ಛತ್ತೀಸ್‌ಗಢ:ಮಧ್ಯರಾತ್ರಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ನಟ ಸೂರಜ್ ಮೆಹರ್ (40) ಛತ್ತೀಸ್‌ಗಢದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ನಟ ಸೂರಜ್ ಮೆಹರ್ (40) ಮೃತ. ಸೂರಜ್ ಮೆಹರ್ ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಶೂಟಿಂಗ್​​ ಮುಗಿಸಿ ವಾಪಸ್​​ ಆಗುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಒಂಡಿದ್ದಾರೆ. ಸೂರಜ್ ಅವರ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ನಡೆಯಲಿದೆ. ಒಡಿಶಾದಲ್ಲಿ ನಡೆಯಬೇಕಿದ್ದ ಸೂರಜ್ ಮೆಹರ್ ನಿಶ್ಚಿತಾರ್ಥದ ದಿನವೇ ಈ ಅವಘಡ ಸಂಭವಿಸಿದೆ.
ವರದಿಗಳ ಪ್ರಕಾರ, ಸೂರಜ್ ಅವರಿಗೆ 40 ವರ್ಷ ವಯಸ್ಸಾಗಿತ್ತು. ಸೂರಜ್ ಮೆಹರ್ ಅಖ್ರಿ ಫೈಸ್ಲಾ ಚಿತ್ರೀಕರಣ ಮುಗಿಸಿ ಬಿಲಾಸ್‌ಪುರದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಅವರ ಮುಂದೆ ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸೂರಜ್ ಮೆಹರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಮತ್ತು ವಾಹನದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೂರಜ್ ಸಾವಿನಿಂದ ಅವರ ಹಳ್ಳಿಯಲ್ಲಿ ದುಃಖದ ಛಾಯೆ ಆವರಿಸಿದೆ. ಸೂರಜ್ ಮೆಹರ್ ಅವರ ನಿಶ್ಚಿತಾರ್ಥ ಇಂದು ಒಡಿಶಾದಲ್ಲಿ ನಡೆಯಬೇಕಿತ್ತು. ಕೆಲವೇ ಗಂಟೆಗಳಲ್ಲಿ ಶುಭ ಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಭಾರೀ ದುರಂತ ಸಂಭವಿಸಿದೆ. ಇದರಿಂದ ಅವರ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?… ಚಾಲಕನ ನಿರ್ಲಕ್ಷ್ಯವೇ? ಆ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ನಟನ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ
ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 18 =
Remember me
