ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಆಗಸ್ಟ್​ 10) ಚೆನ್ನೈ- ಅಂಡಮಾನ್​ ಮತ್ತು ನಿಕೋಬಾರ್​ ನಡುವಿನ ಸಮುದ್ರದಾಳದ ಇಂಟರ್​ನೆಟ್​ ಕೇಬಲ್​ ಯೋಜನೆಯನ್ನು ಉದ್ಘಾಟಿಸಿದರು. ಇದು ಸ್ವಾವಲಂಬಿ ಭಾರತಕ್ಕೆ ಮಹತ್ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.
ಭಾರತದ ಪ್ರಪ್ರಥಮ ಸಾಗರದಾಳದ ಇಂಟರ್​ನೆಟ್​ ಕೇಬಲ್​ ಯೋಜನೆಯಾಗಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೆ ಹೈಸ್ಪೀಡ್​ ಇಂಟರ್​ನೆಟ್​ ಸೌಲಭ್ಯ ಹಾಗೂ ಇತರ ಅನುಕೂಲಗಳನ್ನು ಒದಗಿಸಲಿದೆ.
ಇದನ್ನೂ ಓದಿ;ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…!
ಒಟ್ಟು 1,224 ಕೋಟಿ ರೂ.ಗಳ ವೆಚ್ಚದ 2,313 ಕಿ.ಮೀ ದೂರದ ಆಪ್ಟಿಕಲ್​ ಫೈಬರ್​ ಕೇಬಲ್​ ಅಳವಡಿಕೆ ಯೋಜನೆಗೆ ಮೋದಿ 2018ರ ಡಿಸೆಂಬರ್​ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಇದು ಚೆನ್ನೈಯಿಂದ ಪೋರ್ಟ್​ಬ್ಲೇರ್​, ಪೋರ್ಟ್​ಬ್ಲೇರ್​ನಿಂದ ಲಿಟಲ್​ ಅಂಡಮಾನ್​ ಹಾಗೂ ಅಲ್ಲಿಂದ ಸ್ವರಾಜ್​ ದ್ವೀಪ್​ಗೆ ಇಂದಿನಿಂದಲೇ ಸಂಪರ್ಕ ಕಲ್ಪಿಸಲಿದೆ.
ಆನ್​ಲೈನ್​ ತರಗತಿಗಳು, ಪ್ರವಾಸೋದ್ಯಮ, ಬ್ಯಾಂಕಿಂಗ್​, ಶಾಪಿಂಗ್​ ಅಥವಾ ಟೆಲಿಮೆಡಿಸಿನ್​ ಕ್ಷೇತ್ರವೇ ಇರಲಿ… ಎಲ್ಲದ್ದಕ್ಕೂ ಅನುಕೂಲವಾಗಲಿದೆ. ಇದರಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಸಂಪರ್ಕ, ಸಂವಹನ ಸಾಧ್ಯವಾಗಲಿದೆ.
ಇದನ್ನೂ ಓದಿ;ಶ್ರೀಲಂಕಾದಲ್ಲಿ ಪೂರ್ಣಪ್ರಮಾಣದಲ್ಲಿ ಶುರುವಾಗಿವೆ ಶಾಲೆಗಳು; ನಿಯಮಗಳು ಹೀಗಿವೆ….
ಅಂಡ್​ಮಾನ್​ ನಿಕೋಬಾರ್​ನ ಏಳು ದ್ವೀಪಗಳಿಗೆ ಇದರಿಂದ ಸಂವಹನ ಸಾಧ್ಯವಾಗಲಿದೆ. ಪೋರ್ಟ್​ಬ್ಲೇರ್​ನಲ್ಲಿ 400 ಜಿಬಿ ಹಾಗೂ ಇತರ ದ್ವೀಪಗಳಲ್ಲಿ 200 ಜಿಬಿ ಸ್ಪೀಡ್​ನ ಇಂಟರ್​ನೆಟ್​ ಸೌಲಭ್ಯ ದೊರೆಯಲಿದೆ. ಸಾಗರದಾಳದಲ್ಲಿ ಕೇಬಲ್​ ಹಾಕುವ ಕೆಲಸವನ್ನು ಬಿಎಸ್​ಎನ್​ಎಲ್​ ಕಂಪನಿ 24 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದೆ.
ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
