ನವದೆಹಲಿ:ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಅವರು 2018ರಲ್ಲಿ ಮಾಡಿರುವ ಟ್ವೀಟ್​ ಇದೀಗ ವೈರಲ್​ ಆಗಿದೆ. ಟ್ವೀಟ್​ ಮಾಡಿದ ದಿನ ಖುಷ್ಬೂ ಅವರು ಕಾಂಗ್ರೆಸ್​ನ ವಕ್ತಾರೆಯಾಗಿದ್ದರು.
2018ರಲ್ಲಿ ಟ್ವೀಟ್​ ಮಾಡಿದ್ದ ಖುಷ್ಬೂ, ಪ್ರತಿಯೊಬ್ಬ ಮೋದಿಯ ಮುಂದೆ ಭ್ರಷ್ಟಾಚಾರದ ಉಪನಾಮವಿದೆ. ಆಗ ಯಾರಿಗಾದರೂ ವಿಷಯ ಅರ್ಥವಾಗುತ್ತದೆ, ಮೋದಿ ಎಂದರೆ ಭ್ರಷ್ಟಾಚಾರ. ಮೋದಿ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಿ, ಅದು ಸರಿ ಹೊಂದುತ್ತದೆ. ನೀರವ್​, ಲಲಿತ್​ ನಮೋ= ಭ್ರಷ್ಟಾಚಾರ ಎಂದು ಟ್ವೀಟ್​ ಮಾಡಿದ್ದರು.
ಇದನ್ನೂ ಓದಿ:ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ… ಇನ್ನು ಮುಂದೆಯೂ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ; ರಾಹುಲ್ ಗಾಂಧಿ
Yahan#Modiwahan#Modijahan dekho#Modi..lekin yeh kya?? Har#Modike aage#bhrashtachaarsurname laga hua hai..toh baat ko no samjho..#Modimutlab#bhrashtachaar..let's change the meaning of#Modito corruption..suits better..#Nirav#Lalit#Namo= corruption..👌👌😊😊
— KhushbuSundar (@khushsundar)February 15, 2018

ಖುಷ್ಬೂ ಮಾಡಿದ್ದ ಟ್ವೀಟ್​, 2019ರಲ್ಲಿ ರಾಹುಲ್​ ಗಾಂಧಿ ಆಡಿತ ಮಾತಿನ ನಿಖರ ಪಡಿಯಚ್ಚು ಆಗಿತ್ತು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ್ದ ರಾಹುಲ್​, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.
ರಾಹುಲ್​ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ, ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ಸೂರತ್​ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇದರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಸಲ್ಲಿಸಲು ರಾಹುಲ್​ ಅವರಿಗೆ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ, ಸಂಸತ್ತಿನ ಕಾರ್ಯದರ್ಶಿ ರಾಹುಲ್​ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.
ಇದನ್ನು ಓದಿ:ಪ್ರಾಣಾಪಾಯದಿಂದ ಪ್ರೇಮಿಗಳು ಪಾರು ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ನೊಂದು ಆತ್ಮಹತ್ಯೆ ಯತ್ನ ಸಾಯಲು ರಾಮದೇವರ ಬೆಟ್ಟದಿಂದ ಜಿಗಿದರು
ಈ ಬಗ್ಗೆ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ ಖುಷ್ಬೂ ಟ್ವೀಟ್​ ಭಾರೀ ಚರ್ಚೆಯಾಗುತ್ತಿದೆ. ರಾಹುಲ್​ಗೂ ಮುಂಚೆಯೇ ಖುಷ್ಬೂ ಟ್ವೀಟ್​ ಮಾಡಿದ್ದು, ಪೂರ್ಣೇಶ್​ ಮೋದಿ ಅವರು ಖುಷ್ಬೂ ವಿರುದ್ಧವೂ ದೂರು ದಾಖಲಿಸುತ್ತಾರಾ ಎಂದು ಕಾಂಗ್ರೆಸ್​ ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್​ನಲ್ಲಿದ್ದ ಖುಷ್ಬೂ 2021ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮೋದಿ ಎಂಬ ನಿಮ್ಮ ಶಿಷ್ಯನೊಬ್ಬ ಖುಷ್ಬೂ ಸುಂದರ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವಂತೆ ಮಾಡುತ್ತೀರಾ? ಎಂದು ಕಾಂಗ್ರೆಸ್​ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್​ ಟ್ವೀಟ್​ ಮೂಲಕ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಈವರೆಗೂ ಖುಷ್ಬೂ ಅವರು ಮಾಡಿರುವ ಟ್ವೀಟ್​ ಡಿಲೀಟ್​ ಆಗಿಲ್ಲ ಮತ್ತು ಅವರು ಕೂಡ ತಮ್ಮ ಟ್ವೀಟ್​ ವೈರಲ್​ ಆಗುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಲೋಕಸಭಾ ಸದಸ್ಯತ್ವದಿಂದ ರಾಹುಲ್​ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಖುಷ್ಬೂ, ಕೆಲವು ದಿನಗಳ ಹಿಂದೆ ತಾನು ದುರದೃಷ್ಟವಶಾತ್ ಸಂಸದ ಎಂದು ರಾಹುಲ್​ ಹೇಳಿಕೊಂಡಿದ್ದರು. ಅವರು ಮಾತು ಈಗ ನಿಜವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ:ಪ್ರಪಾತದಿಂದ ಉರುಳಿ ಮನೆಗೆ ಗುದ್ದಿದ ಕಾರು: ಅದೃಷ್ಟವಶಾತ್ ಐವರು ಪ್ರಾಣಾಪಾಯದಿಂದ ಪಾರು
ಇಷ್ಟೇ ಅಲ್ಲದೆ, ರಾಹುಲ್​ ವಿರುದ್ಧ ಕಿಡಿಕಾರಿರುವ ಖುಷ್ಬೂ, ಮನಮೋಹನ್ ಸಿಂಗ್ ಅವರು 2013ರಲ್ಲಿ ಹೊರಡಿಸಿದ ಸುಪ್ರೀಂಕೋರ್ಟ್​ ತೀರ್ಪಿನ ಮೇಲೆ ಸುಗ್ರೀವಾಜ್ಞೆಯನ್ನು ತರಲು ಬಯಸಿದ್ದರು. ರಾಹುಲ್ ಗಾಂಧಿ ಅದನ್ನು ತುಂಡುಗಳಾಗಿ ಹರಿದು ಹಾಕಿದರು. ವಿಪರ್ಯಾಸವೆಂದರೆ ಅವರ ಅನರ್ಹತೆಯು ಅದೇ ತೀರ್ಪಿನಿಂದ ಬಂದಿದೆ. ಕರ್ಮದ ಫಲ ಎಂದು ವ್ಯಂಗ್ಯವಾಡಿದ್ದಾರೆ.
Manmohan Singh ji wanted to bring in an ordinance on SC judgment passed in 2013.@RahulGandhitore it into pieces. Ironically, his disqualification comes from the same judgment.#Karma
— KhushbuSundar (@khushsundar)March 24, 2023

ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್​, 1951ರ ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ 8 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಒಂದು ವೇಳೆ ಸೂರತ್​ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದರೆ ರಾಹುಲ್​ ನಿರಾಳರಾಗಲಿದ್ದಾರೆ. ಇನ್ನು ರಾಹುಲ್​ರನ್ನು ಅನರ್ಹಗೊಳಿಸಿರುವ ನಿರ್ಧಾರ ಕೇಂದ್ರದ ರಾಜಕೀಯ ದ್ವೇಷ ಎಂದು ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಏ.​ 5ಕ್ಕೆ ಮುಂದೂಡಿಕೆ

ಪಂಚಮಸಾಲಿ ಮೀಸಲಾತಿ ಹೋರಾಟ ಸ್ಥಗಿತ; ವಿಜಯಾನಂದ ಕಾಶಪ್ಪನವರ್ ರಾಜೀನಾಮೆ

ಟಾಲಿವುಡ್ ನಟ ನರೇಶ್, ಪವಿತ್ರಾ ಲೋಕೇಶ್ ಮದುವೆ ರಿಯಲ್ ಅಲ್ಲ ರೀಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
