಿರುವ ಪ್ರಧಾನಿ ಮೋದಿ ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಿದ್ದಾರೆ.
The excitement and pride of the#Chandrayaan3landing will stay with us for a long time. ISRO Chairman Dr. Somanath’s leadership truly created history and we extend our hearty congratulations to him and his team.However, the PM must answer some for his hypocrisy.You were…pic.twitter.com/USwpJbtx2l
ಚಂದನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡ ಆದ ತಕ್ಷಣ ಪರದೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಇಸ್ರೋ ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಮುಂದಾಗಿದ್ದಾರೆ. ಆದರೆ, ಇಸ್ರೋ ವಿಜ್ಞಾನಿಗಳಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಸ್ವತಃ ಪ್ರಧಾನಿ ಮೋದಿ ಅವರೇ ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾವೇರಿ ಜಲವಿವಾದ; ವಾಸ್ತವಾಂಶವನ್ನು ಪ್ರಾಧಿಕಾರದ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದ ಸಿಎಂ
ಚಂದ್ರಯಾನ-3ರ ಯೋಜನೆಗೆ ಸಂಬಂಧಿಸಿದಂತೆ ಲಾಂಚ್​ ಪ್ಯಾಡ್​ ನಿರ್ಮಿಸಿದ ಹೆವಿ ಇಂಜಿನಿಯರ್​ ಕಾರ್ಪೋರೇಷನ್ (HEC)ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್​ಗಳಿಗೆ ಕಳೆದ 17 ತಿಂಗಳಿನಿಂದ ಸಂಬಳವನ್ನು ಏಕೆ ಕೊಟ್ಟಿಲ್ಲ. ಇಂತಹ ಕಾರ್ಯಗಳಿಗೆ ನೀವು ಬಜೆಟ್​ಅನ್ನು ಏಕೆ ಶೇ.32ರಷ್ಟು ಏಕೆ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇವರು ನಮ್ಮ ದೇಶದ ಹೀರೋಗಳು ಅವರು ಇಡೀ ವಿಶ್ವವನ್ನೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ, ವಿಜ್ಞಾನಿಗಳ ಕಠಿಣ ಪರಿಶ್ರಮ ಹಾಗೂ ಪ್ರತಿಭೆಗೆ ನೀವು ಯಾವುದೇ ಗೌರವವನ್ನು ನೀಡುತ್ತಿಲ್ಲ. ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ನೀವು ಪಡೆಯಲು ಮುಂದಾಗಿರುವುದು ದುರದೃಷ್ಟಕರ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two + 5 =
Remember me
