ನವದೆಹಲಿ: ದೇಶದ ಬಹುಪಾಲು ರಾಜ್ಯಗಳಲ್ಲಿ ಕರೊನಾ ಮಹಾಮಾರಿ ನಿಯಂತ್ರಣಕ್ಕೆ ಬಾರದ ಈ ಸನ್ನಿವೇಶದಲ್ಲಿ ಆರ್ಥಿಕವಾಗಿ ಹಿಂದುಳಿದ, ಗ್ರಾಮಾಂತರ ಪ್ರದೇಶಗಳು ಹೆಚ್ಚಿರುವ ಮತ್ತು ಆದಿವಾಸಿಗಳ ರಾಜ್ಯ ಎಂದೇ ಗುರುತಿಸಿಕೊಂಡಿರುವ ಛತ್ತೀಸ್​ಗಢ ಕರೊನಾ ನಿಯಂತ್ರಣದಲ್ಲಿ ಹುಬ್ಬೇರಿಸುವ ಸಾಧನೆ ಮಾಡುತ್ತಿದೆ. ರಾಜ್ಯದಲ್ಲಿ ಈವರೆಗೆ ಕರೊನಾ ವೈರಾಣು ಸೋಂಕಿತರಾಗಿರುವ 37 ಮಂದಿಯಲ್ಲಿ 34 ಮಂದಿ ಗುಣಮುಖರಾಗಿದ್ದು, ಉಳಿದ ಮೂವರೂ ಬರುವ ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಎಂದರೆ ಏ.27ರ ತನಕ ರಾಜ್ಯದಲ್ಲಿ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿಲ್ಲ. ಅಷ್ಟರಮಟ್ಟಿಗೆ ಆರೋಗ್ಯ ಕೇಂದ್ರಗಳು ಕರೊನಾ ಸಂತ್ರಸ್ತರನ್ನು ಕಾಪಾಡುವಲ್ಲಿ ಯಶಸ್ವಿಯಾಗಿವೆ. ಸರ್ಕಾರ ಕೂಡ ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜನಜಾಗೃತಿ ಮೂಡಿಸಿದೆ. ಆದಿವಾಸಿ ಪ್ರದೇಶಗಳಿಗೂ ಕರೊನಾ ಸೋಂಕು ತಗುಲದಂತೆ ಎಚ್ಚರ ವಹಿಸಲಾಗಿದೆ. ಪಕ್ಕದ ರಾಜ್ಯ ಮಧ್ಯಪ್ರದೇಶದಲ್ಲಿ ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯೆ ದಿನೇದಿನೆ ಏರುತ್ತಿರುವಾಗ ಸಿಎಂ ಭೂಪೇಶ್ ಭಾಗೆಲ್ ನೇತೃತ್ವದ ಛತ್ತೀಸ್ ಗಢ ಸರ್ಕಾರ ಕಂಡುಕೊಂಡ ರಕ್ಷಣೆಯ ಹಾದಿ ಇತರ ರಾಜ್ಯಗಳಿಗೂ ಮಾದರಿ.
ದೇಶದಲ್ಲಿ ಕರೊನಾ ಸೋಂಕಿನ ಮೊದಲ ಪ್ರಕರಣ ದಾಖಲಾಗುವ ಮುನ್ನವೇ ಕ್ರಮಕೈಗೊಳ್ಳಲು ಆರಂಭಿಸಿದ್ದ ಛತ್ತೀಸಗಢ, ಕರೊನಾ ನಿರ್ವಹಣೆಗೆ ಜ.21ಕ್ಕೇ ತಜ್ಞರ ತಂಡವೊಂದನ್ನು ರಚಿಸಿತ್ತು. ಜ.28ರಂದೇ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸ್ಕ್ರೀನಿಂಗ್ ಟೆಸ್ಟ್ ಆರಂಭಿಸಲಾಗಿತ್ತು. ವಿದೇಶ ಪ್ರವಾಸ ಹಿನ್ನೆಲೆಯ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಸುಮಾರು 76000 ಮಂದಿಗೆ ಹೋಮ್ ಕ್ವಾರಂಟೈನ್​ಗೆ ಆದೇಶಿಸಲಾಯಿತು. ಕೇಂದ್ರ ಸರ್ಕಾರ ಲಾಕ್​ಡೌನ್ ಘೊಷಿಸಿದ ಮೇಲೆ ವಲಸೆ ಕಾರ್ವಿುಕರು ರಾಜ್ಯದಲ್ಲೇ ಉಳಿದುಕೊಳ್ಳಬೇಕು ಎಂಬ ನಿರ್ಧಾರ ತೆಗೆದುಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರ, 446 ಪರಿಹಾರ ಕೇಂದ್ರಗಳನ್ನು ತೆರೆಯಿತು. ಸುಮಾರು 10,500 ವಲಸೆ ಕಾರ್ವಿುಕರು ಈ ಕೇಂದ್ರಗಳಲ್ಲಿ ಉಳಿದುಕೊಂಡಿದ್ದು, ಲಾಕ್​ಡೌನ್ ಹಿಂಪಡೆದುಕೊಂಡ ಬಳಿಕವಷ್ಟೇ ತಮ್ಮ ರಾಜ್ಯಗಳಿಗೆ ತೆರಳಬಹುದು ಎಂದು ಸೂಚಿಸಲಾಗಿತ್ತು.
ಆರಂಭಿಕ ಹಂತದಲ್ಲಿ ವಲಸೆ ಕಾರ್ವಿುಕರು ಊರಿಗೆ ಹೋಗುತ್ತೇವೆ ಎಂದು ಹಠ ಹಿಡಿದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಶಾಲಾ-ಕಾಲೇಜುಗಳಲ್ಲಿ ತೆರೆಯಲಾಗಿದ್ದ ಈ ಪರಿಹಾರ ಕೇಂದ್ರಗಳಲ್ಲಿ ದೊಡ್ಡ ಟಿವಿ ಪರದೆಗಳನ್ನು ಹಾಕಿ ಜನರಿಗೆ ಪೂರಕ ವ್ಯವಸ್ಥೆಗಳನ್ನು ಒದಗಿಸಲಾಯಿತು. ರಾಜ್ಯದಲ್ಲಿ ಮಾ.20ರಂದು ರಾಜ್ಯದಲ್ಲಿ ಮೊದಲ ಕರೊನಾ ಕೇಸು ಬೆಳಕಿಗೆ ಬಂದಿತ್ತು.
ಲಂಡನ್ ಗೆ ಭೇಟಿ ನೀಡಿ ವಾಪಸಾಗಿದ್ದ 24 ವರ್ಷದ ಯುವತಿಯಲ್ಲಿ ಕರೊನಾ ಸೋಂಕಿರುವುದು ದೃಢವಾಗಿತ್ತು. ರಾಯ್ಪುರ ನಿವಾಸಿಯಾಗಿದ್ದ ಆಕೆಯನ್ನು ಅಲ್ಲಿನ ಏಮ್ಸ್​  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಅಕ್ಕಿ ವಿತರಣೆ:ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬಗಳಿಗೆ ಏಪ್ರಿಲ್-ಮೇ ತಿಂಗಳಿಗೆ ಅನ್ವಯಿಸುವಂತೆ ಒಟ್ಟು 70 ಕೆಜಿ ಅಕ್ಕಿ ರಾಜ್ಯ ಸರ್ಕಾರ ಉಚಿತವಾಗಿ ವಿತರಿಸಿದೆ. ಸುಮಾರು 55 ಲಕ್ಷ ಕುಟುಂಬಗಳು ಈ ಲಾಭ ಪಡೆದುಕೊಂಡಿವೆ. ಹಾಗೇ ಬಡತನ ರೇಖೆಗಿಂತ ಮೇಲೆ ಇರುವ 8.8 ಲಕ್ಷ ಕುಟುಂಬಗಳಿಗೆ ಕಡಿಮೆ ದರದಲ್ಲಿ ಇದೇ ಪ್ರಮಾಣದಲ್ಲಿ ನೀಡಿದೆ. ಅಂದಾಜು 24 ಲಕ್ಷ ಮಂದಿಯ ಮನೆಮನೆಗೆ ಹೋಗಿ ಪ್ರತಿ ದಿನವೂ ತಯಾರಿಸಿದ ಆಹಾರವನ್ನು ಪೂರೈಸಲಾಗುತ್ತಿದೆ.
ವಲಸಿಗರಿಗೆ ಸಕ್ರಿಯ ಚಟುವಟಿಕೆ
ಪರಿಹಾರ ಕೇಂದ್ರಗಳಲ್ಲಿರುವ ವಲಸಿಗರ ಮಾನಸಿಕ-ದೈಹಿಕ ಆರೋಗ್ಯ ಕಾಪಾಡಲು ಸರ್ಕಾರ ಅವರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿದೆ. ಕಾಲಕಾಲಕ್ಕೆ ಕೌನ್ಸೆಲಿಂಗ್, ಒಳ-ಹೊರಾಂಗಣ ಆಟಗಳ ಆಯೋಜನೆ, ಸಂವಾದ ಸೇರಿ ನಿತ್ಯವೂ ಒಂದಲ್ಲ ಒಂದು ಚಟುವಟಿಕೆ ಮೂಲಕ ವಲಸಿಗರ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಏತನ್ಮಧ್ಯೆ, ಕೋಟಾ, ರಾಜಸ್ತಾನ ಸೇರಿ ಪಕ್ಕದ ಬೇರೆ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ರಾಜ್ಯದ ವಲಸೆ ಕಾರ್ವಿುಕರನ್ನು ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ಅನುಮತಿ ಪಡೆದು ಬಸ್​ಗಳನ್ನೂ ಕಳುಹಿಸಿಕೊಡಲಾಗುತ್ತಿದೆ.
ಮೈಸೂರಿನಿಂದ ಚಿಕ್ಕಮಗಳೂರಿಗೆ ನಡ್ಕೊಂಡು ಬಂದ ಯುವಕನ ವಿಷಸೇವನೆ ಪ್ರಹಸನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
