ತಮಿಳುನಾಡು:ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಪ್ರಬಲವಾಗಿರುವ ಮೈಚಾಂಗ್ ಚಂಡಮಾರುತ ಇದೀಗ ತೀವ್ರವಾಗುತ್ತಿದ್ದು, ಈ ಹಿನ್ನಲೆ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಹೈ ಅಲರ್ಟ್​ ಘೋಷಿಸಿದೆ.
ಇದನ್ನೂ ಓದಿ:ರಾಧಾ ರಮಣ ಸೀರಿಯಲ್​ ಖ್ಯಾತಿಯ ಕಾವ್ಯಾ ಗೌಡ ಪ್ರೆಗ್ನೆಂಟ್​​; ಪತಿ ಸೋಮ್​ಶೇಖರ್​​ ಜತೆಗೆ ಬಂಪ್​​​ ಫೋಟೋಶೂಟ್​​​ ಮಾಡಿಸಿಕೊಂಡ ನಟಿ, ಫೋಟೋ ವೈರಲ್​..!
ಡಿಸೆಂಬರ್ 5ರ ಮುಂಜಾನೆ ವೇಳೆಗೆ ದಕ್ಷಿಣ ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಬಿರುಸಿನ ಚಂಡಮಾರುತವಾಗಿ ತಲುಪುವ ಸಾಧ್ಯತೆ ಹೆಚ್ಚಿದೆ. ಇದು ಗಂಟೆಗೆ 90-100 ಕಿಮೀ ವೇಗದಿಂದ 110 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಣೆಯಲ್ಲಿ ತಿಳಿಸಿದೆ.
ಮೈಚಾಂಗ್ ಚಂಡಮಾರುತ ತಮಿಳುನಾಡಿನ ಕರಾವಳಿ ಪ್ರದೇಶಗಳನ್ನು ದಾಟುವ ನಿರೀಕ್ಷೆಯಿರುವುದರಿಂದ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಅದರಂತೆಯೇ ಬಿರುಸಿನ ಮಳೆ ಪ್ರಾರಂಭಗೊಂಡಿದೆ. ಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದ ರನ್​ವೇ ಸದ್ಯ ಜಲಾವೃತಗೊಂಡಿದೆ.
ಇದನ್ನೂ ಓದಿ:ಅಧಿವೇಶನದಲ್ಲಿ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಪ್ರಕಟ ನಿರೀಕ್ಷೆ; ವಿಜಯೇಂದ್ರ ಹೇಳಿಕೆ
ಚಂಡಮಾರುತದ ಎಚ್ಚರಿಕೆಯ ಕ್ರಮವಾಗಿ ಈಗಾಗಲೇ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಅವುಗಳಲ್ಲಿ ಕೆಲವು ಏರ್​ಲೈನ್ಸ್​​ನ ಮಾರ್ಗಗಳನ್ನು ಬದಲಾಯಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದ ಸಂಪೂರ್ಣ ರನ್‌ವೇ ಮತ್ತು ಏರ್‌ಪ್ಲೇನ್ ಪಾರ್ಕಿಂಗ್ ವಲಯ ಮಳೆಯಿಂದ ಜಲಾವೃತಗೊಂಡಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯ ಸಮೀಪ ಮೈಚಾಂಗ್ ಚಂಡಮಾರುತವು ಸಮೀಪಿಸುತ್ತಿರುವ ಕಾರಣ ಸೋಮವಾರ (ಡಿ.04) ರಾತ್ರಿಯಿಡೀ ಚೆನ್ನೈನಲ್ಲಿ ಭಾರೀ ಮಳೆ ಸುರಿಯಲಿದೆ. ಮುಂದಿನ 24 ಗಂಟೆಗಳಲ್ಲಿ ನಗರದ ನೆರೆಯ ಜಿಲ್ಲೆಗಳು ಅಧಿಕ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ,(ಏಜೆನ್ಸೀಸ್).
#WATCH| Tamil Nadu: A car was seen stuck in the massive waterlogging in Chennai's Velachery and Pallikaranai areas, caused due to heavy rainfall(Video source: A local present at the site of the incident)pic.twitter.com/Lvl9MJnw0N— ANI (@ANI)December 4, 2023
#WATCH| Tamil Nadu: A car was seen stuck in the massive waterlogging in Chennai's Velachery and Pallikaranai areas, caused due to heavy rainfall(Video source: A local present at the site of the incident)pic.twitter.com/Lvl9MJnw0N
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
