|ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.
‘ಹಿಮಾಲಯ’ ಶಬ್ದಕ್ಕೆ ವಿಶೇಷ ಅರ್ಥವಿದೆ. ‘ಹಿಮ’ ಎಂದರೆ ‘ಮಂಜು’, ‘ಆಲಯ’ ಎಂದರೆ ‘ನಿವಾಸ’. ಹಿಮಾಲಯವು ಯೋಗ, ಯಜ್ಞ, ಆಧ್ಯಾತ್ಮಿಕ ಸಾಧನೆಗಳ ಭದ್ರ ನೆಲೆಬೀಡು. ಹಿಂದಿನಿಂದಲೂ ಸಾಧು-ಸಂತರ ವಾಸಸ್ಥಳ. ಅದರಲ್ಲೂ ಸಾಕ್ಷಾತ್ ಶಿವನೇ ನೆಲೆಸಿರುವ ಸ್ಥಳವಾಗಿದೆ.
‘ಚಾರ್​ಧಾಮ್ ಎಂದರೆ ಗಂಗೋತ್ರಿ, ಯಮುನೋತ್ರಿ, ಬದರೀನಾಥ್ ಮತ್ತು ಕೇದಾರನಾಥ್ ಎಂಬ ನಾಲ್ಕು ಬೆಟ್ಟಗಳು. ಇವು ಉತ್ತರಾಖಂಡದಲ್ಲಿವೆ. ಇಲ್ಲಿರುವ ದೇವಾಲಯವು ವರ್ಷಪೂರ್ತಿ ಬಾಗಿಲು ತೆರೆದಿರುವುದಿಲ್ಲ. ಏಕೆಂದರೆ, ಚಳಿಗಾಲದಲ್ಲಿ ಇಲ್ಲಿ ಪ್ರಯಾಣ ಮಾಡಲು ಕಷ್ಟ. ವರ್ಷದಲ್ಲಿ ಹೆಚ್ಚು ಎಂದರೆ ಆರು ತಿಂಗಳು ಮಾತ್ರ ಈ ದೇವಾಲಯದ ದರ್ಶನ. ಸಾಮಾನ್ಯವಾಗಿ ಅಕ್ಷತದಿಗೆ ದಿನ ದೇವಾಲಯದ ಬಾಗಿಲು ತೆರೆದರೆ ಅದು ದೀಪಾವಳಿಯ ಬಲಿಪಾಡ್ಯಮಿತನಕ ತೆರೆದಿರುತ್ತದೆ.
ಗಂಗೋತ್ರಿ:ಗಂಗೋತ್ರಿಗೆ ಹರಿದ್ವಾರ-ಋಷಿಕೇಶದ ಮೂಲಕ ಹೋಗಬೇಕು. ಹರಿದ್ವಾರದಿಂದ ಮಿನಿ ಬಸ್ಸು, ಜೀಪು, ಕಾರು, ಸಣ್ಣ ಸಣ್ಣ ವಾಹನಗಳು ಹಾಗೂ ವಿಮಾನದ ವ್ಯವಸ್ಥೆ ಇರುವುದು. ಪ್ರಯಾಣ ಆರಂಭ ಆಗುವುದು ಗಂಗಾನದಿಯ ಪಕ್ಕದಿಂದ ಹಾಗೂ ಪರ್ವತಗಳ ಶ್ರೇಣಿಗಳ ನಡುವೆ. ಬೆಟ್ಟವನ್ನು ಏರಿ 200 ಕಿ.ಮೀ. ಪ್ರಯಾಣದ ನಂತರ ‘ಉತ್ತರ ಕಾಶಿ’ ಸಿಗುವುದು. ಈ ಊರು ಸಹ ಗಂಗಾನದಿಯ ದಡದಲ್ಲಿಯೇ ಇದೆ. ಉತ್ತರಕಾಶಿಯಿಂದ 50 ಕಿ.ಮೀ ದೂರ ಹೋದರೆ ‘ಗಂಗ್ಯಾನಿ’ ಎಂಬ ಸಣ್ಣ ಊರು ಸಿಗುವುದು. ಇಲ್ಲಿಂದ 20 ಕಿ.ಮೀ. ದೂರ ಸಂಚರಿಸಿದರೆ ‘ಗಂಗೋತ್ರಿ’ ಸಿಗುವುದು. ಅಲ್ಲಿ ಸಾಮಾನ್ಯವಾಗಿ ಭಕ್ತರು ಗಂಗಾಸ್ನಾನ ಮಾಡಿ ಗಂಗಾದೇವಿ ದರ್ಶನ ಮಾಡಲು ಹೋಗಬಹುದು. ಗಂಗೋತ್ರಿಯಿಂದ ಅಂದರೆ ಬೆಟ್ಟದ ಮೇಲೆ 18 ಕಿ.ಮೀ. ದೂರ ಚಾರಣ ಮಾಡಿದರೆ ‘ಗೋಮುಖ’ ಬೆಟ್ಟ. ಇಲ್ಲಿ ನಾಲ್ಕು ಆಶ್ರಮಗಳಿವೆ. ಗೋಮುಖದಿಂದ 4 ಕಿ.ಮೀ. ದೂರ ಚಾರಣ ಮಾಡಿದರೆ ‘ತಪೋವನ’ ಎಂಬ ಸ್ಥಳ ಸಿಗುವುದು. ಇಲ್ಲಿಯೇ ‘ಗಂಗಾ’ ಉಗಮಸ್ಥಾನ ಇದೆ. ಗೋಮುಖಿಗೆ ಹೋಗಲು ಪ್ರತಿದಿನ 150 ಮಂದಿಗೆ ಮಾತ್ರ ಅವಕಾಶ. ಅರಣ್ಯ ಇಲಾಖೆ ಅನುಮತಿ ಬೇಕಾಗುವುದು. ಈ ಸ್ಥಳಕ್ಕೆ ನಡೆದು ಹೋಗಲು ಆಗದಿದ್ದರೆ ಕುದುರೆ ಹಾಗೂ ಡೋಲಿ ವ್ಯವಸ್ಥೆಯಿದೆ.
ನಾವು ಭಗವಂತನ ಕಡೆ ಒಂದು ಹೆಜ್ಜೆಯಿಟ್ಟರೆ ಅವನು ಹತ್ತು ಹೆಜ್ಜೆ ಮುಂದೆ ನಡೆಸುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾಗಬೇಕು. ಜೀವನದಲ್ಲಿ ಒಮ್ಮೆಯಾದರೂ ಚಾರ್​ಧಾಮ್ ಯಾತ್ರೆ ಮಾಡಲೇಬೇಕು.
|ರಾಮಕೃಷ್ಣ ಪರಮಹಂಸರು
ಯಮುನೋತ್ರಿ:ಯಮುನೋತ್ರಿಗೆ ಹೋಗಬೇಕಾದರೆ ಗಂಗೋತ್ರಿಯಿಂದ ಮತ್ತೆ ಹಿಂದೆ ಬಂದು ಉತ್ತರಕಾಶಿಯಿಂದ ಪ್ರಯಾಣ ಮಾಡಬಹುದು. ಇಲ್ಲಿಯೂ ಸಣ್ಣ ವಾಹನದಿಂದ ಹೋಗಬೇಕು. ಉತ್ತರಕಾಶಿಯಿಂದ ಹೊರಟರೆ 120 ಕಿ.ಮೀ. ಸಾಗಿದ ನಂತರ ಹನುಮಾನ್ ಚಟ್ಟಿ ಎಂಬ ಊರು ಸಿಗುವುದು. ಇಲ್ಲಿನ ರಸ್ತೆ ಅಷ್ಟು ಸರಿಯಾಗಿಲ್ಲ. ಇಲ್ಲಿಂದ 10 ಕಿ.ಮೀ. ದೂರ ಹೋದರೆ ‘ಜಾನಿಕಿಚಟ್ಟಿ’ ಸಿಗುವುದು. ಇಲ್ಲಿಂದ ಮುಂದೆ ಇರುವುದೇ ‘ಯಮುನೋತ್ರಿ’. ಜಾನಿಕಿಚಟ್ಟಿಯಿಂದ ಯಮುನೋತ್ರಿಗೆ ಹೋಗಲು ಕುದುರೆ ಹಾಗೂ ಡೋಲಿ ವ್ಯವಸ್ಥೆ ಇದೆ. ಯಮುನೋತ್ರಿಯಲ್ಲಿ ಯಮುನಾದೇವಿ ದೇವಾಲಯವಿದೆ. ಇಲ್ಲಿಯೇ ಯಮುನೆ ನದಿ ಉಗಮವಾಗುವುದು. ಈ ದೇವಾಲಯದಲ್ಲಿ ಗಂಗಾಮಾತೆ, ಸರಸ್ವತಿಮಾತೆ ಹಾಗೂ ಯಮುನಾಮಾತೆಯ ವಿಗ್ರಹಗಳಿವೆ. ಇಲ್ಲಿಯೂ ಬಿಸಿನೀರಿನ ಬುಗ್ಗೆ ಇದೆ. ಇಲ್ಲಿಂದ ಶ್ರೀನಗರ ಎಂಬ ಊರಿನ ಮಾರ್ಗವಾಗಿ ಬದರಿಗೆ ಪ್ರಯಾಣ ಮಾಡಬಹುದು.
ಬದರಿನಾಥ:ಬದರಿನಾಥಕ್ಕೆ ಹರಿದ್ವಾರದಿಂದಲೂ ಪ್ರಯಾಣಿಸಬಹುದು. ಇಲ್ಲಿಂದ 160 ಕಿ.ಮೀ. ಸಾಗಿದರೆ ರುದ್ರಪ್ರಯಾಗ ಎಂಬ ಊರು ಸಿಗುವುದು. ಇಲ್ಲಿ ಉಳಿಯಲು ಆಶ್ರಮಗಳು, ಗೆಸ್ಟ್​ಹೌಸ್​ಗಳು ಇವೆ. ಈ ಸ್ಥಳದಲ್ಲಿ ಮಂದಾಕಿನಿ ಹಾಗೂ ಅಲಕನಂದಾ ನದಿಗಳ ಸಂಗಮವಿದೆ. ಇಲ್ಲಿಂದ ಬದರಿನಾಥಕ್ಕೆ ಹೋಗಬೇಕು. ಇದು ವೈಷ್ಣವ ಕ್ಷೇತ್ರ. ಶಂಕರಾಚಾರ್ಯರಿಗೆ ನಾರದಕುಂಡದಲ್ಲಿ ಬದರಿನಾಥನ ವಿಗ್ರಹ ದೊರಕಿತ್ತು. ಅದನ್ನು ಅವರೇ ಸ್ವತಃ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ದೇವಾಲಯವು 8ನೇ ಶತಮಾನದಲ್ಲಿ ನಿರ್ವಣವಾಗಿದೆ. ಇಲ್ಲಿಯೂ ಬಿಸಿನೀರಿನ ಬುಗ್ಗೆ ಇದೆ. ಇಲ್ಲಿ ಸ್ನಾನ ಮಾಡಿ ನಂತರ ಬದರಿನಾಥನ ದರ್ಶನ ಮಾಡುವುದು ವಾಡಿಕೆ. ಬ್ರಹ್ಮಕಪಾಲದಲ್ಲಿ ಪಿತೃತರ್ಪಣಕ್ಕೆ ವ್ಯವಸ್ಥೆಯಿದೆ. ಇಲ್ಲಿಂದ 3 ಕಿ.ಮೀ. ಸಾಗಿದರೆ ಶ್ರೀಮಾನ್ ನಾರಾಯಣ ಪಾದುಕೆಯನ್ನು ನೋಡಬಹುದು. ಬದರಿನಾಥದಲ್ಲಿ ರಾತ್ರಿ ಆರತಿ ವಿಶೇಷ. ಇಲ್ಲಿ ನರ ಹಾಗೂ ನಾರಾಯಣ ಎಂಬ ಬೆಟ್ಟವಿದೆ. ವ್ಯಾಸ ಮುನಿಗಳು ತಪಸ್ಸು ಮಾಡಿದ ಗುಹೆಯೂ ಇದೆ. ಪ್ರಯಾಣಕ್ಕೆ ಕುದುರೆ ಹಾಗೂ ಡೋಲಿ ವ್ಯವಸ್ಥೆ ಇದೆ.
ಕೇದಾರನಾಥ:ಕೇದಾರನಾಥಕ್ಕೆ ಹೋಗಲು ಹರಿದ್ವಾರದಿಂದ ರುದ್ರಪ್ರಯಾಗಕ್ಕೆ ಬಂದು ಅಲ್ಲಿಂದ 75 ಕಿ.ಮೀ. ದೂರ ಸಾಗಿದರೆ ‘ಗೌರಿಕುಂಡ’ ಎಂಬ ಸ್ಥಳ ಸಿಗುವುದು. ಗೌರಿಕುಂಡದಿಂದ ಕೇದಾರಕ್ಕೆ ಹೋಗಲು ಕುದುರೆ ಮತ್ತು ಡೋಲಿ ವ್ಯವಸ್ಥೆಯಿದೆ. 15 ಕಿ.ಮೀ ದೂರ ಆಗುವುದು. ಕೇದಾರನಾಥ ದ್ವಾದಶ ಜ್ಯೋತಿರ್ಲಿಂಗದಲ್ಲಿ ಒಂದು.
ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯ ಸಾಧಿಸಿದ ನಂತರ, ದಾಯಾದಿಗಳನ್ನು ಸಂಹರಿಸಿದ್ದರಿಂದ ಪಾಪವುಂಟಾಗಿದೆ ಎಂದು ತಿಳಿದು ಈ ಸ್ಥಳಕ್ಕೆ ಬಂದು ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಆಗ ಶಿವನು ನಂದಿಯ ರೂಪದಲ್ಲಿ ಪ್ರತ್ಯಕ್ಷನಾದ ಎಂಬುದರ ಪ್ರತೀಕವಾಗಿ ಕೇದಾರೇಶ್ವರನ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಪ್ರತೀತಿಯಿದೆ. ಪಕ್ಕದಲ್ಲಿ ಮಂದಾಕಿನಿ ನದಿಯ ಉಗಮ ಸ್ಥಾನವಿದೆ. ಕೇದಾರನಾಥನ ದರ್ಶನ ಮಾಡಿದರೆ ರುದ್ರಲೋಕ ಪ್ರಾಪ್ತಿ ಆಗುವುದು ಎಂಬ ನಂಬಿಕೆಯಿದೆ. ಈ ದೇವಾಲಯದ ಹಿಂದೆ ಗುಹೆ ಇದೆ. ಈ ಗುಹೆ ಒಳಗೆ ಹೋಗಿ ಶಂಕರಾಚಾರ್ಯರು ಅಂತರ್ಧಾನವಾದರು ಎಂದು ಹೇಳುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಶೃಂಗೇರಿ ಶಾರದಾಪೀಠದಿಂದ ಕಳಿಸಿದ ಶಂಕರಾಚಾರ್ಯರ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಸೋನಾಪ್ರಯಾಗ್, ವಾಸಕೀತಾಳ್ ಎಂಬ ಸ್ಥಳವನ್ನು ನೋಡಬಹುದು.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)
‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
