ಬೆಂಗಳೂರು:ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ವಿರೂಪಗೊಳಿಸಿದ ಚಾಯ್​ವಾಲ್ ಚಿತ್ರವನ್ನು ಹಂಚಿಕೊಂಡು ತಮಾಷೆ ಮಾಡಿ ವಿವಾದಕ್ಕೀಡಾಗಿದ್ದ ನಟ ಪ್ರಕಾಶ್ ರಾಜ್, ಇದೀಗ ಚಂದ್ರಯಾನ-3 ಯಶಸ್ಸಿಗೆ ಮೆಚ್ಚಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ:ಟ್ರೋಲ್ ಮಾಡುವವರಿಗೆ ಗೊತ್ತಿರುವುದು ಒಂದೇ ಚಾಯ್​ವಾಲಾ: ನಟ ಪ್ರಕಾಶ್ ರಾಜ್​
‘ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು….ಸಂಭ್ರಮಿಸಲು .. ಇದು ದಾರಿಯಾಗಲಿ’ ಎಂದು ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಹಾರೈಸಿದ್ದಾರೆ.
ಇದನ್ನೂ ಓದಿ:ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು ‘ಇಸ್ರೋ’ ಸಬ್​ಸ್ಕ್ರೈಬರ್ಸ್​ ಸಂಖ್ಯೆ
ಚಂದ್ರಯಾನ-3ರ ಯಶಸ್ಸಿನ ಬಗ್ಗೆ ಪ್ರಕಾಶ್ ರಾಜ್ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಸಂತೋಷ ಹಂಚಿಕೊಂಡಿದ್ದಾರೆ. ಆದರೆ ಅವರ ಹಿಂದಿನ ಎರಡು ‘ಎಕ್ಸ್’​ಗಳಿಂದ ಬೇಸರಗೊಂಡಿದ್ದ ಹಲವರು, ಈಗ ಚಂದ್ರಯಾನ-3ರ ಯಶಸ್ಸಿನ ಬಳಿಕ ಸಂತೋಷ ಹಂಚಿಕೊಂಡು ಧನ್ಯವಾದ ಹೇಳಿದ್ದರೂ ಟ್ರೋಲ್ ಮಾಡುವುದನ್ನು ನಿಲ್ಲಿಸಿಲ್ಲ.
ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು#ISRO#Chandrayaan3#VikramLanderಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು….ಸಂಭ್ರಮಿಸಲು .. ಇದು ದಾರಿಯಾಗಲಿ.#justasking
— Prakash Raj (@prakashraaj)August 23, 2023

PROUD MOMENT for INDIA and to Humankind.. 🙏🏿🙏🏿🙏🏿Thank you#ISRO#Chandrayaan3#VikramLanderand to everyone who contributed to make this happen .. may this guide us to Explore and Celebrate the mystery of our UNIVERSE ..#justasking
— Prakash Raj (@prakashraaj)August 23, 2023

ಯಶಸ್ವಿಯಾದ ಚಂದ್ರಯಾನ-3 ಲ್ಯಾಂಡರ್; ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ

ಚಂದ್ರಯಾನವೂ, ಇಸ್ರೋ ಅಧ್ಯಕ್ಷರೂ..; ಹೀಗೊಂದು ಕಾಕತಾಳೀಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + seven =
Remember me
