ಚೆನ್ನೈ:ಯೂಟ್ಯೂಬ್​ ಚಾನೆಲ್​ ಮೂಲಕ ಮಹಿಳೆಯ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಸೆಕ್ಸ್​ ಹಾಗೂ ಮದ್ಯಪಾನ ಕುರಿತು ಮುಕ್ತವಾಗಿ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಯೂಟ್ಯೂಬ್​ ಚಾನೆಲ್​ ಹಿಂದಿರುವ ವ್ಯಕ್ತಿಗಳನ್ನು0 ಗ್ರೇಟರ್​ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
“ಚೆನ್ನೈ ಟಾಕ್ಸ್​” ಹೆಸರಿನ ಯೂಟ್ಯೂಬ್​ ಚಾನೆಲ್​ ಸುಮಾರು ಸುಮಾರು 200 ವಿಡಿಯೋಗಳನ್ನು ಹೊಂದಿದ್ದು, ಎಲ್ಲವು ಸಹ ವಾಕ್ಸ್​-ಪಾಪ್​ ಫಾರ್ಮ್ಯಾಟ್​ನಿಂದ ಕೂಡಿದೆ. ವಿವಿಧ ವಿಷಯಗಳ ಮೇಲೆ, ಅನೇಕ ಪುರುಷರು ಮತ್ತು ಮಹಿಳೆಯರು ಮಾತನಾಡುವ ವಿಡಿಯೋವನ್ನು ಎಡಿಟ್​ ಮಾಡಿ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾಗುತ್ತದೆ. ಅನೇಕ ಮಹಿಳೆಯರು ಮುಕ್ತವಾಗಿ ಸೆಕ್ಸ್​, ಮದ್ಯಪಾನ ಮತ್ತು ಸಂಬಂಧದ ಬಗ್ಗೆ ಮಾತನಾಡಿರುವ ವಿಡಿಯೋಗಳು ಸಹ ಇವೆ.
ಇದನ್ನೂ ಓದಿರಿ:ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ
ಚೆನ್ನೈ ಬೆಸಂತ್​ ನಗರದ ಬೀಚ್​ನಲ್ಲೇ ಬಹುತೇಕ ವಿಡಿಯೋಗಳನ್ನು ಮಾಡಲಾಗಿದೆ ಎಂದು ಶಾಸ್ತ್ರಿ ನಗರ ಪೊಲೀಸರು ತಿಳಿಸಿದ್ದಾರೆ. ಕ್ಯಾಮೆರಾ ಮತ್ತು ಮೈಕ್ರೋಫೋನ್​ ಹಿಡಿದುಕೊಂಡು ಬೀಚ್​ ಸಮೀಪ ನಿಲ್ಲುವ ಯೂಟ್ಯೂಬರ್​ಗಳು, ಬೀಚ್​ಗೆ ಆಗಮಿಸುವವರ ಬಳಿ ವಿವಿಧ ವಿಷಯಗಳ ಬಗ್ಗೆ ಮಾತನಾಡಿಸುತ್ತಾರೆ. ಇದೀದ ಸೆಕ್ಸ್​ ಬಗ್ಗೆ ಮಾತನಾಡಿರುವ ವಿಡಿಯೋ ತುಂಬಾ ವೈರಲ್​ ಆದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಯೂಟ್ಯೂಬ್​ ಚಾನೆಲ್​ ಮಾಲೀಕ ದಿನೇಶ್​ (31)ನನ್ನು ಬಂಧಿಸಿದ್ದಾರೆ. ಅಲ್ಲದೆ, ವಿಡಿಯೋ ಜಾಕಿ ಅಸೆನ್​ ಬಾದ್​ಷಾ (23) ಮತ್ತು ಕ್ಯಾಮೆರಾಮೆನ್​ ಅಜಯ್​ ಬಾಬು (24)ರನ್ನು ಕೆಲವರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದ್ದು, ಸಾರ್ವಜನಿಕ ಅಶ್ಲೀಲತೆ ಮತ್ತು ಲೈಂಗಿಕ ಕಿರುಕುಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೀಚ್​ನಲ್ಲಿ ವಿಡಿಯೋ ಮಾಡಿ ಜನರಿಗೆ ಮುಜುಗರ ಆಗುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಮೀನುಗಾರ ಮಹಿಳೆಯೊಬ್ಬಳು ಪೊಲೀಸರಿಗೆ ನೀಡಿದ ಸೂಚನೆ ಮೇರೆಗೆ ಶಾಸ್ತ್ರಿ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಮುರುಗನ್​ ಮತ್ತು ಇನ್ಸ್​ಪೆಕ್ಟರ್​ ಷಣ್ಮುಗಸುಂದರಂ ಕಾರ್ಯಾಚರಣೆಗೆ ಇಳಿಯುತ್ತಾರೆ. ಬೀಚ್​ ಬಳಿ ಹೋದಾಗ ಇಬ್ಬರು ಯುವಕರು ಕ್ಯಾಮೆರಾ ಮತ್ತು ಮೈಕ್ರೋಫೋನ್​ ಹಿಡಿದುಕೊಂಡಿರುವುದನ್ನು ಗಮನಿಸಿದ್ದಾರೆ. ಇಬ್ಬರನ್ನು ಪ್ರಶ್ನಿಸಿದಾಗ ಇದೊಂದು ಫ್ರ್ಯಾಂಕ್​ ಶೋ (ತಮಾಷೆಗಾಗಿ ಮಾಡುವ ಕಾರ್ಯಕ್ರಮ) ಎಂದು ಸಬೂಬು ನೀಡಿದ್ದಾರೆ. ಸದ್ಯ ಬಂಧಿತರಾಗಿರುವ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿರಿ:ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ಯುವತಿಗಾಗಿ ಮಾರ್ಗ ಮಧ್ಯಯೇ ಕಾದಿದ್ದ ಜವರಾಯ!
ಯೂಟ್ಯೂಬರ್​ಗಳು ತಮಗೆ ಗೊತ್ತಿರುವವರನ್ನೇ ಬೀಚ್​ ಬಳಿ ಕರೆದುಕೊಂಡು ಹೋಗಿ ಮಾತನಾಡಿಸುತ್ತಾರೆ. ಬಳಿಕ ದಾರಿಹೋಕರನ್ನು ತಮ್ಮ ಯೂಟ್ಯೂಬ್​ ಚಾನೆಲ್​ಗೆ ಬೈಟ್​ ನೀಡುವಂತೆ ಮನವಿ ಮಾಡುತ್ತಾರೆ. ಬಳಿಕ ನಿಧಾನವಾಗಿ ಅವರನ್ನು ಉತ್ತೇಜಿಸಿ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಾರೆ. ಹೀಗೆ ಮಾತನಾಡುತ್ತಾ ಸೆಕ್ಸ್​ ಲೈಫ್​ ಬಗ್ಗೆ ಕೇಳುತ್ತಾರೆ ಎಂದು ಶಾಸ್ತ್ರಿ ನಗರ ಪೊಲೀಸರು ತಿಳಿಸಿದ್ದಾರೆ.
ಅದೇ ರೀತಿ ಇತ್ತೀಚೆಗೆ ವೈರಲ್​​ ಆದ ವಿಡಿಯೋದಲ್ಲಿ ಮಹಿಳೆ ಬೇಡವೆಂದರು ಮಾತನಾಡುವಂತೆ ಒತ್ತಾಯಿಸಿದ್ದಾರೆ. ಎಲ್ಲಿಯೂ ಬಹಿರಂಗವಾಗುವುದಿಲ್ಲ ಮತ್ತು 1200 ರೂ. ನೀಡುತ್ತೇವೆಂದು ಆಮಿಷವೊಡ್ಡಿ ಮಾತನಾಡಿಸಿದ್ದಾರೆ. ಯಾವಾಗ ವಿಡಿಯೋ ವೈರಲ್​ ಆಯ್ತೋ ಮಹಿಳೆಯು ಸಹ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ, ವಿಡಿಯೋವನ್ನು ಸ್ಕ್ರಿಪ್ಟ್​ನಂತೆ ಮಾಡಲಾಗುತ್ತದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:ತವರಿಗೆ ಹೋದ ವಧುವಿಗಾಗಿ ಇತ್ತ ವರ ಕಾಯುತ್ತಿದ್ದರೆ, ಅತ್ತ ಆಕೆ ಲವರ್​ ಜತೆ ಎಸ್ಕೇಪ್​!
ಇದೀಗ ಬಂಧಿಸಲಾಗಿರುವ ಯೂಟ್ಯೂಬರ್​ಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯೂಟ್ಯೂಬರ್​ಗಳ ಸಾಧನಗಳನ್ನು ವಶಕ್ಕೆ ಪಡೆಯಲಾಗಿದ್ದು, ಕೆಲವು ಅಶ್ಲೀಲ ವಿಡಿಯೋಗಳನ್ನು ತೆಗೆದುಹಾಕಲು ಸೂಚನೆ ನೀಡಲಾಗಿದೆ. ಅಂದಹಾಗೆ ಒಂದು ವಿಡಿಯೋ ಕೋಟ್ಯಾಂತರ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದವು.(ಏಜೆನ್ಸೀಸ್​)
ಅಂಕಲ್​ ಅಂತ್ಯಸಂಸ್ಕಾರ ಬಿಟ್ಟು ಒಂಟಿಯಾಗಿ ಮನೆಗೆ ಬಂದ ಯುವತಿ: ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!

ನಾನು ರೇಪ್​ ಮಾಡಿಲ್ಲ ಆದ್ರೆ… ಸಚಿವರ ಸ್ಫೋಟಕ ಹೇಳಿಕೆಯಿಂದ ಗಾಯಕಿ ಆರೋಪಕ್ಕೆ ಟ್ವಿಸ್ಟ್​!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:11 + nineteen =
Remember me
