ರೂಬಿಕ್​ ಕ್ಯೂಬ್ಸ್​ ಆಟ ಒಂದು ಒಗಟಿನಂತೆ. ಆರೂ ಆಯಾಮಗಳಲ್ಲಿ ಒಂದೇ ತರಹದ ಬಣ್ಣ ಹೊಂದಿಸುವುದು ದೊಡ್ಡ ಸವಾಲು. ಅದೆಷ್ಟೋ ಜನ ಈ ಆಟವನ್ನು ಆಡುತ್ತಾರೆ. ಒಂದೆರಡು ಆಯಾಮಗಳನ್ನು ಸರಿಪಡಿಸುವವರು ತುಂಬ ಜನರಿದ್ದಾರೆ. ಹಾಗೇ ಕೆಲವರು ಆರೂ ಬದಿಗಳನ್ನೂ ಸೆಟ್​ ಮಾಡುವ ಜಾಣ್ಮೆಯುಳ್ಳವರನ್ನೂ ನೋಡಿದ್ದೇವೆ.ಆದರೆ ಇಲ್ಲೊಬ್ಬ ಯುವಕ ಈ ರೂಬಿಕ್​ ಕ್ಯೂಬ್​​ನ್ನು ಅತ್ಯಂತ ವಿಭಿನ್ನವಾಗಿ ಆಡಿ, ಗಿನ್ನೀಸ್​ ವಿಶ್ವ ದಾಖಲೆ ಪಟ್ಟಿ ಸೇರಿದ್ದಾನೆ.
ಇಳಯರಾಮ್​ ಶೇಖರ್​ ಎಂಬಾತ25 ವರ್ಷದ ಯುವಕ. ಇವರು ಅಂಡರ್​ ವಾಟರ್​ನಲ್ಲಿ ಉಸಿರು ಕಟ್ಟಿಕೊಂಡು ಕುಳಿತು ಆರು ರೂಬಿಕ್​ ಕ್ಯೂಬ್​ನ ಆರೂ ಆಯಾಮಗಳನ್ನು ಸರಿಯಾಗಿ ಹೊಂದಿಸಿದ್ದಾರೆ.ಎರಡು ನಿಮಿಷ 17 ಸೆಕೆಂಡ್​​ಗಳ ಕಾಲ ಉಸಿರುಕಟ್ಟಿ ನೀರಿನೊಳಗೆ ಕುಳಿತು ಟಾಸ್ಕ್​ ಪೂರ್ಣಗೊಳಿಸಿದ ಇವರ ಚಾಕಚಕ್ಯತೆಗೆ ಇದೀಗ ಜಗತ್ತೇ ಬೆರಗಾಗಿದೆ.ಇದನ್ನೂ ಓದಿ:ಎರಡು ಸಲ ಮೃತಪಟ್ಟ 12 ವರ್ಷದ ಬಾಲಕಿ; ಶವಕ್ಕೆ ಸ್ನಾನ ಮಾಡಿಸುವಾಗ ಬೆಚ್ಚಿಬಿದ್ದ ಪಾಲಕರು
2013ರಿಂದಲೂ ಶೇಖರ್ ರೂಬಿಕ್​ ಕ್ಯೂಬ್ಸ್​ ಹೊಂದಿಸುವ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ನೀರಿನೊಳಗೆ ದೀರ್ಘ ಸಮಯದವರೆಗೆ ಉಸಿರು ಹಿಡಿದು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಯೋಗಾಭ್ಯಾಸದ ಮೂಲಕ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಮುಂಬೈನ ನಿವಾಸಿಯಾದ ಚಿನ್ಮಯ್​ ಪ್ರಭು ಎಂಬುವರು ಅಂಡರ್​ವಾಟರ್​​ನಲ್ಲಿ ಕುಳಿತು 48 ಸೆಕೆಂಡ್​ಗಳಲ್ಲಿ ಪಿರಮಿಂಕ್ಸ್​ನ್ನು ಹೊಂದಿಸುವ ಮೂಲಕ ಗಿನ್ನೀಸ್​ ವಿಶ್ವ ದಾಖಲೆ ಪಟ್ಟಿ ಸೇರಿದ್ದರು.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − nine =
Remember me
