ನವದೆಹಲಿ:ಈ ಬಾರಿಯ ಚೆಸ್ ವಿಶ್ವಕಪ್ 2023ಯಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನ ಇಬ್ಬರೂ ಸ್ಪರ್ಧಿಗಳು ಭಾರತೀಯ ಮೂಲದವರು ಎನ್ನುವುದು ವಿಶೇಷ ಸಂಗತಿಯಾಗಿದೆ. ಪ್ರಸ್ತುತ ಅರ್ಜುನ್ ಎರಿಗೈಸಿ ವಿರುದ್ಧ ರಮೇಶ್ ಬಾಬು ಪ್ರಜ್ಞಾನಂದ ಆಡುತ್ತಿದ್ದಾರೆ.
ವಿಶ್ವಕಪ್‍ನ ಟೈ ಬ್ರೇಕರ್‍ನಲ್ಲಿ ಅರ್ಜುನ್ ಎರಿಗೈಸಿ ಇಂದು (ಗುರುವಾರ) ರಮೇಶ್ ಬಾಬು ಪ್ರಗ್ನಾನಂದ ಅವರನ್ನು ಎದುರಿಸುತ್ತಿದ್ದಾರೆ. ಭಾರತದ ಅರ್ಜುನ್ ಎರಿಗೈಸಿ ವಿರುದ್ಧದ ಎರಡು ಪಂದ್ಯಗಳ ಕ್ಲಾಸಿಕಲ್ ಸರಣಿಯ ಮೊದಲ ಪಂದ್ಯದಲ್ಲಿ ಸೋತ ನಂತರ ಪ್ರಜ್ಞಾನಂದ ಮತ್ತೊಮ್ಮೆ ಪುಟಿದೆದ್ದರು. ಇದರಿಂದಾಗಿ ಟೈ-ಬ್ರೇಕರ್ ಪಂದ್ಯ ನಡೆಯುವಂತೆ ಆಗಿದೆ. ಈ ಪಂದ್ಯದಲ್ಲಿ ಸೆಮಿ ಫೈನಲ್‍ಗೆ ಯಾರು ಆಯ್ಕೆ ಆಗಲಿದ್ದಾರೆ ಎಂಬುದನ್ನು ನಿರ್ಧರಿಸಲಿದೆ.
ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ, ಆತ್ಮವಿಶ್ವಾಸದ ಎರಿಗೈಸಿ ವಿರುದ್ಧ ಕಪ್ಪು ಬಣ್ಣದ ಚೆಸ್‍ ಪೀಸ್‍ಗಳಲ್ಲಿ ಆಡಿದ 18 ವರ್ಷದ ಪ್ರಜ್ಞಾನಂದ, ಒತ್ತಡದಲ್ಲಿ ಮುಳುಗಿದ್ದರು. ಆದರೆ 75 ಮೂವ್‍ಗಳ ಆಟದಲ್ಲಿ ಮೇಲುಗೈ ಸಾಧಿಸಿ ಪಂದ್ಯವನ್ನು 1-1 ಮಾಡಿ ಸಮಬಲಗೊಳಿಸಿದರು. ಪ್ರಜ್ಞಾನಂದ ಹೇಳಿಕೊಳ್ಳುವಂತೆ, ವಿಶ್ವಕಪ್‍ನಂತಹ ದೊಡ್ಡ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‍ನಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ವಿರುದ್ಧ ಆಡುವುದು ಕಷ್ಟಕರವಾಗಿದೆ.
ನೀವು ಕೆಳಗಿನ ಬೋರ್ಡ್‍ ಮೂಲಕ ಅರ್ಜುನ್ ವರ್ಸಸ್ ಪ್ರಜ್ಞಾನಂದ ಆಟದಿಂದ ಮೂವ್-ಬೈ-ಮೂವ್ ಆಗಿ ಅನುಸರಿಸಬಹುದು.  ಬೋರ್ಡ್‍ನ ಬಲಭಾಗದಲ್ಲಿರುವ ಸಂಕೇತಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಆಟ ಹೇಗೆಲ್ಲ ಸಾಗುತ್ತಾ ಬಂದಿದೆ ಎನ್ನುವುದನ್ನು ನೀವೂ ನೋಡಬಹುದು. ಎಡಭಾಗದ ಚಿಹ್ನೆಗಳ ಮೇಲೆ ಒತ್ತಿದರೆ ಅರ್ಜುನ್ ಅವರ ಮೂವ್ಗಳನ್ನು ಗಮಣಿಸಬಹುದು. ಬಲಭಾಗದಲ್ಲಿನ ಚಿಹ್ನೆಗಳ ಮೇಲೆ ಒತ್ತಿದರೆ ಪ್ರಜ್ಞಾನಂದ ಅವರ ಮೂವ್ಸ್ ನೋಡಬಹುದು.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − 2 =
Remember me
