ಚೆನ್ನೈ:ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವ ಹುಡುಗಿಯನ್ನಾದರೂ ಸಂಭೋಗಿಸಿ ಎಂದು ಹೋಟೆಲ್​ ಮುಂದೆ ಅಳವಡಿಸಿದ್ದ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕವನ್ನು ಗ್ರೇಟರ್​ ಚೆನ್ನೈ ಪೊಲೀಸರು ಕಳೆದ ಶನಿವಾರ (ಡಿ. 24) ತೆರವುಗೊಳಿಸಿದ್ದು, ಹೋಟೆಲ್​ ಮಾಲೀಕರ​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆನ್ನೈ ನಾಗರಿಕರೊಬ್ಬರು ಹೋಟೆಲ್​ ಮುಂದಿನ ಡಿಜಿಟಲ್​ ಜಾಹಿರಾತು ಫಲಕವನ್ನು ನೋಡಿ ತಮ್ಮ ಮೊಬೈಲ್​ನಲ್ಲಿ ಫೋಟೋ ಮತ್ತು ವಿಡಿಯೋ ರೆಕಾರ್ಡ್​ ಮಾಡಿ, ಟ್ವಿಟರ್​ನಲ್ಲಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಲಿಟಲ್​ ಮೌಂಟ್​ ಮೆಟ್ರೋ ಬಳಿಯ ಕಂಬವೊಂದರಲ್ಲಿ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಲಾಗಿತ್ತು. ಅದರಲ್ಲಿ ಪುರುಷರೇ ಒಳಗಡೆ ಬಂದು 1000 ರೂಪಾಯಿ ಕೊಟ್ಟು ಯಾವುದೇ ಹುಡುಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಬರೆಯಲಾಗಿತ್ತು.
This video and photo was shot at Little Mount just few minutes back.@chennaipolice_@tnpoliceofflplease look into this ASAP and take action.How can this happen in Chennai?@aidwatn@CMOTamilnadu@ThamizhachiThpic.twitter.com/paTukOrfbu
— Kavitha Gajendran (@kavithazahir)December 24, 2022

ಈ ವಿಚಾರವಾಗಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಘಟಕದ ಸದಸ್ಯರು ಡಿ.24ರಂದು ಪ್ರತಿಭಟನೆ ನಡೆಸಿ, ಹೋಟೆಲ್​ ಮಾಲೀಕ ಅಥವಾ ವಿವಾದಾತ್ಮಕ ಡಿಜಿಟಲ್​ ಜಾಹಿರಾತು ಫಲಕ ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಚೆನ್ನೈ ಪೊಲೀಸರನ್ನು ಒತ್ತಾಯಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಡಿಜಿಟಲ್​ ಜಾಹಿರಾತು ಫಲಕವನ್ನು ತೆಗೆದಿದ್ದು, ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಹೋಟೆಲ್​ನ ವೈ-ಫೈ ನೆಟ್‌ವರ್ಕ್‌ ಹ್ಯಾಕ್​ ಮಾಡಿ ಅಪರಿಚಿತ ವ್ಯಕ್ತಿ ಈ ರೀತಿ ಮಾಡಿದ್ದಾನೆಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ನಮ್ಮ ವೈ ಫೈ ಎಲ್ಲರಿಗೂ ಮುಕ್ತವಾಗಿದೆ. ಯಾವುದೇ ಪಾಸ್​ವರ್ಡ್​ನಿಂದ ನೆಟ್​ವರ್ಕ್​ ಅನ್ನು ಸುರಕ್ಷಿತವಾಗಿ ಇರಿಸಿರಲಿಲ್ಲ ಎಂದಿದ್ದಾರೆ. ಡಿಸ್‌ಪ್ಲೇ ಸಂದೇಶಕ್ಕಾಗಿ ಕೋಡ್‌ಗಳನ್ನು ಬದಲಾಯಿಸುವ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವ ಯಾರೋ ಕಿಡಿಗೇಟಿ ಡಿಜಿಟಲ್​ ಬೋರ್ಡ್​ ಸಂದೇಶವನ್ನು ಬದಲಾಯಿಸಿದ್ದಾನೆ ಎಂದು ಪೊಲೀಸರು ಹೇಳಿಕೆಯನ್ನು ನೀಡಿದ್ದಾರೆ.
ಹೋಟೆಲ್‌ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತೆರೆದ ವೈ-ಫೈ ನೆಟ್‌ವರ್ಕ್‌ಗಳ ದುರುಪಯೋಗದ ಬಗ್ಗೆ ಜಾಗೃತರಾಗಿರಲು ಜನರಿಗೆ ಪೊಲೀಸರು ಸಲಹೆ ನೀಡಿದ್ದಾರೆ ಮತ್ತು ವೈ-ಫೈ ಅಥವಾ ವೈರ್ಡ್ ಸಂಪರ್ಕದ ಮೂಲಕ ಫಲಕಕ್ಕೆ ಪ್ರವೇಶವನ್ನು ಮರುಪರಿಶೀಲಿಸಲು ಮತ್ತು ಸುರಕ್ಷಿತವಾಗಿರಿಸಲು ಹೋಟೆಲ್​ ಮಾಲೀಕರನ್ನು ಪೊಲೀಸರು ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
6000 ಟ್ವೀಟ್​ಗಳಲ್ಲಿ 4000 ಟ್ವೀಟ್​ಗೆ ಪರಿಹಾರ: ಈ ಟ್ವಿಟರ್​ ಗರ್ಲ್​ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಕೇವಲ 26ನೇ ವಯಸ್ಸಿನಲ್ಲಿ 21 ಮದ್ವೆ ಮಾಡ್ಕೊಂಡ ಭೂಪ! ಈ ಒಂದು ಕಾರಣಕ್ಕೆ ಯುವತಿಯರ ಹಿಂದೆ ಬಿದ್ದ ಕಿರಾತಕ

ಡಬಲ್​ ಮರ್ಡರ್​ಗೆ ಬೆಚ್ಚಿಬಿದ್ದ ಬೆಳಗಾವಿ ಜನ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಬರ್ಬರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
