ನವದೆಹಲಿ :ಆಕರ್ಷಕ ಸೌಲಭ್ಯಗಳಿರುವ ಕ್ರೆಡಿಟ್​ ಕಾರ್ಡ್​ ನೀಡುವುದಾಗಿ ಕರೆ ಮಾಡಿ ಜನರಿಂದ ಹಣ ದೋಚುತ್ತಿದ್ದ ನಕಲಿ ಕಾಲ್​ ಸೆಂಟರ್​ ಒಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ನೂರಾರು ಜನರನ್ನು ಈ ರೀತಿ ವಂಚಿಸಿದ್ದ ನಾಲ್ಕು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಲಾಗಿದೆ.
ದೆಹಲಿಯ ರೋಹಿಣಿಯಲ್ಲಿ ನಕಲಿ ಕಾಲ್​ ಸೆಂಟರ್​ ನಡೆಸುತ್ತಿದ್ದ ರಾಹುಲ್ ರಾಥೋರ್(30) ಮತ್ತು ಆತನ ಸಿಬ್ಬಂದಿಯಾಗಿದ್ದ ಮುಸ್ಕಾನ್(21), ಸೋನಂ(26), ಬಬೀತಾ(22) ಮತ್ತು ಕಾಜಲ್(22) ಎಂಬುವರನ್ನು ಪೊಲೀಸರು ನಿನ್ನೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿ ರಾಥೋರ್,​ ಮುಂಚೆ ನಿಜವಾದ ಬ್ಯಾಂಕ್ ಕಾಲ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದು, ಹಣ ಮಾಡುವ ಆಸೆಯಿಂದ ಗ್ರಾಹಕರ ಡೇಟಾವನ್ನು ಖರೀದಿಸಿ, ಈ ದಂಧೆ ಆರಂಭಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಮಲಗಿದ್ದ ಮಗುವಿನ ಗಂಟಲು ಕೊಯ್ದ ಕರೊನಾ ರೋಗಿ! ತಡರಾತ್ರಿ ನಡೆಯಿತು ದುರಂತ
ಆತನ ಕೆಲಸಗಾರರು ಜನರಿಗೆ ಕರೆ ಮಾಡಿ ಕ್ರೆಡಿಟ್​ ಕಾರ್ಡ್​ ಜೊತೆ ಗಿಫ್ಟ್​ ಕಾರ್ಡ್ಸ್, ವಿಐಪಿ ಸೇವಿಂಗ್ ಕಾರ್ಡ್ಸ್, ಆರೋಗ್ಯ ಸೇವೆ ಮುಂತಾದ್ದನ್ನು ಒದಗಿಸಲಾಗುವುದು ಎಂದು ಆಮಿಷ ಒಡ್ಡುತ್ತಿದ್ದರು. ನಂತರ ಅದಕ್ಕಾಗಿ ಹಣ ಪಾವತಿಸಿಕೊಂಡು ವಂಚಿಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ರೋಹಿಣಿ ಡಿಸಿಪಿ ಪ್ರಣವ್​ ತಯಾಲ್ ಹೇಳಿದ್ದಾರೆ. ಕೆ.ಎನ್.ಕಟ್ಜು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಮುಖ್ಯ ಆರೋಪಿ ರಾಥೋರ್​ಗೆ ಡೇಟಾ ಒದಗಿಸುತ್ತಿದ್ದ ಇನ್ನೂ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.(ಏಜೆನ್ಸೀಸ್)
ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!

ಕರೊನಾ ಮರೆತು ‘ಪೂಲ್ ಪಾರ್ಟಿ’! 61 ಜನರ ಬಂಧನ

VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 2 =
Remember me
