ನವದೆಹಲಿ:ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿ ಮಾಡುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಇದೀಗ ಇನ್​​ಸ್ಟಾಗ್ರಾಂ ಕಂಪೆನಿಯ ಮೇಲೆ ಗರಂ ಆಗಿದ್ದಾರೆ. ತಮ್ಮ ನೂತನ ಚಿತ್ರ ‘ತಲೈವಿ’ಯ ಪ್ರಮೋಷನ್​ ಲಿಂಕ್​ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯ ಪ್ರೊಫೈಲ್​ಗೆ ಸೇರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಮಾಜಿ ಸಿಎಂ ಹಾಗೂ ನಟಿಯಾಗಿದ್ದ ಜೆ.ಜಯಲಲಿತಾ ಅವರ ಜೀವನದ ಮೇಲೆ ಚಿತ್ರಿತವಾದ ಚಿತ್ರ ‘ತಲೈವಿ’ ಬಿಡುಗಡೆಗೆ ಸಿದ್ಧವಾಗಿರುವ ಕಂಗನಾ, ಇನ್​​ಸ್ಟಾಗ್ರಾಂನಲ್ಲಿ ಅದನ್ನು ಪ್ರಮೋಟ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಪ್​ಸೆಟ್​ ಆಗಿದ್ದಾರೆ.
ಇದನ್ನೂ ಓದಿ:ನೆರೆಹಾನಿ ಪರಿಶೀಲಿಸಲು ರಾಜ್ಯಕ್ಕೆ ಎನ್​ಡಿಆರ್​ಎಫ್​ ತಂಡಗಳ ಭೇಟಿ
“ನನ್ನ ಪ್ರೊಫೈಲ್​ ವಾರಿಫೈಡ್​ ಆಗಿದೆ. ಹಾಗಾಗಿ ನಾನು ಏನನ್ನಾದರೂ ಆ್ಯಡ್​ ಮಾಡಬೇಕೆಂದರೆ ತಮ್ಮ ಅಂತರರಾಷ್ಟ್ರೀಯ ಬಾಸ್​ಗಳ ಅನುಮತಿ ಬೇಕು ಎಂದು ಇನ್​ಸ್ಟಾಗ್ರಾಂ ಇಂಡಿಯಾ ಟೀಂ ಹೇಳಿದೆ. ಅದಕ್ಕಾಗಿ ಒಂದು ವಾರದಿಂದ ಕಾಯುತ್ತಿದ್ದೇನೆ. ನಿಮ್ಮ ಈಸ್ಟ್​ ಇಂಡಿಯ ಕಂಪೆನಿ ಪ್ರವೃತ್ತಿಯನ್ನು ಬದಲಿಸಿಕೊಳ್ಳಿ” ಎಂದು ಕಂಗನಾ ಜರಿದಿದ್ದಾರೆ.
“ನಾನು ನನ್ನ ತಲೈವಿ ಲಿಂಕನ್ನು ಸೇರಿಸಲು ಅಪ್ಲೈ ಮಾಡಿದಾಗಿನಿಂದ ನನ್ನ ಖಾತೆಯ ಎಡಿಟ್​​ ಸೆಕ್ಷನ್ ಲಾಕ್ ಆಗಿದ್ದು, ಇನ್​​ಸ್ಟಾಗ್ರಾಂನ ಅನುಮೋದನೆಗೆ ಕಾಯಬೇಕಾಗಿದೆ. ವೆಬ್​ಸೈಟ್​ ಸೆಕ್ಷನ್​ನಲ್ಲೂ ನನ್ನ ಚಿತ್ರದ ಲಿಂಕನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಇಂಥ ಅನ್​ಪ್ರೊಫೆಷನಲಿಸಂಅನ್ನು ಒಪ್ಪಿಕೊಳ್ಳಲಾಗುವುದಿಲ್ಲ” ಎಂದು ಕಂಗನಾ ಗುಡುಗಿದ್ದಾರೆ.(ಏಜೆನ್ಸೀಸ್)
ಕುಡಿದ ಮತ್ತಿನಲ್ಲಿ ಗಲಾಟೆ: ಹೆಲ್ಮೆಟ್​ನಿಂದ ಹೊಡೆದು ಕಂಟ್ರಾಕ್ಟರ್ ಕೊಲೆ

ಸೂಪರ್​ ಮಾರ್ಕೆಟ್​ನಲ್ಲಿ 6 ಜನರಿಗೆ ಚಾಕು ಇರಿತ… ‘ಉಗ್ರವಾದಿ’ಗೆ ಅಂತ್ಯ ಹಾಡಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
