ಮುಂಬೈ:ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್​ ಕುಂದ್ರಾ ಇಬ್ಬರೂ ಇದೀಗ ವಂಚನೆ ಆರೋಪಕ್ಕೀಡಾಗಿದ್ದಾರೆ. ಅವರ ಫೇಮ್​ಗೇ ಧಕ್ಕೆ ತರುವಂಥ ಆರೋಪಕ್ಕೆ ಕಾರಣವಾಗಿದ್ದು ಗೋಲ್ಡ್​ ಸ್ಕೀಮ್​. ಚಿನ್ನದ ವಿಷಯದಲ್ಲಿ ಹೀಗೊಂದು ಆರೋಪ ಮಾಡಿರುವವರು ಸಚಿನ್.
ಶಿಲ್ಪಾ ಶೆಟ್ಟಿ – ರಾಜ್​ ಕುಂದ್ರಾ ದಂಪತಿ ಮಾಲೀಕತ್ವದಲ್ಲಿದ್ದ ಸತ್ಯುಗ್​ ಗೋಲ್ಡ್​ ಪ್ರೈವೇಟ್​ ಲಿಮಿಟೆಡ್​ನಲ್ಲಿ ಎನ್​ಆರ್​ಐ ಸಚಿನ್​ ಜೋಶಿ ಎಂಬುವವರು ಚಿನ್ನ ಖರೀದಿಸಿದ್ದು, ಮುಂಬೈನ ಖಾರ್​ ಪೊಲೀಸ್​ ಠಾಣೆಯಲ್ಲಿ ಶಿಲ್ಪಾ-ರಾಜ್​ ವಿರುದ್ಧ ವಂಚನೆ ದೂರು ನೀಡಿದ್ದಾರೆ.
2014ರ ಮಾರ್ಚ್​ನಲ್ಲಿ ಸಚಿನ್​ ಸತ್ಯುಗ್​ ಗೋಲ್ಡ್​ ಪ್ರೈವೇಟ್​ ಲಿಮಿಟೆಡ್​​ನಿಂದ 18.58 ಲಕ್ಷ ರೂ. ಮೊತ್ತದಲ್ಲಿ 1 ಕೆ.ಜಿ. ಚಿನ್ನ ಖರೀದಿಸಿದ್ದೆ. ಐದು ವರ್ಷದ ಈ ಯೋಜನೆಯಡಿ ಖರೀದಿಸುವ ಚಿನ್ನಕ್ಕೆ ಒಂದು ಗೋಲ್ಡ್​ ಕಾರ್ಡ್​ ನೀಡಲಾಗುತ್ತಿದೆ. ಅವಧಿ ಮುಗಿದ ಬಳಿಕ ಇದರ ಜತೆಗೆ ನಿಗದಿತ ಮೊತ್ತದ ಚಿನ್ನ ಕೊಡಲಾಗುತ್ತದೆ. 2019ರ ಮಾ. 25ಕ್ಕೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಾಂದ್ರಾ ಕುರ್ಲಾದಲ್ಲಿದ್ದ ಕಂಪನಿ ಕಚೇರಿಗೆ ತೆರಳಿದ್ದಾಗ, ಅದರ ಬಾಗಿಲೆಳೆದಿತ್ತು ಎಂದು ಸಚಿನ್​ ಆರೋಪಿಸಿದ್ದಾರೆ. ಮತ್ತೊಂದೆಡೆ ಶಿಲ್ಪಾ ಈ ಕಂಪನಿಗೆ 2016ರಲ್ಲಿ ರಾಜೀನಾಮೆ ನೀಡಿದ್ದು, ರಾಜ್​ ಕುಂದ್ರಾ 2017ರಲ್ಲಿ ರಿಸೈನ್ ಮಾಡಿದ್ದಾರೆ ಎನ್ನಲಾಗಿದೆ.
ಸತ್ಯುಗ್​ ಕುರಿತ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಶಿಲ್ಪಾ ಶೆಟ್ಟಿ, ಸತ್ಯ ಏನು ಎಂಬುದು ಸದ್ಯದಲ್ಲೇ ಹೊರ ಬರಲಿದೆ ಎಂದಿದ್ದಾರೆ. ಸಚಿನ್ ಮಾಡಿರುವ ಆರೋಪ ಸುಳ್ಳು ಹಾಗೂ ಆಧಾರರಹಿತ. ಸತ್ಯುಗ್​ ಗೋಲ್ಡ್ ತನ್ನ ಗ್ರಾಹಕರಿಗೆ ಸಮಯೋಚಿತ ಸೇವೆ ನೀಡುತ್ತಿದೆ. ಒಂದು ಕೆ.ಜಿ. ಚಿನ್ನದ ಬಾಬ್ತು ಸಚಿನ್​ ಜೋಶಿ ವಿಳಂಬ ಶುಲ್ಕ ಸೇರಿ ಇನ್ನೂ ಹಣ ನೀಡಬೇಕಿದೆ ಎಂದಿದ್ದಾರೆ ಮಿಸೆಸ್​ ಕುಂದ್ರಾ.
ಡಿಫಾಲ್ಟರ್​ಗಳಿಂದ ಸರಣಿ ಚೆಕ್​ಬೌನ್ಸ್​ ಪ್ರಕರಣಗಳ ಹಿನ್ನೆಲೆಯಲ್ಲಿ ನಾವು ಕೋರ್ಟ್​ಗೆ ಹೋಗಿರುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ನಮ್ಮಲ್ಲಿ ಅವರಿಗೆ ಕೊಡಲು ಚಿನ್ನ ಇರದಿದ್ದರೆ ನಾವು ಅದನ್ನು ಕೋರ್ಟ್​ನಲ್ಲಿ ಇಟ್ಟಿರುತ್ತಿರಲಿಲ್ಲ. ವಿಷಯ ನ್ಯಾಯಾಲಯದಲ್ಲಿದ್ದು, ಶೀಘ್ರವೇ ಸತ್ಯ ಹೊರಬರಲಿದೆ ಎಂದು ಶಿಲ್ಪಾ ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 7 =
Remember me
