ಪ್ರಯಾಗ್​ರಾಜ್​:ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ಜಾತಿ ಗಣತಿಯ ಅಗತ್ಯತೆಯನ್ನು ಒತ್ತಿ ಹೇಳುತ್ತಿದ್ದು, ಈ ಬಗ್ಗೆ ಪುನರುಚ್ಛರಿಸಿದ್ದಾರೆ. ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ರಾಹುಲ್​ ಗಾಂಧಿ ಮಿಸ್​ ಇಂಡಿಯಾ ಸ್ಫರ್ಧೆಯನ್ನು ಉಲ್ಲೇಖಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆದ ಸಂವಿಧಾನ್ ಸಮ್ಮಾನ್ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್​, ನೀವು ಒಮ್ಮೆ ಮಿಸ್​ ಇಂಡಿಯಾ ಪಟ್ಟಿಯನ್ನು ತೆಗೆದು ನೋಡಿ ಅದರಲ್ಲಿ ನೀವು ದಲಿತರು, ಬುಡಕಟ್ಟು, ಹಿಂದುಳಿದ ವರ್ಗಗಳ ಮಹಿಳೆಯರು ಒಬ್ಬರು ಇರುವುದಿಲ್ಲ. ನಾನು ಒಮ್ಮೆ ಪರಿಶೀಲಿಸಿದ್ದೇನೆ . ಒಬ್ಬರ ಹೆಸರು ಕೂಡ ಕಂಡು ಬಂದಿಲ್ಲ.
#WATCH| Prayagraj, Uttar Pradesh: Lok Sabha LoP and Congress MP Rahul Gandhi says, "…I checked the list of Miss India to see if there would be any Dalit or tribal woman in it, but there was no women from Dalit, tribal or OBC. Still the media talks about dance, music, cricket,…pic.twitter.com/D2mKNs4jzt
ಇದನ್ನೂ ಓದಿ:ಪತ್ನಿಯ ಅನಗತ್ಯ ಖರ್ಚಿನಿಂದ ಬೇಸತ್ತ ಪತಿ; ಸ್ನೇಹಿತನಿಗೆ ಹೇಳಿ ಆಕೆಯ ಕಥೆ ಮುಗಿಸಿದ
ಮಾಧ್ಯಮಗಳಲ್ಲೂ ಹೆಚ್ಚಾಗಿ ಕ್ರಿಕೆಟ್​, ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು ರೈತರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಎಂದಿಗೂ ತೋರಿಸುವುದಿಲ್ಲ. ನಾವು ಜಾತಿ ಗಣತಿಯನ್ನು ನಡೆಸುತ್ತೇವೆ ಮತ್ತು ನಾನು ಒಪ್ಪದ ಮೀಸಲಾತಿಯ ಮೇಲಿನ ಶೇಕಡಾ 50 ರಷ್ಟು ಮಿತಿಯನ್ನು ತೆಗೆದುಹಾಕಲಾಗುವುದು. ಮೊದಲು, ವಿವಿಧ ಸಂಸ್ಥೆಗಳಲ್ಲಿ ವಿವಿಧ ಜಾತಿಗಳ ಭಾಗವಹಿಸುವಿಕೆಗೆ ಸಂಬಂಧಿಸಿದ ಡೇಟಾವನ್ನು ಪರಿಶೀಲಿಸಬೇಕಿದೆ. ಮೀಸಲಾತಿಗೆ ಸಂಬಂಧಿಸಿದ ಮಾತುಕತೆಗಳು ನಡೆಯುತ್ತವೆ. ಆದರೆ, ಅವಕಾಶ ಸಿಗುವುದಿಲ್ಲ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.
ಇತ್ತ ರಾಹುಲ್​ ಗಾಂಧಿ ಹೇಳಿಕೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಕೆಲವರು ರಾಹುಲ್​ ಗಾಂಧಿಯನ್ನು ಬೆಂಬಲಿಸಿದರೆ. ಹಲವರು ಇದನ್ನು ವಿರೋಧಿಸಿದ್ದು, ಹೇಳಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
