ನವದೆಹಲಿ:ಸಂಸತ್ ಅಧಿವೇಶನಗಳಲ್ಲಿ ಪಕ್ಷದ ಸಂಸದರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಈ ಹಿಂದೆ ಹಲವು ಬಾರಿ ಕರೆಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ‘ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗದಿದ್ದರೆ, ಬದಲಾವಣೆಗಳು ಸಹಜವಾಗಿಯೇ ನಡೆಯಲಿವೆ’ ಎಂದು ಸೂಚ್ಯವಾಗಿ ತಿಳಿಸುವ ಮೂಲಕ ಸಂಸತ್ ಅಧಿವೇಶನವನ್ನು ತಪ್ಪಿಸಿದವರಿಗೆ ಚುನಾವಣೆಯಲ್ಲಿ ಟಿಕೆಟ್ ಕೂಡ ತಪ್ಪಲಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಬೇಕು ಎಂಬ ಉದ್ದೇಶದಿಂದ ಜನರು ನಿಮ್ಮನ್ನು ಆರಿಸಿ ಕಳುಹಿಸುತ್ತಾರೆ. ಅವರ ಆಶಯಕ್ಕೆ ತಕ್ಕಂತೆ ಕಲಾಪಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕಲಾಪಗಳಿಗೆ ಗೈರಾಗುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದರೊಬ್ಬರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಪಕ್ಷದಿಂದ ವಿಪ್ ಜಾರಿ ಮಾಡಿದ್ದ ಸಂದರ್ಭದಲ್ಲಿ ಪಕ್ಷದ ಕೆಲ ಸಂಸದರು ಸಂಸತ್ತಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಪ್ರಧಾನಿ ಕಾರ್ಯಾಲಯದ ಗಮನಕ್ಕೂ ಬಂದಿತ್ತು. ಬಿಜೆಪಿ ಅಧ್ಯಕ್ಷರೊಂದಿಗೂ ಪ್ರಧಾನಿ ಈ ಬಗ್ಗೆ ಮಾತನಾಡಿದ್ದರು ಎನ್ನಲಾಗಿದೆ. ಹೀಗಾಗಿ, ಸಂಸದೀಯ ಸಭೆಯಲ್ಲಿ ಮೋದಿ, ಸಂಸದರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕ್ರೀಡೆಗಳನ್ನು ಆಯೋಜಿಸಿ:ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಕ್ರೀಡಾ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಸಂಸದರು ತಮ್ಮ ಕ್ಷೇತ್ರಗಳಲ್ಲಿ ವಿವಿಧ ಮಾದರಿ ಕ್ರೀಡೆಗಳನ್ನು ಆಯೋಜಿಸುತ್ತಿರಬೇಕು ಎಂದು ತಿಳಿಸಿರುವ ಪ್ರಧಾನಿ, ಯೋಗಾಭ್ಯಾಸ ಮತ್ತು ಸೂರ್ಯ ನಮಸ್ಕಾರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ.
ಸಂಸತ್ ಕಲಾಪ ಗಳಲ್ಲಿ ಪಾಲ್ಗೊಳ್ಳಿ ಎಂದು ಪದೇ ಪದೇ ನಿಮಗೆ ಮಕ್ಕಳಿಗೆ ಹೇಳಿದಂತೆ ಹೇಳುವುದು ಸರಿಯಲ್ಲ. ನೀವೇ ಸ್ವಯಂಪ್ರೇರಣೆಯಿಂದ ವರ್ತನೆ ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ, ಕಾಲಕ್ಕನುಗುಣವಾಗಿ ಬದಲಾ ವಣೆಗಳು ಸಂಭವಿಸಲಿವೆ. ಇದನ್ನು ನೀವು ಎಚ್ಚರಿಕೆ ಎಂದು ಭಾವಿಸಿದರೂ ಆದೀತು
|ನರೇಂದ್ರ ಮೋದಿಪ್ರಧಾನಿ
ಅಧಿವೇಶನಕ್ಕೆ ಬಹಿಷ್ಕಾರ:ತೆಲಂಗಾಣದಿಂದ ಅಕ್ಕಿ ಖರೀದಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಅಸಡ್ಡೆ ಪ್ರದರ್ಶಿಸಿದೆ ಎಂದು ಪ್ರತಿಭಟನೆ ವ್ಯಕ್ತ ಪಡಿಸಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಸಂಸದರು, ಅಧಿವೇಶನದ ಉಳಿದ ಅವಧಿಯನ್ನು ಬಹಿಷ್ಕರಿಸಲು ತೀರ್ವನಿಸಿದ್ದಾರೆ. ಟಿಆರ್​ಎಸ್ ಸಂಸದರು ಕಪು್ಪ ಅಂಗಿ ಧರಿಸಿ ಮಂಗಳವಾರ ಸಂಸತ್ತಿಗೆ ಬಂದಿ ದ್ದರು. ಅಕ್ಕಿ ಖರೀದಿ ಕುರಿತು ಉಭಯ ಸದನಗಳಲ್ಲಿ ರ್ಚಚಿಸಬೇಕು ಎಂಬ ಸಂಸದರ ಬೇಡಿಕೆಯನ್ನು ತಳ್ಳಿಹಾಕಿದ್ದರಿಂದ ಟಿಆರ್​ಎಸ್ ಸಂಸದರು ಸಭಾತ್ಯಾಗ ಮಾಡಿದರು.
ಸಬ್ಸಿಡಿ ಹೆಚ್ಚಳಕ್ಕೆ ಶಿಫಾರಸು:ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರ ಸಬ್ಸಿಡಿ ಹೆಚ್ಚಳ ಮಾಡಿದ್ದಂತೆ 2ನೇ ಹಂತದ ಯೋಜನೆಯಲ್ಲಿ ಬಿಡುಗಡೆ ಆಗಲಿರುವ 3 ಮತ್ತು 4 ಚಕ್ರಗಳ ವಾಹನಕ್ಕೂ ಸಬ್ಸಿಡಿ ಹೆಚ್ಚಳ ಮಾಡಬೇಕು ಎಂದು ಉದ್ಯಮ ಕುರಿತ ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ. ವಾಹನದ ಬಿಡಿ ಭಾಗಗಳ ಮೇಲಿನ ಆಮದು ಸುಂಕವನ್ನು ಹಂತಹಂತವಾಗಿ ಏರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಮೇಲೆ ಜಿಎಸ್​ಟಿ ದರಗಳನ್ನು ಕಡಿಮೆ ಮಾಡಬೇಕು ಎಂದು ಸಮಿತಿ ಹೇಳಿದೆ.
ದಿನದ ಮಟ್ಟಿಗೆ ಸಂತಸ್ ಕಲಾಪ ಮುಂದಕ್ಕೆ:ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಸಂಸತ್ ಉಭಯ ಸದನದಲ್ಲಿ ಪದೇ ಪದೆ ಗದ್ದಲ ಮಾಡಿದ ಕಾರಣ ಎರಡೂ ಸದನಗಳನ್ನು ದಿನದ ಮಟ್ಟಿಗೆ ಮುಂದೂಡ ಲಾಯಿತು.
ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಒತ್ತಾಯ:ಕ್ರಿಪ್ಟೋ ಕರೆನ್ಸಿ ಸೃಷ್ಟಿಸುತ್ತಿರುವ ಅಪಾಯ, ಅನಾಹುತಗಳ ಬಗ್ಗೆ ಕರ್ನಾಟಕ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ 2013-14ರಿಂದಲೇ ಎಚ್ಚರಿಕೆ ನೀಡುತ್ತಿದ್ದರು. ದೇಶದ ಆರ್ಥಿಕ ವ್ಯವಸ್ಥೆಗೆ ಅಪಾಯಕಾರಿ ಎನಿಸಿರುವ ಕ್ರಿಪ್ಟೋ ಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಜಾರ್ಖಂಡ್​ನ ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಒತ್ತಾಯಿಸಿದ್ದಾರೆ. ಕ್ರಿಪ್ಟೋ ಹಣವನ್ನು ಡ್ರಗ್ಸ್, ವೇಶ್ಯಾವಾಟಿಕೆ, ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ಉತ್ಪಾದನೆ, ಸಾಗಣೆಗೆ ಉಪಯೋಗಿಸಲಾಗುತ್ತದೆ. ಇಂಟರ್​ನೆಟ್​ನ ಡಾರ್ಕ್ ನೆಟ್​ನ್ನು ಬಳಸಿ ಕ್ರಿಪ್ಟೋ ವ್ಯವಹಾರಗಳು ನಡೆಯುತ್ತವೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ ಎಂದರು
ಮೃತ ರೈತರ ಪಟ್ಟಿ ನೀಡಿದ ರಾಹುಲ್:ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ವೇಳೆ ಮೃತರಾದ ರೈತರ ಪಟ್ಟಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮೃತ ರೈತರ ಪಟ್ಟಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಗೆ ನೀಡಿದ್ದಾರೆ. ಪಂಜಾಬ್​ನ 400 ರೈತರು ಮೃತಪಟ್ಟಿದ್ದರು ಮತ್ತು ಅವರ ಕುಟುಂಬಗಳಿಗೆ ಪಂಜಾಬ್ ಸರ್ಕಾರ ರೂ. 5 ಲಕ್ಷ ಪರಿಹಾರ ನೀಡಿದೆ. ಹರಿಯಾಣದ ಸುಮಾರು 70 ಮೃತ ರೈತರ ಪಟ್ಟಿಯೂ ನಮ್ಮ ಬಳಿ ಇದೆ. ರೈತರಿಗೆ ಅವರ ಹಕ್ಕುಗಳು ಸಿಗಬೇಕು. ಹಾಗೇ, ಪರಿಹಾರ ಮತ್ತು ನೌಕರಿಯನ್ನೂ ಕೊಡಿಸಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + three =
Remember me
