ನವದೆಹಲಿ:ಪ್ರತಿಷ್ಠಿತ ಚೆಸ್ ವಿಶ್ವಕಪ್​ನ ಫೈನಲ್​​ನಲ್ಲಿ ಭಾರತದ ಬಾಲಕ ಪ್ರಜ್ಞಾನಂದ ಚೆಸ್ ವಿಶ್ವಕಪ್​ನ ಫೈನಲ್​ ಆಡಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲಸನ್‌ ಚಾಂಪಿಯನ್‌ ಆಗಿದ್ದು, ಇದರೊಂದಿಗೆ ಚೊಚ್ಚಲ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ ಪ್ರಜ್ಞಾನಂದ ಅವರಿಗೆ ನಿರಾಸೆಯಾಗಿದೆ.
ನಿನ್ನೆ ನಡೆದ ಚೆಸ್ ವಿಶ್ವಕಪ್​ ಫೈನಲ್​ನ 2ನೇ ಆಟವೂ ಸಹ ಡ್ರಾನಲ್ಲಿ ಅಂತ್ಯಗೊಂಡಿತ್ತು. ಭಾರತದ ಯುವ ಪ್ರತಿಭೆ ಆರ್​. ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲಸನ್‌ ಪಂದ್ಯ ಡ್ರಾ ಆದ ಕಾರಣ ಇಂದು ಟೈ ಬ್ರೇಕರ್‌ ಪಂದ್ಯ ನಡೆಯಿತು.  ಮಂಗಳವಾರ ನಡೆದ ಮೊದಲ ಫೈನಲ್‌ ಪಂದ್ಯವೂ ಸಹ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ 2ನೇ ಪಂದ್ಯ ಡ್ರಾ ಆದ ಕಾರಣ ಟೈಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶ ನಿರ್ಧರವಾಗಲಿದೆ ಎಂದು ಹೇಳಲಾಗಿತ್ತು.
🏆 Magnus Carlsen is the winner of the 2023 FIDE World Cup! 🏆
Magnus prevails against Praggnanandhaa in a thrilling tiebreak and adds one more prestigious trophy to his collection! Congratulations! 👏
📷 Stev Bonhage#FIDEWorldCuppic.twitter.com/sUjBdgAb7a
— International Chess Federation (@FIDE_chess)August 24, 2023

ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್​ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್​ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಕೋಟ್ಯಾಂತರ ಭಾರತೀಯ ಪ್ರಾರ್ಥನೆ ಈಡೇರಲಿಲ್ಲ.
ಚೆಸ್ ವಿಶ್ವಕಪ್​ನ ಫೈನಲ್ ಸೋಲಿನ ಹೊರತಾಗಿಯೂ ಆರ್​ ಪ್ರಜ್ಞಾನಂದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಈ ಟೂರ್ನಿಯಲ್ಲಿ ಫೈನಲ್​ ಆಡಿದ ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ 18 ರ ಹರೆಯದ ಯುವ ಚೆಸ್ ಪಟು ಪಾತ್ರರಾಗಿದ್ದಾರೆ.
ರವಿಚಂದ್ರನ್ ಅಭಿನಯದ ಗುರುಬ್ರಹ್ಮ ಸಿನಿಮಾ ನಟಿಗೆ 2ನೇ ಮದುವೆ: 50ನೇ ವಯಸ್ಸಿನಲ್ಲಿ ಮದುವೆಯಾದ್ರೆ ಮಕ್ಕಳು ಹುಟ್ಟಿದರೆ ಅಮ್ಮ, ಅಜ್ಜಿ ಏನು ಕರೆಯುತ್ತಾರೆ? ಎಂದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + three =
Remember me
