ಛತ್ತೀಸ್‌ಗಢ:ಪೊಲೀಸ್ ಅಧಿಕಾರಿ ತಂದೆಯ ಮರಣದ ನಂತರ ಛತ್ತೀಸ್‌ಗಢದಲ್ಲಿ 5 ವರ್ಷದ ನಮನ್‌ ರಾಜ್​ವಾಡೆ ಎಂಬ ಬಾಲಕ ಪೊಲೀಸ್ ಕೆಲಸ ಪಡೆದುಕೊಂಡಿದ್ದಾರೆ. ಬಾಲಕನನ್ನು ಮಕ್ಕಳ ಕಾನ್‌ಸ್ಟೆಬಲ್ ಆಗಿ ನಿಯೋಜಿಸಲಾಗಿದೆ.
ಯುಕೆಜಿ ವಿದ್ಯಾರ್ಥಿಯಾಗಿರುವ ನಮನ್ ರಾಜ್‌ವಾಡೆ ಅವರು ಛತ್ತೀಸ್‌ಗಢದ ಸರ್ಗುಜಾದಲ್ಲಿ ಮಕ್ಕಳ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದಾರೆ. ಸರ್ಗುಜಾ ಜಿಲ್ಲೆಯ 5 ವರ್ಷದ ನಮನ್ ಇಂದು ಮಕ್ಕಳ ಕಾನ್‌ಸ್ಟೇಬಲ್​ ಆಗಿ ನೇಮಕಗೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಾವನಾ ಗುಪ್ತಾ ಅವರು ನಮನ್‌ಗೆ ನೇಮಕಾತಿ ಪತ್ರವನ್ನುನೀಡಿದ್ದಾರೆ.
ಇದನ್ನೂ ಓದಿ:ಏಕಕಾಲದಲ್ಲಿ ಅಜ್ಜಿ, ಅಮ್ಮ, ಅತ್ತೆ ಪ್ರೆಗ್ನೆಂಟ್ ; ಫೋಟೋಶೂಟ್​​ ಅಸಲಿ ಕಥೆ ಏನು..?ಎರಡು ವರ್ಷಗಳ ಹಿಂದೆ 2021 ಸೆಪ್ಟೆಂಬರ್ 3ರಂದು, ನಮನ್ ತಂದೆ ರಾಜ್‌ಕುಮಾರ್ ರಾಜ್‌ವಾಡೆ ಕಾನ್‌ಸ್ಟೇಬಲ್ ಆಗಿದ್ದು, ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಮೃತ ಕಾನ್‌ಸ್ಟೇಬಲ್ ಪತ್ನಿ ಹಾಗೂ ಪುತ್ರ ನಮನ್‌ನನ್ನು ಅಗಲಿದ್ದರು.
ಇದನ್ನೂ ಓದಿ:ಹಾಲಿಗಾಗಿ ಅಂಗಡಿಗೆ ಹೋಗಬೇಕಾಗಿಲ್ಲ..ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಫ್ರೆಶ್‌ ಮಿಲ್ಕ್ಎಸ್‌ಪಿ ಭಾವನಾ ಗುಪ್ತಾ ಮಾತನಾಡಿ, ನೌಕರರು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಅನುಕಂಪದ ನೇಮಕಾತಿಗೆ ಅವಕಾಶವಿದೆ, ಆದರೆ ಮನೆಯಲ್ಲಿ ವಯಸ್ಕ ಸದಸ್ಯರಿಲ್ಲದ ಕಾರಣ 5 ವರ್ಷದ ಮಗನಿಗೆ ಅನುಕಂಪದ ನೇಮಕಾತಿ ನೀಡಲಾಗಿದೆ. ನಮನ್ 18 ವರ್ಷಗಳನ್ನು ಪೂರ್ಣಗೊಳಿಸಿದ ತಕ್ಷಣ ಪೂರ್ಣ ಸ್ಥಾನಮಾನವನ್ನು ಪಡೆಯಲಿದ್ದಾನೆ. ನಿಯಮಾನುಸಾರ ಹಾಜರಾತಿ ಮತ್ತಿತರ ಕೆಲಸಕ್ಕೆ ಬಾಲಕ ಇಲಾಖೆಗೆ ಬರಬೇಕಾಗುತ್ತದೆ ಎಂದಿದ್ದಾರೆ.
4.5 ಲಕ್ಷ ರೂ.ಗೆ ನವಜಾತ ಶಿಶುವನ್ನು ಮಾರಾಟ ಮಾಡಿದ ತಾಯಿ, 11 ಮಂದಿ ಅರೆಸ್ಟ್​​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
