ನವದೆಹಲಿ:ಚೆನ್ನೈನಲ್ಲಿ ಈಶಾನ್ಯ ಮಾನ್ಸೂನ್​ ಶುರುವಾಗಿದ್ದು, ಇಂದು ಬೆಳಗ್ಗೆಯಿಂದ ಮಳೆ ಆರ್ಭಟಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಆಗಿರಲಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗುಸಹಿತ ನಿರಂತರ ಮಳೆ ಇನ್ನೂ ಎರಡು-ಮೂರು ಘಂಟೆಗಳು ಮುಂದುವರಿಯಲಿದೆ ಎಂದು ವರದಿ ನೀಡಿದೆ.
ಚೆನ್ನೈ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಫೇಸ್​ ಮಾಸ್ಕ್​, ಕೈಗವಸುಗಳೆಲ್ಲ ನೀರಿನಲ್ಲಿ ತೇಲಿ ಬರುತ್ತಿರುವ ವಿಡಿಯೋ, ಫೋಟೋಗಳು ವೈರಲ್​ ಆಗಿವೆ. ನುಂಗಂಬಕ್ಕಂ ಪ್ರದೇಶದಲ್ಲಿ ಬೆಳಿಗ್ಗೆ 8: 30ರವರೆಗೆ 133.4 ಮಿ.ಮೀ ಮಳೆಯಾಗಿದ್ದರೆ, ಮೀನಾಂಬಕ್ಕಮ್​ನಲ್ಲಿ 53.8ಎಂಎಂ ಮಳೆ ಬಿದ್ದಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಕಳೆದ 5 ವರ್ಷಗಳಲ್ಲಿ ಬಿದ್ದಿರಲಿಲ್ಲ. 2014ರಲ್ಲಿ ಒಂದು ದಿನ 161.9ಮಿಮೀ ಮಳೆಯಾಗಿತ್ತು.ಇದನ್ನೂ ಓದಿ:ಡಬ್ಬಿಂಗ್ ಮುಗಿಸಿದ ‘ಅರ್ಜುನ್ ಗೌಡ’ … ಬಿಡುಗಡೆ ಯಾವಾಗ?
ಗ್ರೇಟರ್​ ಚೆನ್ನೈ ಕಾರ್ಪೋರೇಶನ್​ ಸಹಾಯವಾಣಿ ತೆರೆದು, ಫೋನ್​ನಂಬರ್​ಗಳನ್ನು ಸಾರ್ವಜನಿಕರಿಗೆ ಒದಗಿಸಿದೆ. ಮಳೆಯಿಂದ ಆಗುವ ಅನಾಹುತ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ವಹಿಸಲಾಗಿದೆ. (ಏಜೆನ್ಸೀಸ್)
ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
