ಚೆನ್ನೈ:ಇಲ್ಲೋರ್ವ ಬೇಕರಿ ಮಾಲೀಕ ಬಂಧಿತನಾಗಿದ್ದಾನೆ. ಕಾರಣ ಆತ ಅಂಗಡಿಯ ಮೇಲೆ ಹಾಕಿದ್ದ ಒಂದು ಪೋಸ್ಟರ್​…!
ಇತ್ತೀಚೆಗೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಶ್ ತಿವಾರಿ ಅವರು ತಮ್ಮ ಕ್ಷೇತ್ರದ ಜನರಿಗೆ ಒಂದು ಮಾತು ಹೇಳಿದ್ದರು. ಮುಸ್ಲಿಂ ವ್ಯಾಪಾರಿಗಳ ಬಳಿ, ಹಣ್ಣು, ತರಕಾರಿ ಖರೀದಿ ಮಾಡಬೇಡಿ..ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.
ಇದನ್ನೂ ಓದಿ:ಲಂಡನ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿಯ ಟೆಕ್ಕಿ; 50ದಿನಗಳ ಬಳಿಕ ಊರಿಗೆ ಬರುತ್ತಿದೆ ಮೃತದೇಹ
ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಒಂದಷ್ಟು ಫೋಟೋ, ವಿಡಿಯೋಗಳು. ಕೆಲವು ಮುಸ್ಲಿಂ ವ್ಯಾಪಾರಿಗಳು ಹಣ್ಣುಗಳಿಗೆ ಎಂಜಲು ಸವರುವ, ಉಗುಳುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಹರಿದಾಡಿದ್ದವು. ಅದನ್ನೇ ಕಾರಣವಾಗಿಟ್ಟುಕೊಂಡು ಶಾಸಕರು ಹೀಗೆ ಹೇಳಿ ವಿವಾದ ಸೃಷ್ಟಿಸಿದ್ದರು.ಇದೀಗ ಚೆನ್ನೈನ ಟಿ.ನಗರದಲ್ಲಿರುವ ಬೇಕರಿಯ ಮಾಲೀಕನೋರ್ವ ಇಂಥದ್ದೇ ಎಡವಟ್ಟು ಮಾಡಿಕೊಂಡು ಅರೆಸ್ಟ್​ ಆಗಿದ್ದಾರೆ.
ಇದನ್ನೂ ಓದಿ:ಜಗಳೂರಲ್ಲಿ ಸಿಕ್ಕಿಬಿದ್ದ ರಾಜಸ್ಥಾನದ 50 ಕೂಲಿ ಕಾರ್ಮಿಕರು
‘ನಮ್ಮ ಅಂಗಡಿಯಲ್ಲಿ ಎಲ್ಲ ತಿನಿಸುಗಳನ್ನೂ ಜೈನ ಸಮುದಾಯದವರೇ ತಯಾರಿಸುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿ ಉದ್ಯೋಗಿಗಳು ನಮ್ಮಲ್ಲಿ ಕೆಲಸಕ್ಕೆ ಇಲ್ಲ…’ ಎಂದು ಬರೆದು ಅಂಗಡಿಯ ಎದುರು ಬೋರ್ಡ್​ ಹಾಕಿದ್ದರು.
ಈ ಜಾಹೀರಾತಿನ ಪೋಸ್ಟರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ, ನೆಟ್ಟಿಗರೂ ಫುಲ್ ಗರಂ ಆಗಿದ್ದರು.ಇದು ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ಬರಹ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೇಕರಿ ಮಾಲೀಕನನ್ನು ಬಂಧಿಸಿಕೊಂಡು ಹೋಗಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 4 =
Remember me
