ಚೆನ್ನೈ:ಶಿಕ್ಷಕರ ಕೆಲಸ ಅತ್ಯಂತ ಶ್ರೇಷ್ಠವಾದದ್ದು ಎನ್ನುತ್ತಾರೆ. ಆದರೆ ಎಲ್ಲೋ ಕೆಲ ಶಿಕ್ಷಕರಿಂದ ಪೂರ್ತಿ ಶಿಕ್ಷಕ ವೃಂದಕ್ಕೆ ಕೆಟ್ಟ ಹೆಸರು ಬಂದುಬಿಡುತ್ತದೆ ಎನ್ನುವುದು ಸುಳ್ಳಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಖಾಸಗಿ ಶಾಲಾ ವಾಣಿಜ್ಯ ಶಿಕ್ಷಕ ರಾಜಗೋಪಾಲ್ ಆರೋಪಿ ಸ್ಥಾನದಲ್ಲಿರುವ ಶಿಕ್ಷಕ. ಈತ ಆನ್​ಲೈನ್​ ಕ್ಲಾಸ್​ನಲ್ಲಿ ಬರೀ ಟವೆಲ್​ ಉಟ್ಟು ಪಾಠ ಮಾಡುತ್ತಾನೆ ಎಂದು ಅನೇಕ ವಿದ್ಯಾರ್ಥಿನಿಯರು ದೂರಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ರಾಜ್​ಗೋಪಾಲ್​ನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಕೇವಲ ಬಟ್ಟೆ ಮಾತ್ರವಲ್ಲ, ರಾಜಗೋಪಾಲ್​ ಬಗ್ಗೆ ಅನೇಕ ರೀತಿಯ ದೂರುಗಳಿವೆ. ಭೌತಿಕ ತರಗತಿಯಲ್ಲೂ ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದರು ಮತ್ತು ಅನುಚಿತವಾಗಿಯು ಸ್ಪರ್ಶಿಸುತ್ತಿದ್ದರು. ಇಷ್ಟೇ ಅಲ್ಲದೆ, ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರ ದೇಹದ ಆಕಾರದ ಬಗ್ಗೆ ಮಾತನಾಡುತ್ತಿದ್ದ ರಾಜ್​ಗೋಪಾಲ್​​, ಮಹಿಳೆಯರ ಸ್ಲೀವ್​ಲೆಸ್​ ಉಡುಗೆ ಅಥವಾ ಅಸಾಂಪ್ರದಾಯಿಕ ಬಟ್ಟೆಗಳ ಬಗ್ಗೆ ಅಣುಕಿಸುತ್ತಿದ್ದರೆಂದು ದೂರಿದ್ದಾರೆ. (ಏಜೆನ್ಸೀಸ್​)
ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲೆಯಾದ ಶಿಕ್ಷಕನ ಕರಾಳ ಮುಖ ಬಯಲು ಮಾಡಿದ ವಿದ್ಯಾರ್ಥಿನಿಯರು..!

ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್​! ರೊಚ್ಚಿಗೆದ್ದ ಪಾಕಿಸ್ತಾನಿ ಅಭಿಮಾನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 7 =
Remember me
