ರಾಯ್ಪುರ್:ಛತ್ತೀಸ್​ಗಢದಲ್ಲಿ ಶನಿವಾರ ನಕ್ಸಲ್​ರ ವಿರುದ್ಧ ಕಾರ್ಯಾಚರಣೆ ನಡೆದಾಗಿನಿಂದ ಈವರೆಗೂ 21 ಸೈನಿಕರು ನಾಪತ್ತೆಯಾಗಿದ್ದಾರೆ. ಸುಕ್ಮಾ-ಬಿಜಾಪುರ್​ ಗಡಿ ಭಾಗದಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
24 ಸೈನಿಕರು ಗಾಯಗೊಂಡಿದ್ದು, ಅವರನ್ನು ಬಿಜಾಪುರ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 7 ಮಂದಿಯನ್ನು ರಾಯ್ಪುರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಶಿಫಾರಸು ಮಾಡಲಾಗಿದೆ.
ಭದ್ರತಾ ಸಿಬ್ಬಂದಿಯ ಸಾವನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಖಂಡಿಸಿದ್ದಾರೆ. ಶಾಂತಿ ಮತ್ತು ಅಭಿವೃದ್ಧಿಯ ಶತ್ರುಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ನಕ್ಸಲರಿಗೆ ಷಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿರಿ:ಸಮಾಜದಲ್ಲಿ ಹೆಚ್ಚಾಗುತ್ತಿದೆ ಕುರಿ ಮೆಂಟಾಲಿಟಿ; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟಿ ಸುಧಾರಾಣಿ
ಶನಿವಾರ ಪ್ರಧಾನಿ ನರೇಂದ್ರ ಮೋದಿಯು ಸಹ ಗಾಯಗೊಂಡ ಭದ್ರತಾ ಸಿಬ್ಬಂದಿಯ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಅಲ್ಲದೆ, ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಮಡಿದ ಯೋಧರ ಕುಟುಂಬದ ಜತೆ ನಾವಿರುತ್ತೇವೆಂದು ಟ್ವೀಟ್​ ಮೂಲಕ ಧೈರ್ಯ ತುಂಬಿದ್ದಾರೆ.
ನಿನ್ನೆ ಬಿಜಾಫುರದ ಸಿಲಗರ್ ಅರಣ್ಯದಲ್ಲಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮುಖಾಮುಖಿಯಾದ ಯೋಧರು ಹಾಗೂ ನಕ್ಸಲ್​ರು ಭೀಕರ ಗುಂಡಿನ ಕಾಳಗ ನಡೆಸಿದ್ದಾರೆ. ನಿನ್ನೆಯಿಂದ 21 ಯೋಧರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಮಾವೋವಾದಿಗಳ ಅಟ್ಟಹಾಸ: ಕೋಬ್ರಾ ಪಡೆಯ ಐವರು ಯೋಧರು ಹುತಾತ್ಮ

ನಿರ್ಲಕ್ಷಿಸಿದರೆ ಸುರಕ್ಷತೆ ಪ್ರಾಣಕ್ಕೆ ಬರಲಿದೆ ಕುತ್ತು; ಗಣಿ ಜಾಗೃತಿ ದಿನ

ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
