ಅಬು ದಾಭಿ:ಮಂಗಳ ಗ್ರಹದಲ್ಲಿ ಜೀವಿಗಳ ಅಸ್ತಿತ್ವ ಇತ್ತಾ ಎಂಬ ಮಾನವರ ಅನ್ವೇಷಣೆಗೆ ಈಗ ಮತ್ತಷ್ಟು ಇಂಬು ಸಿಕ್ಕಿದೆ. ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಇತ್ತೀಚೆಗೆ ಹಾರಿಬಿಟ್ಟಿರುವ ‘ಹೋಪ್ ಪ್ರೋಬ್’​ ಅಧ್ಯಯನ ಸಾಟಲೈಟ್ ಇದೀಗ ಮಂಗಳ ಗ್ರಹದ ತನ್ನ ಮೊದಲ ಚಿತ್ರಣವನ್ನು ಜಗತ್ತಿಗೆ ಶೇರ್ ಮಾಡಿದೆ.
ಎಮಿರಾತಿ ಇಂಜಿನಿಯರ್​ಗಳು ನಿರ್ಮಿಸಿರುವ ‘ಅಮಲ್​’ ಅಥವಾ ‘ಹೋಪ್’ ಪ್ರೋಬ್​ಅನ್ನು 2020ರ ಜುಲೈ 20 ರಂದು ಜಪಾನಿನ ತಾನೆಗಶಿಮದಿಂದ ಲಾಂಚ್ ಮಾಡಲಾಗಿತ್ತು. ಮಂಗಳ ಗ್ರಹದ ಆರ್ಬಿಟ್​ಅನ್ನು ಫೆಬ್ರವರಿ 9 ರಂದು ಇದು ಯಶಸ್ವಿಯಾಗಿ ಪ್ರವೇಶಿಸಿತ್ತು. ಇಂದು(ಫೆಬ್ರವರಿ 14) ಈ ಹೋಪ್ ಪ್ರೋಬ್​ನ ಮೊದಲ ಚಿತ್ರವನ್ನು, ಯುಎಇ ಸೇನಾ ಪಡೆಗಳ ಡೆಪ್ಯುಟಿ ಸುಪ್ರೀಂ ಕಮಾಂಡರ್ ಆಗಿರುವ ಅಬು ದಾಭಿ ರಾಜಕುಮಾರ ಶೇಖ್ ಮೊದಮದ್ ಬಿನ್ ಜಯೆದ್​ ಅಲ್ ನಹ್ಯನ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ಪ್ರೇಮಿಗಳ ದಿನಕ್ಕೆ ಹೆಂಡತಿಗೆ ಕಿಡ್ನಿಯನ್ನೇ ಗಿಫ್ಟ್​ ನೀಡಿದ ಗಂಡ! ಪ್ರೀತಿ ಎಂದರೆ ಇದೇ ಅಲ್ಲವೇ?
ಫೆಬ್ರವರಿ 10 ರಂದು ತೆಗೆಯಲಾಗಿರುವ ಈ ಚಿತ್ರದಲ್ಲಿ ಸೂರ್ಯನ ಬೆಳಕು ಮಂಗಳ ಗ್ರಹದ ಮೇಲೆ ಆಗಷ್ಟೇ ಬೀಳುತ್ತಿರುವುದನ್ನು ಕಾಣಬಹುದು. ಗ್ರಹದ ಉತ್ತರ ಧೃವವನ್ನೂ ಅಲ್ಲಿನ ಅತಿದೊಡ್ಡ ಅಗ್ನಿಪರ್ವತ ಎನ್ನಲಾದ ಒಲಂಪಸ್ ಮಾನ್ಸ್​ ಅನ್ನೂ ಈ ಚಿತ್ರ ತೋರಿಸುತ್ತದೆ ಎನ್ನಲಾಗಿದೆ.“ಹೋಪ್ ಪ್ರೋಬ್​ನ ಮೊದಲ ಚಿತ್ರದ ಪ್ರಸಾರವು ನಮ್ಮ ಇತಿಹಾಸದಲ್ಲಿ ವಿಶೇಷ ಕ್ಷಣವಾಗಿದೆ. ಇದು ಬಾಹ್ಯಾಕಾಶದ ಪರಿಶೋಧನೆಯಲ್ಲಿ ತೊಡಗಿರುವ ಮುಂದುವರಿದ ರಾಷ್ಟ್ರಗಳ ಸಾಲನ್ನು ಯುಎಇ ಸೇರಿರುವುದರ ಸೂಚನೆ. ಈ ಮಿಷನ್​ನಿಂದ ಮಂಗಳ ಗ್ರಹದ ಬಗ್ಗೆ ಹೊಸ ಆವಿಷ್ಕಾರಗಳು ನಡೆದು ಮಾನವ ಜನಾಂಗಕ್ಕೆ ಉಪಯೋಗವಾಗಲಿದೆ ಎಂದು ನಾವು ಆಶಿಸುತ್ತೇವೆ” ಎಂದು ಶೇಖ್ ಮೊಹಮದ್ ಟ್ವೀಟ್ ಮಾಡಿದ್ದಾರೆ.
ಒಂದು ದೊಡ್ಡ ಕಾರಿನ ಗಾತ್ರವಿರುವ ಈ ಹೋಪ್ ಪ್ರೋಬ್​, ಮಂಗಳ ಗ್ರಹದ ಇಕ್ವೇಟಾರ್ ಅನ್ನು ಸುತ್ತಲಿದ್ದು, ಪ್ರತಿ ಒಂಭತ್ತು ದಿನಗಳಿಗೊಮ್ಮೆ ಗ್ರಹದ ಪೂರ್ಣ ಚಿತ್ರಣವನ್ನು ಪಡೆಯಲಿದೆ. ಮೂರು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಬಳಸಿ, ಗ್ರಹದ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಒಂದು ಸಾವಿರ ಜಿಬಿಗೂ ಹೆಚ್ಚು ಡೇಟಾವನ್ನು ಸಂಗ್ರಹಿಸುವ ಯೋಜನೆ ಇದ್ದು, ಈ ಮಾಹಿತಿಯನ್ನು ಜಗತ್ತಿನ 200 ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳಿಗೆ ಉಚಿತವಾಗಿ ಶೇರ್ ಮಾಡಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ವಾಲೆಂಟೈನ್ಸ್​ ಡೇ : ‘ಪ್ರೀತಿ, ಮಾಸ್ಕ್ ಮತ್ತು ಆರು ಅಡಿ ಅಂತರ’ !
‘ಯಾವ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ’ : ಪುಲ್ವಾಮಾ ಸೈನಿಕರಿಗೆ ಮೋದಿ ನಮನ
ಉಂಗುರದ ಬದಲು ಭಾರತಾಂಬೆಯ ಫೋಟೋ ಬದಲಿಸಿಕೊಂಡ ಟೆಕ್ಕಿಗಳು! ಇಡೀ ದೇಶಕ್ಕೆ ಮಾದರಿ ಈ ಜೋಡಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
