ನವದೆಹಲಿ:ಚಂದ್ರಯಾನ ಮಿಷನ್, ಗೆಲುವನ್ನು ಖಚಿತಪಡಿಸುವ ಹಾಗೂ ಯಾವುದೇ ಪರಿಸ್ಥಿತಿಯಲ್ಲಿ ಗೆಲುವನ್ನು ಸಾಧಿಸುವ ನವ ಭಾರತದ ಚೈತನ್ಯದ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಚಂದ್ರಯಾನ 3ರ ಯಶಸ್ಸು ನಾರಿಶಕ್ತಿಗೆ ಒಂದು ಜೀವಂತ ನಿದರ್ಶನವೂ ಹೌದು ಎಂದು ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್​ನಲ್ಲಿ ಶ್ಲಾಘಿಸಿದ್ದಾರೆ.
ಅನಂತವೆಂದು ಭಾವಿಸಲಾಗಿದ್ದ ಬಾಹ್ಯಾಕಾಶಕ್ಕೂ ಭಾರತೀಯ ಪುತ್ರಿಯರು ಸವಾಲು ಹಾಕುತ್ತಿದ್ದಾರೆ. ದೇಶವೊಂದರ ಪುತ್ರಿಯರು ಈ ಪರಿಯಲ್ಲಿ ಮಹತ್ವಾಕಾಂಕ್ಷಿಗಳಾದರೆ ಅಭಿವೃದ್ಧಿ ತಡೆಯಲು ಯಾರಿಗೆ ತಾನೇ ಸಾಧ್ಯ? ನೌಕೆ ಚಂದಿರನನ್ನು ತಲುಪಿ 3 ದಿನ ಕಳೆದಿವೆ. ಇದರ ಯಶಸ್ಸು ಎಷ್ಟು ಭವ್ಯವಾದುದೆಂದರೆ ಈ ಬಗ್ಗೆ ಎಷ್ಟೇ ರ್ಚಚಿಸಿದರೂ ಸಾಲದು ಎಂದರು.
ಈಗಷ್ಟೇ ಸೂರ್ಯೋದಯವಾಗಿದೆ ಎಂಬ ಸಂದೇಶವನ್ನು ಒತ್ತಿ ಹೇಳುವ ಸ್ವತಃ ತಾವೇ ಬರೆದಿರುವ ಕವನವೊಂದರ ಸಾಲನ್ನು ಮೋದಿ ವಾಚಿಸಿದರು. ಚಂದ್ರನ ಮೇಲೂ ಸಂಕಲ್ಪದ ಕೆಲವು ಸೂರ್ಯರು ಉದಯಿಸಿವೆ ಎಂಬುದನ್ನು ಭಾರತದ ಚಂದ್ರಯಾನ-3 ಸಾಬೀತುಪಡಿಸಿದೆ ಎಂದರು. ಮಹಿಳಾ-ನೇತೃತ್ವದ ಅಭಿವೃದ್ಧಿಯನ್ನು ಒಂದು ರಾಷ್ಟ್ರೀಯ ಲಕ್ಷಣವಾಗಿ ಬಲಪಡಿಸುವುದು ಅಗತ್ಯವೆಂದು ಈ ಬಾರಿಯ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಹೇಳಿದ್ದನ್ನು ನೆನಪಿಸಿದರು. ಯಾವುದೇ ಯೋಜನೆಯಲ್ಲಿ ಮಹಿಳಾ ಶಕ್ತಿಯ ಬಲ ತುಂಬಿದಾಗ ಅಸಾಧ್ಯವೆನಿಸಿದ್ದನ್ನೂ ಸಾಧ್ಯವಾಗಿಸಬಹುದು. ಭಾರತದ ಮಿಷನ್ ಚಂದ್ರಯಾನ ಸ್ತ್ರೀ ಶಕ್ತಿಗೊಂದು ಜೀವಂತ ದೃಷ್ಟಾಂತ. ಈ ಇಡೀ ಮಿಷನ್​ನಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಮತ್ತು ಇಂಜಿನಿಯರ್​ಗಳು ನೇರವಾಗಿ ಪಾಲ್ಗೊಂಡಿದ್ದರು. ವಿವಿಧ ವ್ಯವಸ್ಥೆಗಳ ಯೋಜನಾ ನಿರ್ದೇಶಕರು, ಯೋಜನಾ ಮ್ಯಾನೇಜರ್ ಮುಂತಾದ ಹೊಣೆಯನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಗಾಗಿ ಜಾಗತಿಕ ಚೌಕಟ್ಟನ್ನು ರಚಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಸಮಗ್ರ ವಿಧಾನವನ್ನು ಅಭಿವೃದ್ಧಿಪಡಿಸಬೇಕು ಎಂದೂ ಅವರು ಪ್ರತಿಪಾದಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ ಭಾನುವಾರ ಆಯೋಜಿಸಿದ್ದ ಬಿ20 ಶೃಂಗ ಇಂಡಿಯಾ 2023 ಉದ್ದೇಶಿಸಿ ಮಾತನಾಡಿದ ಅವರು, ಈಗ ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಸವಾಲು ಇದೆ. ಈ ವಿಷಯದಲ್ಲಿ ಹೆಚ್ಚು ಹೆಚ್ಚು ಸಮಗ್ರ ವಿಧಾನದ ಅಗತ್ಯವಿದೆ. ಇದಕ್ಕಾಗಿ ಜಾಗತಿಕ ಚೌಕಟ್ಟನ್ನು ರಚಿಸಬೇಕು. ಇದರಲ್ಲಿ ಎಲ್ಲ ಪಾಲುದಾರರ ಬಗ್ಗೆ ಕಾಳಜಿ ವಹಿಸಬೇಕು ಎಂದು ಮೋದಿ ಹೇಳಿದರು. ಹವಾಮಾನ ಬದಲಾವಣೆ, ಇಂಧನ ಕ್ಷೇತ್ರದ ಬಿಕ್ಕಟ್ಟು, ಆಹಾರ ಪೂರೈಕೆ ಸರಪಳಿ ಅಸಮತೋಲನ, ನೀರಿನ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಮೋದಿ, ಇಂತಹ ವಿಷಯಗಳು ವ್ಯಾಪಾರದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಈ ಸವಾಲುಗಳನ್ನು ಎದುರಿಸಲು ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ಚೀನಾದ ಛೆಂಗ್ಡುನಲ್ಲಿ ಈಚೆಗೆ ನಡೆದ ಜಾಗತಿಕ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ (ಡಬ್ಲ್ಯುಯುಜಿ) ಭಾರತೀಯ ಅಥ್ಲೀಟ್​ಗಳು ದಾಖಲಿಸಿರುವ ಸಾಧನೆಗಳನ್ನು ಗುಣಗಾನ ಮಾಡಿದ ಮೋದಿ, ಅಥ್ಲೀಟ್​ಗಳು ದಾಖಲೆಯ 26 ಪದಕಗಳನ್ನು ಗೆದ್ದು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿದರು. ಡಬ್ಲ್ಯುಯುಜಿಯಲ್ಲಿ ದೇಶದ ಕ್ರೀಡಾಪಟುಗಳು 11 ಚಿನ್ನ, ಐದು ಬೆಳ್ಳಿ ಹಾಗೂ 10 ಕಂಚಿನ ಪದಕಗಳೊಂದಿಗೆ ಇದುವರೆಗಿನ ಅತ್ಯುತ್ತಮ ಕೂಟ ಸಾಧನೆ ಮಾಡಿದ್ದಾರೆ. ಜುಲೈ 28ರಿಂದ ಆಗಸ್ಟ್ 8ರ ವರೆಗೆ ಕ್ರೀಡಾಕೂಟ ನಡೆದಿತ್ತು.
1959ರಿಂದಲೂ ನಡೆಯುತ್ತಿರುವ ಈ ಕೂಟದಲ್ಲಿ ಭಾರತ ಇದುವರೆಗೆ ಕೇವಲ 18 ಪದಕಗಳನ್ನು ಗೆದ್ದಿತ್ತು. ಅದಕ್ಕೆ ಹೋಲಿಸಿದಾಗ ಒಂದೇ ಕೂಟದಲ್ಲಿ 26 ಪದಕ ಸಾಧನೆ ಮಹತ್ವದ್ದಾಗಿದೆ ಎಂದು ಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಸಂಭ್ರಮಿಸಿದರು.
ವಿಶ್ವ ವಿವಿ ಕ್ರೀಡಾಕೂಟದಲ್ಲಿ ಸಂಯುಕ್ತ ಬಿಲ್ಲುಗಾರಿಕೆಯಲ್ಲಿ ತಲಾ ಒಂದು ಸ್ವರ್ಣ ಮತ್ತು ರಜತ ಪದಕ ಪಡೆದ ಬಿಲ್ಲುಗಾರ್ತಿ ಪ್ರಗತಿ ಜತೆ ಮಾತನಾಡಿದ ಪ್ರಧಾನಿ, ಈ ದೊಡ್ಡ ಯಶಸ್ಸಿನ ಬಗ್ಗೆ ನಿಮಗೇನೆನಿಸುತ್ತದೆ ಎಂದು ಪ್ರಶ್ನಿಸಿದರು. ಚಿನ್ನ ಗೆದ್ದಾಗ ಭಾರತೀಯ ಧ್ವಜವನ್ನು ಹಾರಿಸಿದ್ದು ಹೆಮ್ಮೆಯ ಕ್ಷಣವಾಗಿತ್ತು ಎಂದು ಪ್ರಗತಿ ರೋಮಾಂಚಕ ಕ್ಷಣದ ಅನುಭವ ಹಂಚಿಕೊಂಡರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + eight =
Remember me
