ಪುಣೆ:ಶಾಲಾ- ಕಾಲೇಜುಗಳ ಆರಂಭವಾಗಿಲ್ಲ. ಆದರೆ, ಪರೀಕ್ಷೆಯ ದಿನಾಂಕ ನಿಗದಿಯಾಗಿವೆ. ಹೀಗಾಗಿ ಶಿಕ್ಷಕರು ತಾವಿದ್ದಲ್ಲಿಂದಲೇ ಮಕ್ಕಳಿಗೆ ಪಾಠ ಮಾಡಬೇಕಾದುದು ಅನಿವಾರ್ಯವಾಗಿದೆ. ಜತೆ, ಆನ್​ಲೈಲ್​ ಬೋಧನೆಯನ್ನು ಶಾಲೆಗಳು ಕೂಡ ಕಡ್ಡಾಯಗೊಳಿಸಿವೆ.
ಲಾಕ್​ಡೌನ್​ ತೆರವಾದರೂ ಶಾಲೆ-ಕಾಲೇಜುಗಳ ಆರಂಭ ಇನ್ನೂ ಅನಿಶ್ಚತತೆಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿಯೇ ಪಾಠ ಹೇಳಲಾಗುತ್ತಿದೆ. ಆದರೆ, ಇದಕ್ಕೆ ಅಗತ್ಯ ಸಲಕರಣೆಗಳು ಎಲ್ಲರ ಬಳಿಯೂ ಇಲ್ಲ. ಸ್ಮಾರ್ಟ್​ಫೋನ್​ನಲ್ಲಿಯೇ ಕೆಲಸ ನಿರ್ವಹಿಸಬೇಕಾಗಿದೆ.
ಇದನ್ನೂ ಓದಿ;ಎಂಟು ದಶಕಗಳಲ್ಲಿ ಸಾಧಿಸಲಾಗದ್ದನ್ನು ಲಾಕ್​ಡೌನ್​ನಲ್ಲಿ ಸಾಧಿಸಿದ ಕಂಪನಿ
ಪುಣೆಯ ಬಿ. ಮೌಮಿತಾ ಮಕ್ಕಳಿಗೆ ಕೆಮಿಸ್ಟ್ರಿ ಕಲಿಸಲು ಮಾಡಿದ ಸರ್ಕಸ್​ ಇದೆಯಲ್ಲ…. ನೆಟ್ಟಿಗರ ಮನಸೂರೆಗೊಂಡಿದೆ. ಶಿಕ್ಷಕಿಯ ವೃತ್ತಿ ಬದ್ಧತೆ, ಸೃಜನಶೀಲತೆ ಹಾಗೂ ವಿನೂತನ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಇತರರಿಗೂ ಮಾದರಿ ಎಂದು ಹೇಳಿದ್ದಾರೆ.ಛಾವಣಿಯಲ್ಲಿ ಎರಡು ದಾರವನ್ನು ಇಳಿಬಿಟ್ಟು ಅದಕ್ಕೆ ಬಟ್ಟೆಯ ನೇತು ಹಾಕುವ ಹ್ಯಾಂಗರ್​ ಕಟ್ಟಿದ್ದಾರೆ. ಆ ಹ್ಯಾಂಗರ್​ನ ಮಧ್ಯದಲ್ಲಿ ಸ್ಮಾರ್ಟ್​ಫೋನ್​ ಕಟ್ಟಿ, ಬೋರ್ಡ್​ ಮೇಲೆ ಬರೆಯುತ್ತಿರುವುದು ಕಾಣುವಂತೆ ಮಾಡಿದ್ದಾರೆ. ಹ್ಯಾಂಗರ್​ನ ಇನ್ನೆರಡು ತುದಿಯನ್ನು ದಾರದಿಂದ ಕುರ್ಚಿಗೆ ಕಟ್ಟಿ ಅಲ್ಲಾಡದಂತೆ ಮಾಡಿದ್ದಾರೆ.
ಟ್ರೈಪಾಡ್​ ಇಲ್ಲದ ಕಾರಣ ಇಷ್ಟೆಲ್ಲ ಕಸರತ್ತು ಮಾಡಬೇಕಾಯಿತು ಎಂದಿರುವ ಮೌಮಿತಾ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದು 2 ಲಕ್ಷಕ್ಕೂ ಅಧೀಕ ವೀವ್ಸ್​ ಪಡೆದುಕೊಂಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್​ ಮಾಡಿ…..
https://www.facebook.com/VVani4U/videos/2822694821190757/
ಈ 9 ರಾಷ್ಟ್ರಗಳಿಂದ ಕರೊನಾ ನಾಪತ್ತೆಯಾಗಿದೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eleven =
Remember me
