ಚೆನ್ನೈ:ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕರೊನಾ ಸಾವಿನ ಸಂಖ್ಯೆ ಕುರಿತಾಗಿ ಗೊಂದಲ ಉಂಟಾಗಿದೆ. ನಗರದಲ್ಲಿ ಸಂಭವಿಸಿರುವ ಸುಮಾರು 200ಕ್ಕೂ ಹೆಚ್ಚು ಸಾವುಗಳನ್ನು ಸರ್ಕಾರದ ವರದಿಗೆ ಸೇರಿಸಿಕೊಳ್ಳಲಾಗಿಲ್ಲ ಎನ್ನಲಾಗಿದೆ.
ರಾಜ್ಯ ಸರ್ಕಾರದ ವರದಿಯ ಪ್ರಕಾರ, ಗುರುವಾರದವರೆಗೆ ರಾಜ್ಯದಲ್ಲಿ 326 ಸಾವು ಸಂಭವಿಸಿದ್ದು ಅದರಲ್ಲಿ 224 ಸಾವು ಚೆನ್ನೈನಲ್ಲೇ ಆಗಿದೆ. ಆದರೆ ರಾಜಧಾನಿಯಲ್ಲಿ ಈವರೆಗೆ 460ಕ್ಕೂ ಹೆಚ್ಚು ಜನರು ಕರೊನಾದಿಂದಾಗಿ ಮೃತರಾಗಿದ್ದಾರೆ ಎಂದು ನಗರ ಪಾಲಿಕೆಯ ವರದಿಯಲ್ಲಿ ದಾಖಲಿಸಲಾಗಿದೆ. ‘ಪಾಲಿಕೆ ಕೊಟ್ಟ ಎಲ್ಲ ದಾಖಲೆಯನ್ನು ಸೇರಿಸಿಕೊಂಡಿದ್ದೇವೆ. ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳು ಕೊಟ್ಟ ಸಂಖ್ಯೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಮೆಡಿಕಲ್ ಕಾಲೇಜುಗಳ ಸಂಖ್ಯೆಯೂ ಸೇರ್ಪಟ್ಟಿದೆ. ಮನೆಯಲ್ಲಿ ಮೃತರಾದವರು ಮತ್ತು ಖಾಸಗಿ ಕ್ಲಿನಿಕ್​ಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಬಿಟ್ಟುಹೋಗಿರಬಹುದು. ಅಂಕಿ ಅಂಶವನ್ನು ಮುಚ್ಚಿಡುವ ಅವಶ್ಯಕತೆ ನಮಗಿಲ್ಲ’ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲಾ ರಾಜೇಶ್ ತಿಳಿಸಿದ್ದಾರೆ.
ಪರಿಶೀಲನೆಗೆ ತಂಡ ರಚನೆ
ಸಾವಿನ ಸಂಖ್ಯೆ ಪರಿಶೀಲನೆ ನಡೆಸುವ ಸಲುವಾಗಿ ಲೆಕ್ಕಾಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಒಂದು ವೇಳೆ ಪಾಲಿಕೆಯ ವರದಿ ಸರಿಯಿದ್ದು, ಸರ್ಕಾರದ ವರದಿಯಲ್ಲೇ ತಪ್ಪಿದ್ದರೆ ರಾಜ್ಯದ ಮರಣ ದರ ಶೇ. 0.7ರಿಂದ ಶೇ. 1.5ಕ್ಕೆ ಏರಿಕೆಯಾಗಲಿದೆ.
ಲಸಿಕೆ ಪರೀಕ್ಷೆ ತ್ವರಿತ
ನವದೆಹಲಿ: ಕೋವಿಡ್-19 ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸುವ (ಕ್ಲಿನಿಕಲ್ ಪರೀಕ್ಷೆ) ಕಾನೂನುಬದ್ಧ ಅವಧಿಯನ್ನು ಕಡಿತಗೊಳಿಸುವ ಹಾಗೂ ಲಸಿಕೆ, ಡಯಾಗ್ನಸ್ಟಿಕ್ ಹಾಗೂ ರೋಗ ನಿವಾರಣೆ ಚಿಕಿತ್ಸಾ ವಿಧಾನಗಳ ಸಂಶೋಧನೆ-ಅಭಿವೃದ್ಧಿಗೆ ವೇಗ ನೀಡಲು ಮುಂದಾಗಿದೆ. ಈ ಬಗ್ಗೆ ಅದು ಕಾನೂನುಗಳಿಗೆ ತಿದ್ದುಪಡಿ ತರುವ ಸಂಭವವೂ ಇದೆ. ಕರೊನಾ ಲಸಿಕೆ ಕಂಡುಹಿಡಿಯಲು ಬಹಳ ಸಮಯ ಬೇಕಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕ್ಲಿನಿಕಲ್ ಪರೀಕ್ಷೆಗೆ ಅನುಮತಿ ನೀಡುವ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಸಾಯಿಸುವಂತೆ ಹೇಳಿದ್ದು ಪಾಲಕರೇ!: ವೃದ್ಧದಂಪತಿಯನ್ನು ಕೊಂದ ಮಗನ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
