ಛತ್ತೀಸ್‌ಗಢ: ಛತ್ತೀಸ್‌ಗಢದ ಸುದ್ದಿ ನಿರೂಪಕಿ ಸುಲ್ತಾನಾ ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಸುದ್ದಿ ನಿರೂಪಕಿ ಸಲ್ಮಾ ಸುಲ್ತಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಶೋಧ ನಡೆಸುತ್ತಿದ್ದ ವೇಳೆ ಛತ್ತೀಸ್‌ಗಢದ ಕೊರ್ಬಾ-ದರ್ರಿ ರಸ್ತೆಯಲ್ಲಿ ಪಾಲಿಥಿನ್‌ನಲ್ಲಿ ಸುತ್ತಿದ ಶವ ಪತ್ತೆಯಾಗಿದೆ.
ಮೃತದೇಹದೊಂದಿಗೆ ಒಂದು ಜೊತೆ ಚಪ್ಪಲಿಯೂ ಪತ್ತೆಯಾಗಿದೆ. ಆದ್ರೆ ಕುಟುಂಬಸ್ಥರು ಶವವನ್ನು ಗುರುತಿಸಲು ಸಾಧ್ಯವಾಗಿಲ್ಲ.ಅಕ್ಟೋಬರ್ 21, 2018 ರಂದು, ಅವರು ಕುಸ್ಮುಂಡಾದಿಂದ ಕೊರ್ಬಾಗೆ ಕೆಲಸದ ನಿಮಿತ್ತ ಬಂದಿದ್ದರು. ಆದರೆ, ಆಕೆ ಮನೆಗೆ ಹಿಂತಿರುಗಿರಲಿಲ್ಲ. ಸಲ್ಮಾ ಸುಲ್ತಾನಾ ಕೊರ್ಬಾದ ಉಪನಗರ ಕುಸ್ಮುಂಡಾ ನಿವಾಸಿ. ಅವರು ಸುದ್ದಿ ವರದಿ, ಸ್ಟೇಜ್ ಶೋಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದರು.
ಕಾಣೆಯಾದ ದೂರಿನ ನಂತರ ಅವರ ಹುಡುಕಾಟವು ದಿನಗಟ್ಟಲೆ ನಡೆಯಿತು, ಆದರೆ ಅವರು ಪತ್ತೆಯಾಗಲಿಲ್ಲ. ನಂತರ ತನಿಖೆ ವೇಳೆ ಸಲ್ಮಾ ಕೊರ್ಬಾದ ಬ್ಯಾಂಕ್‌ನಿಂದ ಸಾಲ ಪಡೆದಿದ್ದು, ಅದನ್ನು ಯುವಕನೊಬ್ಬ 2018ರವರೆಗೆ ಮರುಪಾವತಿ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಆದರೆ, 2019ರ ನಂತರ ಸಾಲ ಮರುಪಾವತಿ ನಿಂತಿತ್ತು. ಆಕೆಯ ಕುಟುಂಬಸ್ಥರು ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.
ಐದು ವರ್ಷಗಳ ಹಿಂದೆ ಸಲ್ಮಾಳನ್ನು ಕೊಲೆ ಮಾಡಿ ಶವವನ್ನು ಕೊರ್ಬಾ-ದರ್ರಿ ರಸ್ತೆಯಲ್ಲಿ ಹೂಳಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈಗ ಶವ ಸಿಕ್ಕಿದ್ದು ಹೆಚ್ಚಿನ ಮಾಹಿತಿ ಇನ್ನೇನು ಲಭ್ಯವಾಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
