ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆ ಚಂದ್ರಯಾನ-3 ಭರ್ಜರಿ ಯಶಸ್ಸು ಗಳಿಸಿದೆ. 40 ದಿನಗಳ ಹಿಂದೆ ಉಡಾವಣೆ ಆಗಿದ್ದ ಚಂದ್ರಯಾನ-3 ಇಂದು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆಗಿದೆ.
ಈ ಯಶಸ್ಸಿನ ಅಂತಿಮ ಘಟ್ಟದ ರೋಚಕ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲೆಂದೇ ಇಸ್ರೋ ತನ್ನ ಅಧಿಕೃತ ಯೂ-ಟ್ಯೂಬ್ ಚಾನೆಲ್​, ಫೇಸ್​ಬುಕ್​ ಪೇಜ್​​ನಿಂದ ನೇರಪ್ರಸಾರ ಮಾಡಿತ್ತು. ಈ ಲೈವ್​ ಆರಂಭವಾದ ತಕ್ಷಣ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಲಕ್ಷಾಂತರ ಜನರು ನೋಡಲು ಆರಂಭಿಸಿದ್ದರು. ಮಾತ್ರವಲ್ಲ, ವೀಕ್ಷಿಸುವವರ ಸಂಖ್ಯೆ ನಿಮಿಷ ನಿಮಿಷಕ್ಕೂ ಲಕ್ಷಗಟ್ಟಲೆ ಏರಿಕೆ ಕಂಡಿತ್ತು.
ಇದನ್ನೂ ಓದಿ:ಚಂದ್ರಯಾನ-3 ಯಶಸ್ಸಿಗಾಗಿ ಇಸ್ರೋ ಅಧ್ಯಕ್ಷರಿಂದ ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥನೆ, ಪೂಜೆ
ಲೈವ್ ಆರಂಭವಾದ 15 ನಿಮಿಷಗಳಲ್ಲೇ 35 ಲಕ್ಷಕ್ಕೂ ಅಧಿಕ ಮಂದಿ ನೇರಪ್ರಸಾರ ನೋಡಲು ಆರಂಭಿಸಿದ್ದಾರೆ. ಇದು 25ನೇ ನಿಮಿಷದಲ್ಲಿ 45 ಲಕ್ಷಕ್ಕೂ ಅಧಿಕವಾಗಿದ್ದು, ಆಗ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. ನಂತರ ಕೆಲವೇ ನಿಮಿಷಗಳಲ್ಲಿ ಒಂದು ಹಂತದಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು.
ಇದನ್ನೂ ಓದಿ:ಚಂದ್ರಯಾನ-3: ಇಸ್ರೋ ಲೈವ್​​ಗೆ ಭರ್ಜರಿ ಪ್ರತಿಕ್ರಿಯೆ; ನಿಮಿಷ ನಿಮಿಷಕ್ಕೂ ಲಕ್ಷ ಲಕ್ಷ ಹೆಚ್ಚಳ..
ಒಂದು ಗಂಟೆ 11 ನಿಮಿಷಗಳ ಕಾಲ ನಡೆದ ಈ ನೇರಪ್ರಸಾರ ಒಟ್ಟು 33 ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ. 24 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, 18 ಸಾವಿರಕ್ಕೂ ಅಧಿಕ ಕಮೆಂಟ್ಸ್​ ಬಂದಿವೆ. ಇವು ಇನ್ನೂ ಏರುತ್ತಲೇ ಇವೆ. ಇನ್ನೂ ವಿಶೇಷ ಎಂದರೆ ಇದೊಂದೇ ಲೈವ್ ಇಸ್ರೋ ಅಧಿಕೃತ ಯೂಟ್ಯೂಬ್​ ಚಾನೆಲ್​ನ ಸಬ್​ಸ್ಕ್ರೈಬರ್ಸ್​ ಸಂಖ್ಯೆಯನ್ನು ಚಂದ್ರನಲ್ಲಿಗೆ ಜಿಗಿಯುವಂತೆ ಮಾಡಿದೆ.
ಅರ್ಥಾತ್, ಚಂದ್ರಯಾನ-3 ಮಿಷನ್​​ನ ಅಂತಿಮ ಘಟ್ಟದ ಲೈವ್​ ಇಸ್ರೋ ಅಫಿಷಿಯಲ್ ಎಂಬ ಅಧಿಕೃತ ಯೂಟ್ಯೂಬ್ ಚಾನೆಲ್​​ನ ಸಬ್​ಸ್ಕ್ರೈಬರ್ಸ್​ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಏರಿಸಿದೆ. ಇದೊಂದೇ ಲೈವ್​ನಿಂದ ಈ ಚಾನೆಲ್​ಗೆ 10 ಲಕ್ಷಕ್ಕೂ ಅಧಿಕ ಹೊಸ ಸಬ್​ಸ್ಕ್ರೈಬರ್ಸ್​ ಸಿಕ್ಕಿದ್ದಾರೆ. ಅಂದರೆ ಲೈವ್ ಆರಂಭದಲ್ಲಿ 2.59 ಮಿಲಿಯನ್ ಇದ್ದ ಸಬ್​ಸ್ಕ್ರೈಬರ್ಸ್ ಸಂಖ್ಯೆ ಲೈವ್ ಮುಗಿಯುವಷ್ಟರಲ್ಲಿ 3.6 ಮಿಲಿಯನ್​ಗೂ ಅಧಿಕ ಆಗಿದೆ.


ಯಶಸ್ವಿಯಾದ ಚಂದ್ರಯಾನ-3 ಲ್ಯಾಂಡರ್; ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 4 =
Remember me
