ಮೀರತ್​:ಶಿಕ್ಷಕರೆಂದರೆ ಗೌರವ, ಭಯ ಭಕ್ತಿ ಎಲ್ಲವೂ ಇರುತ್ತದೆ. ಆದರೆ ಅದೇ ಶಿಕ್ಷಕ ತನ್ನ ಕೆಲಸ ಬಿಟ್ಟು ವಿದ್ಯಾರ್ಥಿಗಳೊಂದಿಗೆ ಬೇರೆಯ ರೀತಿಯಲ್ಲಿ ನಡೆದುಕೊಳ್ಳಲು ಆರಂಭಿಸಿದರೆ? ಪರೀಕ್ಷೆಯೊಂದಕ್ಕೆ ತಯಾರಾಗಲು ಪ್ರಾಧ್ಯಾಪಕರ ಸಹಾಯ ಕೇಳಿದ ವಿದ್ಯಾರ್ಥಿನಿ ಜತೆ ಪ್ರಾಧ್ಯಾಪಕ ಅಸಭ್ಯವಾಗಿ ಮೆಸೇಜ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.
ಮೀರತ್​ನಲ್ಲಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ (ಸಿಸಿಎಸ್‌ಯು) ಪ್ರಾಧ್ಯಾಪಕರೊಬ್ಬರು ಎಂ.ಫಿಲ್​ ವಿದ್ಯಾರ್ಥಿನಿ ಜತೆ ಮಾಡಿರುವ ವಾಟ್ಸ್​ಆ್ಯಪ್​ ಚಾಟ್​ ವೈರಲ್​ ಆಗಿದೆ. “ನಿನ್ನ ಮೂಗು ಚಂದವಿದೆ. ನಿನ್ನಂತ ಸುಂದರ ಯುವತಿಯೊಂದಿಗಿನ ಸ್ನೇಹವನ್ನು ಯಾರು ನಿರಾಕರಿಸುತ್ತಾರೆ? ನಿನ್ನ ಡಿಪಿ ಚೇಂಜ್​ ಮಾಡು. ನೀನು ಒಂಚೂರು ತೆಳ್ಳಗಾಗಬೇಕು. ನೀನು ದಪ್ಪವಿದ್ದರೂ ತುಂಬಾ ಸುಂದರವಾಗಿ ಕಾಣ್ತೀಯ. ನಿನ್ನ ಉದ್ದ ಮೂಗು ಎಂತರನ್ನಾದರೂ ಆಕರ್ಷಿಸುತ್ತದೆ” ಎಂದು ಪ್ರಾಧ್ಯಾಪಕ ಯುವತಿಗೆ ಮೆಸೇಜ್​ ಮಾಡಿದ್ದಾನೆ.
ಅವಿವಾಹಿತ ಪ್ರಾಧ್ಯಾಪಕ ತನ್ನ ಬಳಿ ಪರೀಕ್ಷೆಗಳಲ್ಲಿ ಪಾಸ್ ಆಗಲು ಸಹಾಯ ಕೇಳಿ ಬರುವ ವಿದ್ಯಾರ್ಥಿನಿಯರೊಂದಿಗೆ ಇದೇ ರೀತಿ ಹಲವು ಬಾರಿ ವರ್ತಿಸಿರುವುದಾಗಿ ಅನೇಕರು ಆರೋಪಿಸಿದ್ದಾರೆ. ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ ಬಾಲಾಜಿ ಅವರಿಗೂ ವಿಚಾರ ತಲುಪಿದ್ದು, ಈ ವಿಚಾರವಾಗಿ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಅವರು ಸಿಸಿಎಸ್​ಯು ಗೆ ಕೋರಿದ್ದಾರೆ. (ಏಜೆನ್ಸೀಸ್​)
ಗಂಡನಿಗೆ ಗುಡ್ ಬೈ ಹೇಳಲು ಸಿದ್ದಳಾದ ಈ ಮಾದಕ ನಟಿ

ದಾವಣಗೆರೆಯಲ್ಲಿ ಭೀಕರ ಅಪಘಾತ: ನಡುರಸ್ತೆಯಲ್ಲೇ ಹೊತ್ತಿಉರಿದ ಲಾರಿ-ಕಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 7 =
Remember me
