ಲಖನೌ:ಉತ್ತರ ಪ್ರದೇಶದ ಸೆರೆಮನೆಗಳಲ್ಲಿರುವ ಕೈದಿಗಳು ಹನುಮಾನ್​ ಚಾಲೀಸಾ ಮತ್ತು ಸುಂದರಕಾಂಡ ಪಠಣ ಮಾಡುವ ಹಾಗೂ ವ್ಯಕ್ತಿತ್ವ ವಿಕಸನ ತಂತ್ರಗಳನ್ನು ಕಲಿಯುವ ದಿನಗಳು ಸಮೀಪಿಸಿವೆ. ಯಾವುದೇ ಧಾರ್ಮಿಕ ತಾರತಮ್ಯ, ಅಜೆಂಡಾ ಅಥವಾ ಒತ್ತಡವಿಲ್ಲದೆ ವೈಯಕ್ತಿಕ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಯೋಜನೆಯ ರೂವಾರಿ ರಾಜ್ಯದ ಬಂದೀಖಾನೆ ಸಚಿವ ಧರ್ಮವೀರ್​ ಪ್ರಜಾಪತಿ ಹೇಳಿದ್ದಾರೆ.
ಜನರಿಗೆ ವ್ಯಕ್ತಿತ್ವ ವಿಕಸನದ ಪಾಠಗಳು ಮತ್ತು ಮಂತ್ರಗಳನ್ನು ಕಲಿಸಲು ‘ಭಗವಾನ್​ ಹನುಮಾನ್​’ಗಿಂತ ಉತ್ತಮ ಗುರು ಬೇರೆ ಯಾರೂ ಇಲ್ಲ ಎಂದು ಪ್ರಜಾಪತಿ ಪ್ರತಿಪಾದಿಸಿದ್ದಾರೆ. ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಅಮೂಲ್ಯ ಪಾಠಗಳನ್ನು ಕಲಿಯಿರಿ ಎಂದವರು ಕೈದಿಗಳಿಗೆ ಕರೆ ನೀಡಿದ್ದಾರೆ.
ಕೈದಿಗಳ ವ್ಯಕ್ತಿತ್ವವನ್ನು ಉನ್ನತಿಕರಿಸುವುದು ಮಾತ್ರವೇ ಈ ಉಪಕ್ರಮದ ಉದ್ದೇಶವಾಗಿದೆ ಎಂದು ಅಜಂಗಢದ ಜೈಲಿನ ಕೈದಿಗಳೊಂದಿಗೆ ಸಂವಹನ ನಡೆಸುವ ಸಂದರ್ಭದಲ್ಲಿ ಅವರು ಹೇಳಿದರು. ಈ ಯೋಜನೆಯ ಅಂಗವಾಗಿ ರಾಜ್ಯ ಸರ್ಕಾರ, ಹನುಮಾನ್​ ಚಾಲೀಸಾ ಪಠಣ ಮಾಡುವ ಆಸಕ್ತಿ ತೋರುವ ಕೈದಿಗಳಿಗೆ ಸಾಹಿತ್ಯವನ್ನು ವಿತರಿಸಲಿದೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
