ಬೆಂಗಳೂರು:ಇದು ಡಿಜಿಟಲ್ ಯುಗ. ಅಂದಮೇಲೆ ಒಂದಲ್ಲಾ ಒಂದು ವಿಷಯ ಇಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿ ಎಂತಹದ್ದೇ ಘಟನೆ ನಡೆಯಲಿ, ಅದೆಲ್ಲವೂ ಕೆಲವೇ ನಿಮಿಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವ ಮೂಲಕ ಜನರ ಗಮನ ಸೆಳೆಯುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಳೇ ಕಾಲದ ಹೋಟೆಲ್ ಬಿಲ್​ಗಳು, ಕಾರಿನ ಬಿಲ್ ಹೀಗೆ ನಾನಾ ಇಂಟರೆಸ್ಟಿಂಗ್ ವಿಷಯಗಳಿಗೆ ಸಂಬಂಧಿಸಿದ ಫೋಟೋಗಳು ಅಥವಾ ವಿಡಿಯೋಗಳು ಕಾಣಸಿಗುತ್ತಿವೆ. ಸದ್ಯ ಇದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ:ರಣಬೀರ್ ಕಪೂರ್ ಅವರ ರಾಮಾಯಣ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರ: ಇದರ ಬಜೆಟ್​ ಎಷ್ಟು ಗೊತ್ತೆ?
ಅದೇ ರೀತಿ ಇಲ್ಲೊಂದು ಹೋಟೆಲ್​ ಬಿಲ್​ ಹರಿದಾಡಿದ್ದು, 1985ರಲ್ಲಿ ಒಂದು ಬೌಲ್ ದಾಲ್ ಮಖಾನಿ ಮತ್ತು ಒಂದು ಪ್ಲೇಟ್​ ಶಾಹಿ ಪನ್ನೀರ್​ ಬೆಲೆ ಎಷ್ಟಿತ್ತು ಎಂಬುದನ್ನು ನೋಡಿದ್ರೆ, ಖಂಡಿತ ನೀವು ಅಚ್ಚರಿ ಪಡುವುದರಲ್ಲಿ ಅನುಮಾನವೇ ಇಲ್ಲ. ಇಂದು ಒಂದು ಪ್ಲೇಟ್ ಫುಲ್ ಮೀಲ್ಸ್​ಗೆ 80-100 ರೂ. ದರವಿದೆ ಅಂದಮೇಲೆ, ಅಂದಿನ ಕಾಲದಲ್ಲಿ ಈ ಹೆಸರಾಂತ ಖಾದ್ಯಗಳ ಬೆಲೆ ಎಷ್ಟು ನಿಗದಿಯಾಗಿತ್ತು? ಇಂದಿಗಿಂತ ಎಷ್ಟು ಕಡಿಮೆ ಇತ್ತು? ಎಂಬುದನ್ನು ಒಮ್ಮೆ ನೀವೇ ಅಂದಾಜಿಸಿ.
ಈ ಹಿಂದೆ 1959, 1987, 1986ರಲ್ಲಿ 1 ಗ್ರಾಂ ಚಿನ್ನ, ಒಂದು ಕೆಜಿ ಗೋಧಿ, ಬುಲೆಟ್​ ಬೈಕ್​ ಬೆಲೆ ಎಷ್ಟಿತ್ತು ಎಂಬುದನ್ನು ನಾವು ನೀವೆಲ್ಲಾ ಇದೇ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆವು. ಇದೀಗ ಹೋಟೆಲ್​ನಲ್ಲಿ ಮಾಡಲಾದ ಸವಿ ಸವಿಯಾದ ಆಹಾರಗಳ ಬೆಲೆ ತಿಳಿಯೋದೇ ಒಂದು ಕುತೂಹಲ. ಸದ್ಯ ವೈರಲ್ ಆದ ಹೋಟೆಲ್​ ಬಿಲ್​ನಲ್ಲಿ ಉಲ್ಲೇಖಿಸಲಾದ ದಾಲ್ ಮಖಾನಿಗೆ ಅಂದು ಕೇವಲ ಐದು ರೂ. ದರವಿದ್ದು, ಒಂದು ಪ್ಲೇಟ್​ ಶಾಹಿ ಪನ್ನೀರ್​ಗೆ 8 ರೂ. ಇದೆ.
ಇದನ್ನೂ ಓದಿ:ಸಾಲ ತೀರಿಸಲಾಗದೆ ಮೂರು ತಿಂಗಳ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ!
39 ವರ್ಷಗಳ ಹಿಂದಿನ ಹಳೆಯ ಬಿಲ್​ ಇದ್ದಾಗಿದ್ದು, ಫೋಟೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್​ಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಎಲ್ಲರಲ್ಲಿಯೂ ಒಂದೇ ಒಂದು ಸಹಜ ಪ್ರಶ್ನೆ ಕಾಡುತ್ತಿದ್ದು, ಇದು ಯಾವ ನಗರದ ಹೋಟೆಲ್ ಬಿಲ್​ ಇರಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ. ಅಸಲಿಗೆ ಇದು ಯಾವ ರಾಜ್ಯದ ಹೋಟೆಲ್​ದು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ತನ್ನ ಪತಿ​ ರಾಹುಲ್​ಗೆ ಬೈದ LSG ಮಾಲೀಕನಿಗೆ ಅತಿಯಾ ಶೆಟ್ಟಿ ಕೊಟ್ರಾ ತಿರುಗೇಟು? ಫೋಟೋ ವೈರಲ್

ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + nine =
Remember me
