ಹೈದರಾಬಾದ್​:ಸೌದಿ ಅರೇಬಿಯಾದ ದೊರೆ ಮೊಹಮ್ಮದ್​ ಅಲ್​ ಸೌದ್​​ ಭಾರತಕ್ಕೆ ಉಡುಗೊರೆಯಾಗಿ ನೀಡಿದ್ದ ಅಬ್ದುಲ್ಲಾ(15) ಹೆಸರಿನ ಗಂಡು ಚೀತಾ ಹೃದಯಾಘಾತದಿಂದ ವಿಧಿವಶವಾಗಿದೆ ಎಂದು ತಿಳಿದು ಬಂದಿದೆ.
ಹೈದರಾಬಾದಿನ ಜವಾಹರ್​ಲಾಲ್​ ನೆಹರೂ ಮೃಗಾಲಯಕ್ಕೆ ಸೌದಿ ದೊರೆ ಚೀತಾವನ್ನು ಉಡಗೊರೆಯಾಗಿ ನೀಡಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ಲಾ ಹೆಸರಿನ ಚೀತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕ್ಷಣಾರ್ಧದಲ್ಲೇ ತಪ್ಪಿತ್ತು ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ; ಮೂವರು ವಾಯು ಸಂಚಾರಕ ನಿಯಂತ್ರಕರು ಅಮಾನತು
2013ರಲ್ಲಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್​ ಅಲ್​ ಸೌದ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಹಿಬಾ-ಅಬ್ದುಲ್ಲಾ ಎಂಬ ಗಂಡು ಹಾಗೂ ಹೆಣ್ಣು ಚೀತಾವನ್ನು ನೆನಪಾರ್ಥವಾಗಿ ಜವಾಹರ್​ಲಾಲ್​ ನೆಹರೂ ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.
ಹಿಬಾ ಹೆಸರಿನ ಹೆಣ್ಣು ಚೀತಾ 2020ರಲ್ಲಿ ಮೃತಪಟ್ಟಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twelve =
Remember me
