ಬೆಂಗಳೂರು:ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ವಿರೂಪಗೊಳಿಸಿದ ಚಾಯ್​​ವಾಲಾ ಚಿತ್ರವನ್ನು ನಟ ಪ್ರಕಾಶ್ ರಾಜ್ ಮೊನ್ನೆ ಪೋಸ್ಟ್ ಮಾಡಿಕೊಂಡಿದ್ದು, ವ್ಯಾಪಕ ಟೀಕೆಗೆ ಒಳಗಾಗಿತ್ತು. ಮಾತ್ರವಲ್ಲ, ಅದೇ ಕಾರಣಕ್ಕೆ ಪ್ರಕಾಶ್​ ರಾಜ್ ಟ್ರೋಲ್​ಗೂ ಒಳಗಾಗಿದ್ದರು.
ಆದರೆ ಆ ಟೀಕೆಗಳಿಗೆಲ್ಲ ಕ್ಯಾರೇ ಎನ್ನದ ಪ್ರಕಾಶ್ ರಾಜ್ ನಿನ್ನೆ ಮತ್ತೊಂದು ಎಕ್ಸ್ ಮಾಡಿ ಟೀಕಿಸಿದ್ದವರನ್ನು ಕೆಣಕಿದ್ದರು. ‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್​ವಾಲಾರನ್ನು ಸಂಭ್ರಮಿಸುವ ಆರ್ಮ್​ಸ್ಟ್ರಾಂಗ್ ಕಾಲದ ಜೋಕನ್ನು ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?’ ಎಂದು ಪ್ರಶ್ನಿಸಿದ್ದ ಪ್ರಕಾಶ್ ರಾಜ್​, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದರು.
ಇದನ್ನೂ ಓದಿ:ಚಂದ್ರಯಾನ-3: ಇಲ್ಲಿವೆ ನೋಡಿ ಚಂದ್ರನ ಲೇಟೆಸ್ಟ್​ ಫೋಟೋಗಳು!
ಅದಾದ ಮೇಲೆ ಪ್ರಕಾಶ್ ರಾಜ್ ವಿರುದ್ಧ ಅಸಹನೆ ಮತ್ತಷ್ಟು ಹೆಚ್ಚಾಗಿದ್ದು, ಟ್ರೋಲಿಗರು ಇನ್ನಷ್ಟು ಟ್ರೋಲ್ ಮಾಡಲಾರಂಭಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಕಾಶ್ ರಾಜ್ ಇನ್ನೊಂದು ಎಕ್ಸ್ ಮಾಡಿದ್ದಾರೆ. ಅನ್​ಅಕಾಡೆಮಿ ಟ್ರೋಲ್ಸ್ ಎಂದು ಉಲ್ಲೇಖಿಸಿ ಎಕ್ಸ್ ಮಾಡಿರುವ ಪ್ರಕಾಶ್ ರಾಜ್, ನಿಮಗೆ ಗೊತ್ತಿರುವುದು ಒಂದೇ ಚಾಯ್​ವಾಲಾ. 1960ರಿಂದ ಚಾಲ್ತಿಯಲ್ಲಿರುವ ನಮ್ಮ ಮಲಯಾಳಿ ಚಾಯ್​ವಾಲಾಗಳ ಕುರಿತ ಹೆಮ್ಮೆಯ ಈ ಸಂಗತಿ ನೋಡಿ ಎಂದಿರುವ ಅವರು ಆ ಕುರಿತ ಬರಹದ ಲಿಂಕ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ರೋಲಿಗರು ಓದಿ ವಿಷಯ ತಿಳಿದುಕೊಳ್ಳಿ ಎಂದೂ ಮತ್ತೆ ಕಾಲೆಳೆದಿದ್ದಾರೆ.
ATTENTION:-dear#Unacedemytrolls and#godimediawho know only one#Chaiwala.. proudly presenting .. the ever inspiring our own malayali chaiwala since 1960 s ..if you want to be educated please read#justaskinghttps://t.co/KGOnSIBmjq— Prakash Raj (@prakashraaj)August 22, 2023
ATTENTION:-dear#Unacedemytrolls and#godimediawho know only one#Chaiwala.. proudly presenting .. the ever inspiring our own malayali chaiwala since 1960 s ..if you want to be educated please read#justaskinghttps://t.co/KGOnSIBmjq
ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು, ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?: ನಟ ಪ್ರಕಾಶ್​ ರಾಜ್​ ಮತ್ತೊಂದು ‘ಎಕ್ಸ್​’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + thirteen =
Remember me
