ರಾಯ್ಪುರ:ಇದು ಪ್ರೇಮಿಗಳ ವಾರವಂತೆ. ಚಾಕೋಲೇಟ್​ ಡೇ, ಪ್ರಾಮಿಸ್​ ಡೇ, ಹಗ್​ ಡೇ ಎಂದು ಪ್ರೇಮಿಗಳು ವಿಶೇಷ ದಿನಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಏನೇನೋ ಗಿಫ್ಟ್​ಗಳನ್ನು ಕೊಟ್ಟುಕೊಂಡು ಪರಸ್ಪರ ಪ್ರೀತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಪ್ರಾಮಿಸ್​ ಡೇ ಅಂದು ತಾನು ಮಾಡಿದ ಪ್ರೀತಿಯ ನಿವೇದನೆಯನ್ನು ಒಪ್ಪದ ಯುವತಿಗೆ ಯುವಕನೊಬ್ಬ ಸಾವಿನ ಶಿಕ್ಷೆಯನ್ನು ನೀಡಿರುವ ಘಟನೆ ಛತ್ತೀಸಗಢದ ಮಹಾಸಮುಂದ್​ನಲ್ಲಿ ನಡೆದಿದೆ.
ರೂಪಾ ಮತ್ತು ಚಂದ್ರಶೇಖರ್​ ಮೊದಲನಿಂದಲೂ ಪರಿಚಯಸ್ಥರಾಗಿದ್ದರು. ರೂಪಾ, ಚಂದ್ರಶೇಖರ್​ನನ್ನು ಸ್ನೇಹಿತನಂತೆ ಭಾವಿಸಿದ್ದಳು. ಆದರೆ ಚಂದ್ರಶೇಖರ್​ ಆಕೆಯನ್ನು ಪ್ರೀತಿಸುತ್ತಿದ್ದನಂತೆ. ಪ್ರೀತಿಯನ್ನು ಹೇಳಿಕೊಳ್ಳಲು ಸರಿಯಾದ ದಿನಕ್ಕಾಗಿ ಕಾದಿದ್ದ ಆತ, ಪ್ರಾಮಿಸ್​ ಡೇ (ಫೆಬ್ರವರಿ 12) ಅಂದು ಪ್ರೀತಿ ಹೇಳಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ಅದರಂತೆ ಆ ದಿನ ರೂಪಾಗಾಗಿ ಕಾದು ಕುಳಿತಿದ್ದಾನೆ.
ಶುಕ್ರವಾರದಂದು ರೂಪಾ ತನ್ನ ಸೋದರಿ ಹೇಮಲತಾ ಜತೆ ಔಷಧ ಕೊಳ್ಳಲೆಂದು ಮಾರುಕಟ್ಟೆಗೆ ಬಂದಿದ್ದಾಳೆ. ಆಕೆಗಾಗೇ ಕಾದು ಕುಳಿತಿದ್ದ ಚಂದ್ರಶೇಖರ್​, ತನ್ನ ಇಬ್ಬರು ಸ್ನೇಹಿತರೊಂದಿಗೆ ಆಕೆಯ ಬಳಿ ಬಂದಿದ್ದಾನೆ. ನಾನು ನಿನ್ನ ಪ್ರೀತಿಸುತ್ತೇನೆ ಎಂದು ಹೇಳಿದ್ದಾನೆ. ಆದರೆ ರೂಪಾ ಆ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಇದರಿಂದಾಗಿ ಸಿಟ್ಟಿಗೆದ್ದ ಚಂದ್ರಶೇಖರ್​ ತನ್ನ ಬಳಿ ಇದ್ದ ಪಿಸ್ತೂಲನ್ನು ಹೊರ ತೆಗೆದು, ರೂಪಾಳ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡಿನ ಹೊಡೆತಕ್ಕೆ ರೂಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಅದನ್ನು ಕಂಡು ಭಯಗೊಂಡ ಚಂದ್ರಶೇಖರ್​ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸ್ವಲ್ಪ ಸಮಯದಲ್ಲಿ ಆರೋಪಿಯೇ ಬಂದು ಪೊಲೀಸರ ಎದುರು ಶರಣಾಗಿದ್ದಾನೆ. ಇದೀಗ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ದೇಹವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಅಪ್ರಾಪ್ತ ಮಗಳನ್ನೇ ರೇಪ್​ ಮಾಡಿ ಓಡಿ ಹೋದ ಅಪ್ಪ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಅಮ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 5 =
Remember me
