ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರಿಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಗೆ (ನೀಟ್​) ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ, ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಬೇರೆ ಊರು ಅಥವಾ ರಾಜ್ಯಗಳಿಗೆ ತೆರಳಲು ಅನನುಕೂಲವಾಗುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಈ ನಿರ್ಧಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಇಚ್ಛಿಸಿದಲ್ಲಿ ತಿದ್ದುಪಡಿ ಮಾಡಲು ಏಪ್ರಿಲ್​ 14ರವರೆಗೆ ಅವಕಾಶವಿದೆ. ಅಧಿಕೃತ ವೆಬ್​ಸೈಟ್​ ntaneet.nic.in ಗೆ ಲಾಗಿನ್​ ಆಗುವ ಮೂಲಕ ಬದಲಾವಣೆ ಮಾಡಬಹುದು ಎಂದು ಎನ್​ಟಿಎ ತಿಳಿಸಿದೆ.
ಇದಷ್ಟೇ ಅಲ್ಲದೆ, ಅರ್ಜಿಯಲ್ಲಿ ಬೇರೆ ಯಾವುದೇ ತಿದ್ದುಪಡಿಗಳನ್ನು ಮಾಡಲು ಅಭ್ಯರ್ಥಿಗಳು ಸ್ವತಂತ್ರರಾಗಿದ್ದಾರೆ.ಒಂದು ವೇಳೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅಭ್ಯರ್ಥಿಗಳು ಅಪೇಕ್ಷಿಸಿದ್ದರೂ, ಅಂತಹ ಬದಲಾವಣೆಗಳು ಅಂತಿಮವಾಗಿ ಎನ್​ಟಿಎ ವಿವೇಚನೆಗೆ ಒಳಪಟ್ಟಿರುತ್ತವೆ. ಒಂದೊಮ್ಮೆ ಆಡಳಿತಾತ್ಮಕ ಕಾರಣಕ್ಕಾಗಿ ಬೇರೆ ಕೇಂದ್ರಕ್ಕೆ ನಿಯೋಜಿಸಲ್ಪಟ್ಟಿದ್ದರೂ, ಈ ವಿಚಾರದಲ್ಲಿ ಎನ್​ಟಿಎ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ತಿದ್ದುಪಡಿ ಮಾಡಿ ಸಬ್ಮಿಟ್​ ಮಾಡಲು ಏಪ್ರಿಲ್​ 14ರ ಸಂಜೆ ಐದು ಗಂಟೆವರೆಗಷ್ಟೇ ಅವಕಾಶವಿದೆ. ಇನ್ನು ಶುಲ್ಕ ಪಾವತಿಗೆ ಅದೇ ದಿನ ರಾತ್ರಿ 11.50ರವರೆಗೆ ಕಾಲಾವಕಾಶ ನೀಡಲಾಗಿದೆ. (ಏಜೆನ್ಸೀಸ್)
ಶಾಲೆಗಳ ಮರು ಆರಂಭ ಆಗಸ್ಟ್​ಗೆ?: ಎರಡು ತಿಂಗಳು ಮುಂದೂಡಲು ಆಡಳಿತ ಮಂಡಳಿಗಳ ಮನವಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆ ಅರ್ಜಿ ಸಲ್ಲಿಕೆಗೆ ಮೇ 13 ರವರೆಗೆ ಅವಕಾಶ, ಒಂದು ತಿಂಗಳು ಅವಧಿ ವಿಸ್ತರಣೆ

ಸಹಕಾರ ಸಚಿವರೇ, ಜನಪ್ರತಿನಿಧಿಗಳೇ… ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲನೆ ಬಗ್ಗೆ ಇಷ್ಟೇಕೆ ನಿರ್ಲಕ್ಷ್ಯ ಹೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
