ಛತ್ತೀಸಗಢ:ವಿವಾಹಿತ ಮಹಿಳೆಯರು ಮತ್ತು ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ ಆರ್ಥಿಕ ನೆರವು, ಕ್ವಿಂಟಲ್‌ಗೆ 3,100 ರೂ.ಗೆ ಭತ್ತ ಖರೀದಿ ಮತ್ತು ಬಡ ಕುಟುಂಬಗಳಿಗೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡುವುದು ಛತ್ತೀಸ್‌ಗಢದ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಗೊಂಡ ಭರವಸೆಗಳಾಗಿವೆ.
ಇದನ್ನೂ ಓದಿ:ಬೆರಳು ಮುದ್ರೆಗಳ ಗುರುತುಗಳನ್ನು ಕಳ್ಳತನ ಮಾಡಿ 10 ಸಾವಿರ ರೂ. ವಂಚನೆ
ಎರಡು ವರ್ಷಗಳಲ್ಲಿ ಖಾಲಿಯಿರುವ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ರಾಜ್ಯದ ಜನರನ್ನು ಕರೆದುಕೊಂಡು ಹೋಗುವುದು ಕೂಡ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಭರವಸೆಗಳಲ್ಲಿ ಒಂದಾಗಿದೆ.
ರಾಯಪುರದಲ್ಲಿರುವ ಕೇಸರಿ ಪಕ್ಷದ ರಾಜ್ಯ ಕಚೇರಿ ಕುಶಾಭೌ ಠಾಕ್ರೆ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘ಛತ್ತೀಸ್‌ಗಢ 2023 ಮೋದಿ ಗ್ಯಾರಂಟಿ’ ಶೀರ್ಷಿಕೆಯ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಇದನ್ನೂ ಓದಿ:ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಹೋಗಿ ಕೋಟಿ ರೂ. ಕಳೆದುಕೊಂಡ ವ್ಯಕ್ತಿ
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್​ ಶಾ, “ಚುನಾವಣಾ ಪ್ರಣಾಳಿಕೆಯು ಬಿಜೆಪಿಯ ಪ್ರಣಾಳಿಕೆ ಮಾತ್ರವಲ್ಲ, ನಮಗೆ ‘ಸಂಕಲ್ಪ ಪತ್ರ’ ಎಂದು ಹೇಳಿದರು. 15 ವರ್ಷಗಳ ಬಿಜೆಪಿ ಆಡಳಿತದಲ್ಲಿ (2003-2018) ಛತ್ತೀಸ್‌ಗಢವನ್ನು ಹಿಂದುಳಿದ ರಾಜ್ಯದಿಂದ ಉತ್ತಮ ರಾಜ್ಯವಾಗಿ ಪರಿವರ್ತಿಸಲಾಗಿದೆ. ಈಗ ಬಿಜೆಪಿ ಪರವಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ, ನಾವು ಅದನ್ನು ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಕೆಲಸ ಮಾಡುತ್ತೇವೆ” ಎಂದರು,(ಏಜೆನ್ಸೀಸ್).
IPL: 5 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಸೌದಿ ಅರೇಬಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
