ಬೆಂಗಳೂರು:ಇಂದು ಚಂದ್ರಯಾನ-3 ಯೋಜನೆಯಲ್ಲಿ ಮಹತ್ತರ ಬೆಳವಣಿಗೆ ನಡೆದಿದ್ದು ನೌಕೆಯಿಂದ ಲ್ಯಾಂಡರ್‍ ಮಾಡ್ಯೂಲ್‍ ಬೇರ್ಪಟ್ಟಿದೆ. ಪ್ರತೀ ಕ್ಷಣವೂ ಚಂದ್ರನಿಗೆ ಹತ್ತಿರವಾಗುತ್ತಿರುವ ಇಸ್ರೋ ನೌಕೆಯಿಂದ ಇಂದು ಲ್ಯಾಂಡರ್‍ ಮಾಡ್ಯೂಲ್‍ ಬೇರ್ಪಡುವುದು ಯೋಜನೆಯ ಮಹತ್ವದ ಭಾಗವಾಗಿದೆ.
ಅಂತಿಮ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3 ನೌಕೆಯಿಂದ ಇಂದು ಲ್ಯಾಂಡರ್ ಬೇರ್ಪಡಿಸುವ ಪ್ರಕ್ರಿಯೆ ಸುಮಾರು 1 ಗಂಟೆಗೆ ನಡೆದಿದೆ. ಮುಂದಿನ ವಾರದಲ್ಲಿ ವಿಕ್ರಮ್ ಲ್ಯಾಂಡರ್‌ನ ಸಾಫ್ಟ್‌ ಲ್ಯಾಂಡಿಂಗ್‍ ಆಗಬೇಕೆಂದಲ್ಲಿ ಲ್ಯಾಂಡರ್‍ ಸರಿಯಾಗಿ ಬೇರ್ಪಡುವುದು ಮಹತ್ವಪೂರ್ಣ ಘಟ್ಟವಾಗಿತ್ತು. ಆಗಸ್ಟ್ 23ರಂದು  ಚಂದ್ರಯಾನ -3ನ ಅಂತಿಮ ಸಕ್ಸಸ್ ಚಿತ್ರಣ ಗೊತ್ತಾಗಲಿದೆ.‌
ಸದ್ಯ ಚಂದ್ರಯಾನ-3ರ ಯಶಸ್ಸಿಗೆ ಇಡೀ ಭಾರತ ಕಾಯುತ್ತಿದ್ದು ತದೇಕ ಚಿತ್ತದಿಂದ ಲ್ಯಾಂಡರ್‍ ಸುರಕ್ಷಿತವಾಗಿ ಚಂದ್ರನ ಧ್ರುವ ಪ್ರದೇಶದಲ್ಲಿ ಇಳಿಯುವುದನ್ನು ಕಾಯುತ್ತಿದೆ. ಈ ಕುರಿತಾಗಿ ನೆಹರು ತಾರಾಲಯದ ವಿಜ್ಞಾನಿ ಆನಂದ್ ಹೇಳಿಕೆ ನೀಡಿದ್ದಾರೆ.
Chandrayaan-3 Mission:‘Thanks for the ride, mate! 👋’said the Lander Module (LM).LM is successfully separated from the Propulsion Module (PM)LM is set to descend to a slightly lower orbit upon a deboosting planned for tomorrow around 1600 Hrs., IST.Now, 🇮🇳 has3⃣ 🛰️🛰️🛰️…pic.twitter.com/rJKkPSr6Ct— ISRO (@isro)August 17, 2023
Chandrayaan-3 Mission:‘Thanks for the ride, mate! 👋’said the Lander Module (LM).LM is successfully separated from the Propulsion Module (PM)LM is set to descend to a slightly lower orbit upon a deboosting planned for tomorrow around 1600 Hrs., IST.Now, 🇮🇳 has3⃣ 🛰️🛰️🛰️…pic.twitter.com/rJKkPSr6Ct
ಅದಲ್ಲದೇ ಈ ಪ್ರಕ್ರಿಯೆ ಯಶಸ್ವಿ ಆಗಿ ಪೂರ್ಣಗೊಳ್ಳುತ್ತಿದ್ದಂತೆಯೇ ಇಸ್ರೋ ಕೂಡ ಟ್ವೀಟ್ ಮಾಡಿದ್ದು “ವಿಕ್ರಮ್ ಲ್ಯಾಂಡರ್, ಇಸ್ರೋ ನೌಕೆಗೆ ಯಾತ್ರೆ ಮಾಡಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದೆ” ಎಂದು ಕಾವ್ಯಾತ್ಮಕವಾಗಿ ಬರೆದಿದ್ದಾರೆ. ಅದರೊಂದಿಗೆ ಟ್ವೀಟ್‍ನಲ್ಲಿ “ಲ್ಯಾಂಡರ್ ಮಾಡ್ಯೂಲ್ ಪ್ರೊಪಲ್ಶನ್ ಮಾಡ್ಯೂಲ್‍ನಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಲ್ಯಾಂಡರ್ ಮೆಲ್ಲಮೆಲ್ಲನೇ ಚಂದ್ರನ ಕಡೆಗೆ ಪ್ರಯಾಣಿಸಲು ಪ್ರಾರಂಭಿಸಿದೆ. ನಾಳೆ ಸಂಜೆ ನಾಲ್ಕರ ವೇಳೆಗೆ (ಅಂತರಾಷ್ಟ್ರೀಯ ಸಮಯ) ಡೀ ಬೂಸ್ಟಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ” ಎಂದು ಮಾಹಿತಿ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
