ಚೆನ್ನೈ:ಇಲ್ಲಿನ ರೆಸ್ಟೋರೆಂಟ್​ ಒಂದರ ರಶೀದಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರ ಹಿಂದಿನ ಕಾರಣ ನಿಮ್ಮನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡುತ್ತದೆ. ರಶೀದಿಯ ಫೋಟೋವನ್ನು ರೆಡ್ಡಿಟ್​ ಜಾಲತಾಣದಲ್ಲಿ ಶೇರ್​ ಮಾಡಲಾಗಿದ್ದು, ಸಮೋಸಾಗೆ ಬೇಜಾರು ಮಾಡಬೇಡಿ ಎಂಬ ಅಡಿಬರಹ ಗೊಂದಲಕ್ಕೀಡುಮಾಡಿದೆ.
ರಶೀದಿಯ ಕೆಳಗಡೆ ಜನರನ್ನು ಅಥವಾ ಗ್ರಾಹಕರನ್ನು ಉದ್ದೇಶಿಸಿ ಸಮೋಸಾ ಅಥವಾ ಕಚೋರಿಯನ್ನು ಬೇಡ ಎಂದು ಹೇಳುವ ಮೂಲಕ ಅವುಗಳಿಗೆ ಬೇಜಾರು ಮಾಡಬೇಡಿ ಎಂದು ಬರೆಯಲಾಗಿದೆ.
ಇದನ್ನೂ ಓದಿ:ಕ್ರಿಸ್​ಮಸ್​ ಉಡುಗೊರೆಯಾಗಿ ಪ್ರೇಯಸಿಯ ಡಿಎನ್​ಎ ಪರೀಕ್ಷೆ ಮಾಡಿಸಿದ ಬಾಯ್​ಫ್ರೆಂಡ್​ಗೆ ಕಾದಿತ್ತು ಶಾಕ್​!
ಚೆನ್ನೈನ ಊಗಿಯಂಪೇಟೆಯ ಹಳೆಯ ಮಹಾಬಲಿಪುರಂ ರಸ್ತೆಯಲ್ಲಿರುವ ಶ್ರೀ ಚಾಟ್ಸ್​ ಮಿಠಾಯಿ ಮತ್ತು ನಮ್ಕೀನ್​ ರೆಸ್ಟೋರೆಂಟ್​ಗೆ ಸಂಬಂಧಿಸಿದ ರಶೀದಿ ಇದಾಗಿದೆ. ರಶೀದಿಯಲ್ಲಿರುವಂತೆ ಗ್ರಾಹಕರು 150 ರೂ. ಬೆಲೆಯ ಎರಡು ಸಮೋಸಾ ಚಾಟ್ಸ್, 90 ರೂ. ಬೆಲೆ ಒಂದು ಮಿಕ್ಸ್​ಡ್​ ಚಾಟ್​, 105 ರೂ. ಬೆಲೆಯ ಒಂದು ಪ್ಲೇಟ್​ ಪಾವ್​ ಭಜಿ ಮತ್ತು 70 ರೂ. ಬೆಲೆಯ ದಹಿ ಭೇಲ್​ ಪುರಿಯನ್ನು ಕೊಂಡುಕೊಂಡಿದ್ದಾರೆ. ಇವುಗಳನ್ನು ನಮೂದಿಸಿರುವುದರ ಕೆಳಗೆ ಸಮೋಸಾ ಬೇಡ ಎನ್ನುವ ಮೂಲಕ ಅವುಗಳಿಗೆ ಬೇಜಾರು ಮಾಡಬೇಡಿ ಎಂದು ರೆಸ್ಟೋರೆಂಟ್​ನವರು ಬರೆದಿದ್ದಾರೆ.
Never hurt a samosafromindia

ರಶೀದಿಯನ್ನು ರೆಡ್ಡಿಟ್​ ಜಾಲತಾಣದಲ್ಲಿ ಶೇರ್​ ಮಾಡಲಾಗಿದ್ದು, ಭಾರೀ ವೈರಲ್​ ಆಗಿದೆ. ಸಾಕಷ್ಟು ಮಂದಿ ತಮ್ಮದೇ ರೀತಿಯಲ್ಲಿ ಹಾಸ್ಯಾಸ್ಪದ ಕಾಮೆಂಟ್​ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಸಮೋಸಾ ಬೇಜಾರು ಮಾಡಬಾರದು ಸರಿ ಆದ್ರೆ ಸಮೋಸಾ ನನ್ನ ಜೇಬಿಗೆ ತೊಂದರೆ ನೀಡುತ್ತದೆ ಎಂದು ನೆಟ್ಟಿಗನೊಬ್ಬ ಹೇಳಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!
ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​

ಅಜ್ಜಿ ತಲೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಂದ ಮೊಮ್ಮಗ! ಕಾರಣವೇನು ಗೊತ್ತಾ?

ರ‍್ಯಾಶ್​ ಡ್ರೈವಿಂಗ್​: ಕಾರು ತಡೆದ ಕಾನ್ಸ್​ಟೇಬಲ್​ ಮೇಲೆ ಡಿಸಿಎಂ ಪುತ್ರನ ಗ್ಯಾಂಗ್​ನಿಂದ ಹಲ್ಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
