ಚೆನ್ನೈ:ಚೆನ್ನೈನಲ್ಲಿ ಹವಾಮಾನ ಬದಲಾಗಿದೆ. ಮಳೆಯಿಂದ ಎಲ್ಲವೂ ಅಸ್ತವ್ಯಸ್ತವಾಗಿದೆ. ಮೈಚೌಂಗ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ತಮಿಳು ನಟರಾದ ಸೂರ್ಯ ಮತ್ತು ಕಾರ್ತಿ ಇಬ್ಬರು ಸೆಲೆಬ್ರಿಟಿಗಳು ವಿನಾಶಕಾರಿ ಪ್ರವಾಹದ ನಡುವೆ ಚೆನ್ನೈ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
🌀#Michaungcyclone
Police in action.
Rescuing a family from a low lying area in Perumal Koil street, Kotturpuram.
Removing the fallen trees.#ChennaiRain#Update@SandeepRRathore@R_Sudhakar_Ips@ChennaiTrafficpic.twitter.com/3hqSMEFr5P
— GREATER CHENNAI POLICE -GCP (@chennaipolice_)December 4, 2023

ಭಾರೀ ಗಾಳಿ, ಮಳೆಗೆ ಬೃಹತ್ ಮರಗಳು ಧರೆಗುರುಳಿವೆ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಸಾಕಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ. ರಸ್ತೆಯಲ್ಲಿದ್ದ ಕಾರುಗಳೂ ಕೊಚ್ಚಿ ಹೋಗಿವೆ. ಮೈಚೌಂಗ್ ಸೈಕ್ಲೋನ್ ಹೊಡೆತಕ್ಕೆ ಚೆನ್ನೈ ನಡುಗುತ್ತಿದೆ. ಈ ಭಾರಿ ಮಳೆಗೆ 8 ಮಂದಿ ಸಾವನ್ನಪ್ಪಿರುವಂತಿದೆ. ಹಲವು ಪ್ರಮುಖ ನಗರಗಳಲ್ಲಿ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ.
ತಮಿಳಿನ ಸ್ಟಾರ್​​ ನಟರಾದ #ಸೂರ್ಯ ಮತ್ತು #ಕಾರ್ತಿ ಅವರು ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು 10 ಲಕ್ಷಗಳ ಆರಂಭಿಕ ಮೊತ್ತವನ್ನು ಘೋಷಿಸಿದ್ದಾರೆ. ನಟರು ತಮ್ಮ ಅಭಿಮಾನಿಗಳ ಸಂಘಗಳ ಮೂಲಕ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ.
ಮೈಚಾಂಗ್ ಚಂಡಮಾರುತವು ತಮಿಳುನಾಡು, ಪುದುಚೇರಿ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡಲೂರು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯನ್ನು ಉಂಟುಮಾಡಿತು. ಹೆಚ್ಚಿನ ಸ್ಥಳಗಳು ಜಲಾವೃತವಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
