ಉತ್ತರ ಪ್ರದೇಶ:ವಧುವಿನ ಮನೆಗೆ ಮೆರವಣಿಗೆ ಮೂಲಕ ಹೋಗಲು ಸಿದ್ಧನಿದ್ದ ಮದುವೆ ಗಂಡಿಗೆ ಅಚ್ಚರಿಯೊಂದು ಕಾದಿತ್ತು. ವಧುವಿನ ಮನೆಗೆ ಮೆರವಣಿಗೆಯಲ್ಲಿ ಸಾಗಿದರೆ ಕೊಲೆ ಮಾಡುತ್ತೇವೆ ಎಂಬ ಬೆದರಿಕೆ ಪತ್ರ ಕಾಣಸಿಕ್ಕಿದೆ. ಇದು ಸಂಭ್ರಮದಲ್ಲಿದ್ದ ಎಲ್ಲರನ್ನೂ ಚಿಂತೆಗೆ ದೂಡಲು ಕಾರಣವಾಗಿದೆ. ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಸಂಭೋಲಿ ಕೊಟ್ವಾಲಿ ಪ್ರದೇಶದ ಫರೀದ್‌ಪುರ ಗ್ರಾಮದಲ್ಲಿ.
“ದುಲ್ಹೆ ರಾಜಾ… ನನಗೆ ವರ್ಚಸ್ಸು ಇದೆ. ನೀನು ಮೆರವಣಿಗೆಯೊಂದಿಗೆ ಬರಬೇಡ. ಒಂದು ವೇಳೆ ಬಂದರೆ ಕೊಲೆ ಮಾಡುತ್ತೇವೆ” ಎಂದು ಪತ್ರದಲ್ಲಿ ಬರೆದು ಮದುವೆ ಗಂಡಿಗೆ ಬೆದರಿಕೆ ಹಾಕಲಾಗಿದೆ.
ಪತ್ರದಲ್ಲಿ, ಮದುಮಗ ಮೊಂಟೋ ಸಿಂಗ್, ಮದುವೆಗೆ ದಿಬ್ಬಣದಲ್ಲಿ ಬರಬೇಡ. ಒಂದು ವೇಳೆ ಆದೇಶವನ್ನು ಮೀರಿ ಬಂದಿದ್ದೇ ಆದಲ್ಲಿ ಜೀವ ಸಹಿತ ಉಳಿಸುವುದಿಲ್ಲ. ಸಂಭ್ರಮದ ದಿಬ್ಬಣವನ್ನು ಸ್ಮಶಾನವನ್ನಾಗಿ ಮಾಡುತ್ತೇನೆ. ಹಬ್ಬದ ಸಂಭ್ರಮದಲ್ಲಿ ಮಾತ್ರೆಗಳನ್ನು ತಿನ್ನುವಂತೆ ಮಾಡಿಕೊಳ್ಳಬೇಡ. ಇದು ಸದ್ಯದ ಟ್ರೇಲರ್. ಪೂರ್ತಿ ಸಿನಿಮಾವನ್ನು ಬಾರಾತ್​ನಲ್ಲಿ ಮೂಡಿ ಬರಲಿದೆ. ಇಂತಿ ನಿನ್ನ ಸ್ನೇಹಿತ ಡಿಫಾಲ್ಟರ್ ಎಂದು ಬರೆಯಲಾಗಿದೆ.
ಬೆದರಿಕೆ ಪತ್ರಗಳನ್ನು ವರನ ಮನೆಯ ಹೊರಗೆ ಮತ್ತು ಸುತ್ತಲಿನ ಸ್ಥಳಗಳಲ್ಲಿ ಅಂಟಿಸಲಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ತನಿಖೆಗೆ ಆಗ್ರಹಿಸಲಾಗಿದೆ. ಸದ್ಯ ವರನಿಗೆ ಬಂದಿರುವ ಬೆದರಿಕೆ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twenty =
Remember me
